Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಮಾಹೆಯಲ್ಲಿ ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮ : ಭಾರತೀಯ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಅವಕಾಶ

Dhrishya News by Dhrishya News
28/07/2026
in मौसम
0
ಮಾಹೆಯಲ್ಲಿ ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮ : ಭಾರತೀಯ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಅವಕಾಶ
0
SHARES
10
VIEWS
Share on FacebookShare on Twitter

ಮಣಿಪಾಲ, ಜುಲೈ 27, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯವಾಗಿ ಪರಿಗಣಿತ ಉತ್ಕೃಷ್ಟ ಸಂಸ್ಥೆ, ಮಣಿಪಾಲದಲ್ಲಿ ‘ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್’ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಮೂರು ದಿನಗಳ ಈ ಕಾರ್ಯಕ್ರಮ (ಜುಲೈ 22–24) ರಲ್ಲಿ ಭಾರತೀಯ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳು, ಯುನೈಟೆಡ್ ಕಿಂಗ್‌ಡಮ್‌ನ ಆರೋಗ್ಯತಜ್ಞರು, ಹೂಡಿಕೆದಾರರು, ಸಂಶೋಧಕರು, ನೀತಿ ನಿರೂಪಕರು, ಔಷಧ ಉದ್ಯಮದ ಪ್ರಮುಖರು ಪಾಲ್ಗೊಂಡಿದ್ದರು. ಬ್ರಿಟಿಷ್ ಹೈ ಕಮಿಷನ್ ಹಾಗೂ ಭುವನೇಶ್ವರ ಸಿಟಿ ನಾಲೆಡ್ಜ್ ಇನ್ನೋವೇಷನ್ ಕ್ಲಸ್ಟರ್ ಫೌಂಡೇಶನ್ (ಬಿಸಿಕೆಐಸಿ) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ನವೋದ್ಯಮ (ಸ್ಟಾರ್ಟಪ್) ಗಳನ್ನು ಉತ್ತೇಜಿಸುವುದು, ನವೋದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಮುಕ್ತವಾಗಿಸುವುದು ಮತ್ತು ಯುಕೆ-ಇಂಡಿಯ ಸಹಭಾಗಿತ್ವವನ್ನು ದೃಢಪಡಿಸುವುದು ಮೊದಲಾದ ಆಶಯಗಳನ್ನು ಹೊಂದಿತ್ತು.

ಭಾರತ–ಯುಕೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಈ ಕಾರ್ಯಕ್ರಮವನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಕರ್ನಾಟಕದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಹಾಗೂ ದಕ್ಷಿಣ ಏಷ್ಯಾದ ಡೆಪ್ಯುಟಿ ಟ್ರೇಡ್ ಕಮಿಷನರ್ (ಹೂಡಿಕೆ) ಶ್ರೀ ಚಂದ್ರು ಅಯ್ಯರ್, ಹಾಗೂ ಬಿಸಿಕೆಎಐಸಿ ಅಧ್ಯಕ್ಷ ಡಾ. ಮೃತ್ಯುಂಜಯ್ ಸುವಾರ್ ಅವರು ಸಂಯುಕ್ತವಾಗಿ ಉದ್ಘಾಟಿಸಿದರು.

ಈ ಕಾರ್ಯಕ್ರಮವನ್ನು ‘ಮೂರು ದಿನಗಳ ನವೋದ್ಯಮದ ಉತ್ಸಾಹದಾಯಕ ಅನುಭವ’ ಎಂದು ಬಣ್ಣಿಸಿದ ಶ್ರೀ ಚಂದ್ರು ಅಯ್ಯರ್ ಅವರು, ಭಾರತೀಯ ನವೋದ್ಯಮಿಗಳನ್ನು ಯುನೈಟೆಡ್ ಕಿಂಗ್‌ಡಮ್‌ನ ಆರೋಗ್ಯ, ಸಂಶೋಧನೆ, ಹೂಡಿಕೆ ಹಾಗೂ ನವೋದ್ಯಮ ಪರಿಸರದೊಂದಿಗೆ ಸಂಪರ್ಕಿಸುವ ಮೂಲಕ ಜಾಗತಿಕ ಸಹಭಾಗಿತ್ವಗಳನ್ನು ವೃದ್ಧಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಈ ಕಾರ್ಯಕ್ರಮ ಕಾರಣವಾಗಲಿದೆ’ ಎಂದು ಹೇಳಿದರು. ’ಉದ್ಯಮ ಸ್ಟಾರ್ಟ್‌ಅಪ್‌, ಉದ್ಯಮಶೀಲತೆ ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ನಿರಂತರ ಕ್ರಿಯಾಶೀಲವಾಗಿರುವ ಮಾಹೆಯನ್ನು ಪ್ರಶಂಸಿಸಿದ ಅವರು, ಇತ್ತೀಚೆಗೆ ಜಾರಿಗೆ ಬಂದಿರುವ ಯುಕೆ–ಭಾರತ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಹಾಗೂ ಡಬಲ್ ಕಾನ್‌ಟ್ರಿಬ್ಯೂಷನ್ ಕನ್ವೆನ್ಷನ್ (ಡಿಸಿಸಿ)ಯ ಬಗ್ಗೆ ಪ್ರಸ್ತಾಪಿಸಿ, ಈ ಮಹತ್ವದ ಒಪ್ಪಂದಗಳು ನವೋದ್ಯಮ ಆಧಾರಿತ ