Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

ಭಾರತದ ವಾಣಿಜ್ಯ ವಾಹನ ವಿಭಾಗದಲ್ಲಿ ಇವಿ ವಾಹನಗಳ ಅಳವಡಿಕೆಯನ್ನು ತ್ವರಿತಗೊಳಿಸಲು ಗ್ರಾಹಕ ಸ್ನೇಹಿ ಕಸ್ಟಮೈಸ್ಡ್ ಲೀಸಿಂಗ್ ಸೌಲಭ್ಯ ಒದಗಿಸಲಿರುವ ನೂತನ ಪಾಲುದಾರಿಕೆ 

Dhrishya News by Dhrishya News
21/08/2026
in ಸುದ್ದಿಗಳು
0
ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ
0
SHARES
3
VIEWS
Share on FacebookShare on Twitter

ಬೆಂಗಳೂರು, 21 ಆಗಸ್ಟ್ 2026: ದೇಶದ ಭಾರಿ ವಾಣಿಜ್ಯ ವಾಹನಗಳ ವಿಭಾಗದ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿರುವ ಪ್ರಸಿದ್ಧ ಇವಿ ಲೀಸಿಂಗ್ ವೇದಿಕೆಯಾದ ಡ್ರಿವನ್, ಭಾರತೀಯ ಮಾರುಕಟ್ಟೆಯಲ್ಲಿ ವಾಹನ ಸಮೂಹ ನಿರ್ವಾಹಕರಿಗೆ ಲೀಸಿಂಗ್ ಆಧಾರದ ಮೇಲೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ನಿಯೋಜಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಜೊತೆಗೆ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಅಧಿಕೃತವಾಗಿ ಸಹಿ ಹಾಕಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ, ಟಾಟಾ ಮೋಟಾರ್ಸ್‌ ನ ಅತ್ಯಾಧುನಿಕ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಸರಣಿಗೆ ಡ್ರಿವನ್ ಸಂಸ್ಥೆಯು ಸೂಕ್ತ ಕಸ್ಟಮೈಸ್ಡ್ ಲೀಸಿಂಗ್ ಪರಿಹಾರಗಳನ್ನು ಒದಗಿಸಲಿದೆ. ಇದರಿಂದಾಗಿ ವಾಹನ ಸಮೂಹ ನಿರ್ವಾಹಕರು ಅತ್ಯಂತ ಸರಳ, ಸುಲಭ ಹಾಗೂ ಹೊಂದಿಕೊಳ್ಳುವ ಹಣಕಾಸು ಪರಿಹಾರಗಳ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಸುಲಲಿತವಾಗಿ ಬದಲಾಗಲು ಅನುಕೂಲವಾಗಲಿದೆ.

ಡ್ರಿವನ್ ಸಂಸ್ಥೆಯು ವಾಣಿಜ್ಯ ವಾಹನ ಸಮೂಹ ನಿರ್ವಾಹಕರ ಪ್ರತಿಯೊಂದು ಅಗತ್ಯಕ್ಕೂ ತಕ್ಕಂತೆ ವಿಶೇಷ ಆಪರೇಟಿಂಗ್ ಲೀಸ್ ಪರಿಹಾರಗಳನ್ನು ರೂಪಿಸಿ ಒದಗಿಸುತ್ತದೆ. ಹಣಕಾಸು ನೆರವು, ವಾಹನಗಳ ನಿಯೋಜನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳಲ್ಲಿ ದೀರ್ಘಕಾಲದಿಂದಲೂ ಎದುರಾಗುತ್ತಿದ್ದ ಪ್ರಮುಖ ಅಂತರಗಳನ್ನು ಯಶಸ್ವಿಯಾಗಿ ನೀಗಿಸುವ ಮೂಲಕ, ವಿದ್ಯುತ್ ವಾಹನಗಳ ಬಳಕೆಯನ್ನು ಅತ್ಯಂತ ಸರಳ ಹಾಗೂ ಹೆಚ್ಚು ಪ್ರಾಯೋಗಿಕವಾಗಿಸುತ್ತಿದೆ. ಇದು ಭಾರತದಾದ್ಯಂತ ವಾಣಿಜ್ಯ ವಾಹನ ಸಮೂಹದ ವಿದ್ಯುದ್ದೀಕರಣ ಪ್ರಕ್ರಿಯೆಯನ್ನು ಗಣನೀಯವಾಗಿ ವೇಗಗೊಳಿಸುತ್ತಿದೆ.

