ಉಡುಪಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ AURA Creations Event & Promotion, ಉಡುಪಿ ವತಿಯಿಂದ, ದೃಶ್ಯ ಮೀಡಿಯಾ ಸಹಯೋಗದಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ–2026’ ಅನ್ನು ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ. 0 ರಿಂದ 5 ವರ್ಷದ ಪುಟ್ಟ ಮಕ್ಕಳಿಗಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಉಚಿತವಾಗಿದ್ದು, ಹೆಸರು ನೋಂದಾವಣೆ ಕಡ್ಡಾಯವಾಗಿದೆ.
ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳು ನೀಡಲಾಗುವುದು. ಅಲ್ಲದೆ, ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣಪತ್ರ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಪ್ರತಿ ಮಗುವಿಗೆ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಸ್ಪರ್ಧೆಗೆ ಅಗತ್ಯವಿರುವ ವೇಷಭೂಷಣ, ಪರಿಕರಗಳು ಹಾಗೂ ಹಿನ್ನೆಲೆ ಸಂಗೀತವನ್ನು ಸ್ಪರ್ಧಿಗಳೇ ತರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು. 9980979363 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದಾಗಿದೆ.
ಕಾರ್ಯಕ್ರಮದ ನೇರ ಪ್ರಸಾರವನ್ನು Dhrishya Media Facebook Page ನಲ್ಲಿ ವೀಕ್ಷಿಸಬಹುದಾಗಿದೆ.








