ಉಡುಪಿ: ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ (ರಿ.) ಸಂಸ್ಥೆಯ ವತಿಯಿಂದ ಇದೇ ನವೆಂಬರ್ 14 ಮತ್ತು 15ರಂದು ನಡೆಯಲಿರುವ 9ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರವನ್ನು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಶ್ರೀ ಶೀರೂರು ಮಠ, ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾಕೂಟದ ಕರಪತ್ರವನ್ನು ಶ್ರೀಪಾದರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕರಾಟೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರಾದ ಕ್ಯೋಶಿ ರವಿ ಕುಮಾರ್ ಉದ್ಯಾವರ, ಉಪಾಧ್ಯಕ್ಷರಾದ ರೆನ್ಶಿ ಸಂತೋಷ್ ಸುವರ್ಣ ಬೊಲ್ಜೆ, ಹಿರಿಯ ಶಿಕ್ಷಕರಾದ ಶಿಹಾನ್ ಉಮೇಶ್ ಕರ್ಕೇರ, ಶಿಹಾನ್ ಸಚಿನ್ ಮಂಗಳೂರು, ರೆನ್ಶಿ ಸೋಮನಾಥ ಸುವರ್ಣ ಮಟ್ಟು, ಶಿಹಾನ್ ಸೀತಾರಾಮ ಪೂಜಾರಿ, ಜಯ ಬಾಲರಾಜ್, ಅಮೃತ ಸದಾನಂದ, ನಿಖಿಲ್ ಬಂಗೇರಾ, ಅಭಿಷೇಕ್ ಹೆಗ್ಡೆ, ಯತಿನ್ ಪೂಜಾರಿ, ಶ್ರುತಿಕ್, ಉದ್ಯಮಿಗಳಾದ ಭಾಸ್ಕರ್, ಶ್ರೀ ಮಠದ ರಾಮಮೂರ್ತಿ ಹಾಗೂ ಪಂದ್ಯಕೂಟದ ಆಯೋಜಕರಾದ ಶಿಹಾನ್ ಹರ್ಷ ಭಾಗವತ್ ಉಪಸ್ಥಿತರಿದ್ದರು.







