Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

ಸಾವಿರಾರು ಸ್ಪರ್ಧಿಗಳು ಭಾಗಿ ; ವಿಜೇತರ ಪಟ್ಟಿ ಬಿಡುಗಡೆ

Dhrishya News by Dhrishya News
13/09/2026
in ಸುದ್ದಿಗಳು
0
ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ
0
SHARES
1
VIEWS
Share on FacebookShare on Twitter

ಮಣಿಪಾಲ, ಸೆಪ್ಟೆಂಬರ್ 12, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ ‘ಮೇಘಮಲ್ಹಾರ್-2026’ ಫಲಿತಾಂಶವನ್ನು ಪ್ರಕಟಿಸಿದೆ. ಈ ಸ್ಪರ್ಧೆಯಲ್ಲಿದೇಶದಾದ್ಯಂತದ ಸುಮಾರು 1,100ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು. ವರ್ಷ ಋತುವಿನ ಗಾಢ ಭಾವನೆಗಳನ್ನು ಕೆಮರಾದಲ್ಲಿ ಸೆರೆಹಿಡಿಯುವ ‘ಮೇಘಮಲ್ಲಾರ್‌-2026’ರ ಸವಾಲಿಗೆ ಸ್ಪರ್ಧಿಗಳು ಉತ್ತಮವಾಗಿ ಸ್ಪಂದಿಸಿದ್ದರು.

ಸ್ಪರ್ಧೆಯಲ್ಲಿ ಆಯ್ಕೆಯಾದ ಛಾಯಾಚಿತ್ರಗಳನ್ನು ಸೆಪ್ಟೆಂಬರ್ 17 ಮತ್ತು 18, 2026ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)ಯ ಡಾ. ಟಿ.ಎಂ.ಎ. ಪೈ ಸಭಾಂಗಣದ 2ನೇ ಮಹಡಿಯಲ್ಲಿ ಪ್ರದರ್ಶಿಸಲಾಗುವುದು. ಸೆಪ್ಟೆಂಬರ್‌ 17ರಂದು 91 ನೆಯ ಜನ್ಮದಿನವನ್ನು ಆಚರಿಸುತ್ತಿರುವ ಮಾಹೆಯ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ ಗೌರವಾರ್ಥ ಈ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.

ಮಾಹೆಯ ಅಂಗಸಂಸ್ಥೆಯಾನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ಸ್‌ (ಎಂಐಸಿ), ಮಣಿಪಾಲ ಹಾಗೂ ಕರ್ನಾಟಕದ ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಒಂದಾದ ‘ಉದಯವಾಣಿ’ಯ ಸಹಯೋಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಾಹೆಯ ವಿದ್ಯಾರ್ಥಿ, ಬೋಧಕರು, ಸಿಬ್ಬಂದಿಗಳ ಪ್ರತ್ಯೇಕ ವಿಭಾಗಕ್ಕೂ ಗಣನೀಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದು ಸಾವಿರಕ್ಕಿಂತಲೂ ಅಧಿಕ ಪ್ರವೇಶಿಕೆಗಳು ಬಂದಿವೆ. ಭಾರತದ 20 ರಾಜ್ಯಗಳ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಗಮನಾರ್ಹವಾಗಿದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿ (ಸಸ್ಟೇನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್‌ -ಎಸ್ ಡಿಜಿ) ಗಳಾದ ಎಸ್‌ಡಿಜಿ 6 (ಶುದ್ಧ ನೀರು ಮತ್ತು ನೈರ್ಮಲ್ಯ), ಎಸ್‌ಡಿಜಿ 11 (ಸುಸ್ಥಿರ ನಗರ ಮತ್ತು ಸಮುದಾಯ), ಎಸ್‌ಡಿಜಿ 13 (ಹವಾಮಾನ ಸ್ಥಿತಿ), ಎಸ್‌ಡಿಜಿ 14 (ಜಲದ ಆಳದ ಜಗತ್ತು) ಮತ್ತು ಎಸ್‌ಡಿಜಿ 15 (ನೆಲದ ಮೇಲಿನ ಬದುಕು)ಯ ಹಿನ್ನೆಲೆಯಲ್ಲಿ ಈ ಛಾಯಾಚಿತ್ರಗಳಿಗೆ ಮಹತ್ತ್ವವಿದೆ.