ಟಾಟಾ ಮೋಟಾರ್ಸ್ ಸಂಸ್ಥೆಯು ದೇಶದಲ್ಲಿಯೇ ಅತ್ಯಂತ ವಿಸ್ತಾರವಾದ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಪೋರ್ಟ್‌ ಫೋಲಿಯೋ ಹಾಗೂ ವಿದ್ಯುದ್ದೀಕರಣವನ್ನು ಪ್ರಾಯೋಗಿಕ ಮತ್ತು ಲಾಭದಾಯಕವಾಗಿಸುವ ಬಲಿಷ್ಠ ಪರಿಸರ ವ್ಯವಸ್ಥೆಯೊಂದಿಗೆ ವಾಣಿಜ್ಯ ಸಂಚಾರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ವಾಹನದ ಸಂಪೂರ್ಣ ಜೀವಿತಾವಧಿಯಲ್ಲಿ ಅತ್ಯುನ್ನತ ಕಾರ್ಯಕ್ಷಮತೆ, ರನ್ -ಟೈಮ್ (ಅಪ್‌ ಟೈಮ್), ಚಾರ್ಜಿಂಗ್ ಮತ್ತು ಸುಲಭ ಹಣಕಾಸು ವ್ಯವಸ್ಥೆಯನ್ನು ಅತ್ಯುತ್ತಮವಾಗಿಸಲು ಕಂಪನಿಯು ಫ್ಲೀಟ್ ಮಾಲೀಕರೊಂದಿಗೆ ನಿರಂತರವಾಗಿ ಮತ್ತು ನಿಕಟವಾಗಿ ಶ್ರಮಿಸುತ್ತಿದೆ. ಇವಿ ವಾಹನಗಳ ಬಳಕೆ ಹೆಚ್ಚುತ್ತಿರುವಂತೆ, ಗ್ರಾಹಕರು ಶೂನ್ಯ- ಹೊರಸೂಸುವಿಕೆಯ ಪರಿಸರ ಸ್ನೇಹಿ ಸಂಚಾರಕ್ಕೆ ಸಂಪೂರ್ಣ ವಿಶ್ವಾಸದಿಂದ ಮುನ್ನಡೆಯಲು ಸಮಗ್ರವಾದ ಸಂಪೂರ್ಣ ಪರಿಹಾರಗಳನ್ನು ತಲುಪಿಸುವತ್ತ ಟಾಟಾ ಮೋಟಾರ್ಸ್ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಈ ಮಹತ್ವದ ಪಾಲುದಾರಿಕೆಯ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್‌ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಹಾಗೂ ಬಿಸಿನೆಸ್ ಹೆಡ್ ಶ್ರೀ ರಾಜೇಶ್ ಕೌಲ್ ಅವರು , “ಟಾಟಾ ಮೋಟಾರ್ಸ್ ಪರಿಸರಸ್ನೇಹಿ ಮತ್ತು ಸ್ವಚ್ಛ ಸಂಚಾರವನ್ನು ಸಾರ್ವತ್ರಿಕಗೊಳಿಸಲು ಹಾಗೂ ಭಾರತವನ್ನು ಸುಸ್ಥಿರ ಸಾರಿಗೆಯತ್ತ ಕೊಂಡೊಯ್ಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ದೃಢವಾಗಿ ಬದ್ಧವಾಗಿದೆ. ಡ್ರಿವನ್ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ, ನಮ್ಮ ಅತ್ಯಾಧುನಿಕ ಎಲೆಕ್ಟ್ರಿಕ್ ಟ್ರಕ್‌ ಗಳನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಮ್ಮ ಎಲೆಕ್ಟ್ರಿಕ್ ಟ್ರಕ್‌ ಗಳ ಶ್ರೇಣಿಯು ಗ್ರಾಹಕರ ಬದಲಾಗುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುವ ಜತೆಗೆ, ಅತ್ಯುತ್ತಮ ಕಾರ್ಯಕ್ಷಮತೆ, ಅಪ್ರತಿಮ ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ಆರ್ಥಿಕ ಲಾಭವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಹಕರು ಯಾವುದೇ ಆತಂಕವಿಲ್ಲದೆ ಶೂನ್ಯ- ಹೊರಸೂಸುವಿಕೆ ತಂತ್ರಜ್ಞಾನಕ್ಕೆ ವಿಶ್ವಾಸದಿಂದ ಪರಿವರ್ತನೆಗೊಳ್ಳಲು ನೆರವಾಗಲಿದೆ” ಎಂದು ತಿಳಿಸಿದರು.

