ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ
ಆಶ್ರಯದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಭಾ ಸಹಯೋಗದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕೃಷ್ಣ ಮಠದಲ್ಲಿ 04-10-2026 ರಂದು ನಡೆಯಲಿರುವ ಕೋಟಿ ತುಳಸಿ ನಡೆಯಲಿದೆ ಇದರ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಉಡುಪಿ ಬ್ರಾಹ್ಮಣ ಸಭಾದ ಗೌರವ ಅಧ್ಯಕ್ಷರು ಮಂಜುನಾಥ ಉಪಾಧ್ಯ ,
ಅಧ್ಯಕ್ಷರು ಶ್ರೀಕಾಂತ್ ಉಪಾಧ್ಯ ,ಕಾರ್ಯದರ್ಶಿ ದುರ್ಗಾಪ್ರಸಾದ್ ,ಕೋಶಾಧಿಕಾರಿ ಹಯವದನ ಭಟ್, ಹಿರಿಯ ವಕೀಲರು ಜಯಪ್ರಕಾಶ್ ಕೆದ್ಲಾಯ ,ಜಿಲ್ಲಾ ಅಧ್ಯಕ್ಷರು ಸಂದೀಪ್ ಮಂಜ ಮತ್ತು ಎಲ್ಲಾ ವಲಯದ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಉಪಸ್ಥಿತರಿದ್ದರು.