ವಿಜೇತರನ್ನು ಅಭಿನಂದಿಸಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು,
‘ಈ ವರ್ಷದ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ. ವಿಶೇಷವಾಗಿ ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದು ಉಲ್ಲೇಖನೀಯ. ಇಂದು ಸಾಮಾಜಿಕ ಜಾಗೃತಿಗೆ ಸಂಬಂಧಿಸಿ ಛಾಯಾಗ್ರಹಣವು ಪರಿಣಾಮಕಾರಿ ಮಾಧ್ಯಮವಾಗಿ ಬೆಳೆಯುತ್ತಿರುವುದಕ್ಕೆ ಈ ಸ್ಪರ್ಧೆ ದೃಷ್ಟಾಂತವಾಗಿದೆ. ವರ್ಷಕಾಲದ ಸೌಂದರ್ಯದ ಅಭಿವ್ಯಕ್ತಿಯ ಜೊತೆಗೆ, ಸುಸ್ಥಿರತೆ, ಪರಿಸರಪ್ರೀತಿ, ನಿಸರ್ಗ ಸಹ್ಯ ಜೀವನವಿಧಾನಗಳಂಥ ಗಂಭೀರ ಆಶಯಗಳನ್ನು ಈ ಸ್ಪರ್ಧೆಯು ಹೊಂದಿದೆ. ಶೈಕ್ಷಣಿಕ ದೃಷ್ಟಿಯಲ್ಲಿಯೂ ಇದೊಂದು ಅರ್ಥಪೂರ್ಣ ಪ್ರಯತ್ನ” ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಛಾಯಾಗ್ರಾಹಕರಾದ ತೀರ್ಥ ದಾಸ್ ಗುಪ್ತ, ಅನಿತಾ ಮೈಸೂರು ಮತ್ತು ಡಾ. ಕಿರಣ್ ವಿ. ಆಚಾರ್ಯ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಮೇಘಮಲ್ಹಾರ್ – 2026
ಸರ್ವರಿಗೂ ಮುಕ್ತ ವಿಭಾಗ

ಪ್ರಥಮ ಬಹುಮಾನ (ರೂ. 25,000/-): ಗಣೇಶ್ ನಾಮದೇವ್ ಮೆಮಾಣೆ (ಮುಂಬೈ, ಮಹಾರಾಷ್ಟ್ರ)
ದ್ವಿತೀಯ ಬಹುಮಾನ (ರೂ. 15,000/-): ಅನಿರ್ಬಾನ್ ಪಾನ್ (ಚಂದ್ರಕೋನ, ಪಶ್ಚಿಮ ಬಂಗಾಳ)
ತೃತೀಯ ಬಹುಮಾನ (ರೂ. 10,000/-): ವರದನಾಯಕ ಟಿ. ಪಿ. (ಬೆಂಗಳೂರು, ಕರ್ನಾಟಕ)

ವಿಶೇಷ ಅರ್ಹತಾ ಪತ್ರ (ಮೆರಿಟ್ ಸರ್ಟಿಫಿಕೇಟ್‌) ವಿಜೇತರು :

ಅಭಿಷೇಕ್ ಬಾಸಕ್ (ಕೊಲ್ಕತ, ಪಶ್ಚಿಮ ಬಂಗಾಲ)
ತನ್ಮಯ್ ದಾಸ್ (ನೈಹಾಟಿ, ಪಶ್ಚಿಮ ಬಂಗಾಲ)
ಸಂಗ್ರಾಮ್ ಗೋವರ್ಧನೆ (ನಾಶಿಕ್, ಮಹಾರಾಷ್ಟ್ರ)
ಸಯನ್ ಬೋಸ್ (ಕೋಲ್ಕತ, ಪಶ್ಚಿಮ ಬಂಗಾಲ)
ಅನಿಮೇಶ್ ಮಜಿ (ಕೋಲಾಘಾಟ್, ಪಶ್ಚಿಮ ಬಂಗಾಳ)
ಶೋವನ್ ಸಾಹಾ (ಮಾಹೆ, ಮಣಿಪಾಲ )
ವಿದ್ಯಾರ್ಥಿ ವಿಭಾಗದ ವಿಶೇಷ ಬಹುಮಾನ

ವಿಜೇತರು :