ಡ್ರಿವನ್ ಸಂಸ್ಥೆಯ ಸಿಇಓ ಮತ್ತು ಸಹ- ಸಂಸ್ಥಾಪಕರಾದ ಮಾನವ್ ಬನ್ಸಲ್ ಅವರು ಮಾತನಾಡಿ , “ಎಲೆಕ್ಟ್ರಿಕ್ ವಾಹನ ವಿಭಾಗವನ್ನು ವಾಣಿಜ್ಯಿಕವಾಗಿ ಲಾಭದಾಯಕವನ್ನಾಗಿ ಮಾಡುವುದು ಇವಿ ವಾಹನಗಳ ಬೃಹತ್ ಪ್ರಮಾಣದ ಅಳವಡಿಕೆಗೆ ಪ್ರಮುಖ ಮೂಲಾಧಾರವಾಗಿದೆ. ವಾಹನ ನಿರ್ವಾಹಕರಲ್ಲಿ ಇವಿ ಕಡೆಗೆ ಆಸಕ್ತಿ ದಿನೇದಿನೆ ಹೆಚ್ಚುತ್ತಿದ್ದರೂ, ಈ ಸಂಪೂರ್ಣ ಪರಿವರ್ತನೆಯು ಇಂತಹ ಪರಿಹಾರಗಳು ಮಾರುಕಟ್ಟೆಯಲ್ಲಿ ಎಷ್ಟು ಪ್ರಾಯೋಗಿಕ ಮತ್ತು ಸುಲಭವಾಗಿ ತಲುಪುತ್ತವೆ ಎಂಬುದರ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಟಾಟಾ ಮೋಟಾರ್ಸ್‌ ನಂತಹ ಬಲಿಷ್ಠ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವುದು ಅವರ ಅತ್ಯುತ್ತಮ ವಾಹನ ಶ್ರೇಣಿಯನ್ನು ನಮ್ಮ ನವೀನ ಲೀಸಿಂಗ್ ಮಾದರಿಯೊಂದಿಗೆ ಸಂಯೋಜಿಸಲು ನಮಗೆ ಉತ್ತಮ ಅವಕಾಶ ಕಲ್ಪಿಸಿದೆ. ಇದು ಆರಂಭಿಕ ಬಂಡವಾಳ ವೆಚ್ಚಗಳು ಮತ್ತು ವಾಹನ ನಿಯೋಜನೆಯ ಸಮಯದಂತಹ ದೊಡ್ಡ ಸವಾಲುಗಳನ್ನು ಪರಿಹರಿಸುತ್ತದೆ. ಈ ಸಹಭಾಗಿತ್ವದ ಮೂಲಕ, ನಾವು ಮುಂದಿನ ಎರಡು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಟ್ರಕ್‌ ಗಳನ್ನು ರಸ್ತೆಗಿಳಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದೇವೆ. ಇದು ಫ್ಲೀಟ್ ನಿರ್ವಾಹಕರಿಗೆ ವಿದ್ಯುದ್ದೀಕರಣದ ಸ್ಪಷ್ಟ ಮತ್ತು ಸುಲಭ ಮಾರ್ಗವನ್ನು ಒದಗಿಸುವ ಜತೆಗೆ, ಭಾರತದ ವಿಶಾಲ ಇವಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲಿದೆ” ಎಂದು ಹೇಳಿದರು.

ಡ್ರಿವನ್ ನ ಸಹ-ಸಂಸ್ಥಾಪಕಿ ಮತ್ತು ಚೀಫ್ ಬಿಸಿನೆಸ್ ಆಫೀಸರ್ ಅಲ್ಪನಾ ಜೈನ್ ಅವರು ಮಾತನಾಡಿ, “ಸರಿಯಾದ ಬೆಂಬಲ ವ್ಯವಸ್ಥೆಯು ಒಂದೆಡೆ ಒಗ್ಗೂಡಿದಾಗ ಎಲೆಕ್ಟ್ರಿಕ್ ವಾಹನ ಅಳವಡಿಕೆಯು ವ್ಯಾಪಕವಾಗಿ ವಿಸ್ತರಿಸುತ್ತದೆ. ಟಾಟಾ ಮೋಟಾರ್ಸ್‌ ನ ಪ್ರಬಲ ಮಾರುಕಟ್ಟೆ ಉಪಸ್ಥಿತಿಯಿಂದಾಗಿ ವಾಹನ ನಿರ್ವಾಹಕರಿಗೆ ಗರಿಷ್ಠ ವಿಶ್ವಾಸ ಮತ್ತು ಸುಲಭ ಪ್ರವೇಶ ಲಭ್ಯವಾಗುತ್ತದೆ. ಮೂಲ ವಾಹನ ತಯಾರಕರಿಂದ ವಾಹನಗಳ ನಿಯಮಿತ ನಿರ್ವಹಣೆ, ಚಾಲನಾ ಸಮಯದ ಖಾತರಿ ಹಾಗೂ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ತಂತ್ರಜ್ಞಾನವನ್ನು ನಾವು ಸಂಯೋಜಿಸುತ್ತಿದ್ದೇವೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್ ತನ್ನ ಅತ್ಯಂತ ಬಲಿಷ್ಠ ಪೋರ್ಟ್‌ ಫೋಲಿಯೋ ಮೂಲಕ ದೇಶದ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಪರಿವರ್ತನೆಯಲ್ಲಿ ಮುಂಚೂಣಿ ನಾಯಕತ್ವವನ್ನು ಮುಂದುವರಿಸಿದೆ. ಕಂಪನಿಯು ತನ್ನ ಟಾಟ್ ಟ್ರಕ್ಸ್.ಇವಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ಐ-ಎಂಓಇವಿ (ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್) ಆರ್ಕಿಟೆಕ್ಚರ್ ಆಧಾರಿತ 7 ರಿಂದ 55 ಟನ್ ಸಾಮರ್ಥ್ಯದ ಸಂಪೂರ್ಣ ಎಲೆಕ್ಟ್ರಿಕ್ ಟ್ರಕ್‌ ಗಳ ಸಮಗ್ರ ಶ್ರೇಣಿಯನ್ನು ಮಾರುಕಟ್ಟೆಗೆ ನೂತನವಾಗಿ ಪರಿಚಯಿಸಿದೆ. ಸುಸ್ಥಿರ, ದಕ್ಷ ಮತ್ತು ಉನ್ನತ ಕಾರ್ಯಕ್ಷಮತೆಯ ಕಾರ್ಯಾಚರಣೆಗಾಗಿ ಎಂಜಿನಿಯರಿಂಗ್ ಮಾಡಲಾದ ಈ ಟ್ರಕ್‌ ಗಳು ಇ-ಕಾಮರ್ಸ್ ಸರಕು ಸಾಗಣೆ, ನಿರ್ಮಾಣ ಸಾಮಗ್ರಿಗಳ ಸಾಗಾಟ ಮತ್ತು ಬಂದರು ಕಾರ್ಯಾಚರಣೆಗಳು ಸೇರಿದಂತೆ ವೈವಿಧ್ಯಮಯ ಅನ್ವಯಿಕೆಗಳಿಗೆ ಅತ್ಯಂತ ಸೂಕ್ತವಾಗಿವೆ. ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಇವಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ವ್ಯಾಪಕ ಸೇವಾ ಜಾಲದ ಬೆಂಬಲದೊಂದಿಗೆ, ಟಾಟಾ ಮೋಟಾರ್ಸ್ ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಭಾರತದ ಹಸಿರು ಸಾರಿಗೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.

Previous Post

ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

21/08/2026
ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

20/08/2026
ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

20/08/2026
ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

20/08/2026

Recent News

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

21/08/2026
ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

20/08/2026
ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

20/08/2026
ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

20/08/2026