ಪ್ರಥಮ ಬಹುಮಾನ (ರೂ. 5,000/-): ಶಾರಿಕಾ ವಿ. ವಾಡಿಯಾ ಪೂರ್ಣಪ್ರಜ್ಞ ಪಿಯು ಕಾಲೇಜು ಬೆಂಗಳೂರು
ದ್ವಿತೀಯ ಬಹುಮಾನ (ರೂ. 3,000/-): ಅರಿತ್ರ ಭಟ್ಟಾಚಾರ್ಯ ಕೆಪಿಸಿ ಮೆಡಿಕಲ್ ಕಾಲೇಜು, ಜಾಧವ್ ಪುರ, ಪಶ್ಚಿಮ ಬಂಗಾಳ
ತೃತೀಯ ಬಹುಮಾನ (ರೂ. 2,000/-): ಬಿಲಾಲ್ ಶಾ ಮಣಿಪಾಲ
ವಿಶೇಷ ಅರ್ಹತಾ ಪತ್ರ (ಮೆರಿಟ್

ಸರ್ಟಿಫಿಕೇಟ್‌) ವಿಜೇತರು:

ಶಿವ ಪ್ರಕಾಶ್ (ಎನ್‌ಪಿಆರ್‌ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಮದುರೈ, ತಮಿಳುನಾಡು)
ಅರ್ಕಾ ಚೌಧುರಿ (ಐಇಎಂ, ಕೊಲ್ಕತ)
ಉಜೈರ್ ಮೊಹಮ್ಮದ್ (ಮಾಹೆ, ದುಬೈ ಕ್ಯಾಂಪಸ್)
ಐಶಾನಿ ರಾವ್ (ಮಾಹೆ, ಮಣಿಪಾಲ)

ಮಾಹೆ ವಿಭಾಗ – ಮೈ ಮಾಹೆ, ಮೈ ಕ್ಯಾಂಪಸ್‌ ಬಹುಮಾನ ವಿಜೇತರು:

ಪ್ರಥಮ ಬಹುಮಾನ (ರೂ. 5,000/-): ಥನಿಷ್ಕಾ ವೀರಬೋಯಿನಾ (ಮಾಹೆ, ಬೆಂಗಳೂರು ಕ್ಯಾಂಪಸ್)
ದ್ವಿತೀಯ ಬಹುಮಾನ (ರೂ. 3,000/-): ರೆಜ್ವಾನಾ ಜಮಾಲಿ (ಮಾಹೆ, ಮಣಿಪಾಲ ಕ್ಯಾಂಪಸ್)
ತೃತೀಯ ಬಹುಮಾನ (ರೂ. 2,000/-): ಅನುಷ್ಕಾ ಬ್ಯಾನರ್ಜಿ (ಮಾಹೆ, ಬೆಂಗಳೂರು ಕ್ಯಾಂಪಸ್)

ವಿಶೇಷ ಅರ್ಹತಾ ಪತ್ರ (ಮೆರಿಟ್ ಸರ್ಟಿಫಿಕೇಟ್‌) ವಿಜೇತರು:

ಚೇತನಾ ಸಂಜಯ್ (ಮಾಹೆ, ಬೆಂಗಳೂರು ಕ್ಯಾಂಪಸ್)
ಪ್ರೀತಿ ನಾಯಕ್ (ಮಾಹೆ, ಮಣಿಪಾಲ ಕ್ಯಾಂಪಸ್)
ಕಪಿಲ್‌ಮೀತ್ ಸಿಂಗ್ (ಮಾಹೆ, ಮಣಿಪಾಲ ಕ್ಯಾಂಪಸ್)
ಹರ್ಷಿತಾ ಡಿ. (ಮಾಹೆ, ಮಣಿಪಾಲ ಕ್ಯಾಂಪಸ್)
ಪುನೀತ್ ಎನ್.ಎಂ. (ಮಾಹೆ, ಬೆಂಗಳೂರು ಕ್ಯಾಂಪಸ್)

ಸೆಪ್ಟೆಂಬರ್‌ 17 ರಂದು ಪೂರ್ವಾಹ್ನ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ನಡೆಯಲಿದ್ದು ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರಗಳನ್ನು ಕಳುಹಿಸಿಕೊಡಲಾಗುವುದು.

Previous Post

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅ.4ರಂದು ಕೋಟಿ ತುಳಸಿ ಅರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

Next Post

ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

13/09/2026
ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

13/09/2026
ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

13/09/2026
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅ.4ರಂದು ಕೋಟಿ ತುಳಸಿ ಅರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅ.4ರಂದು ಕೋಟಿ ತುಳಸಿ ಅರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

12/09/2026

Recent News

imunify-bot-check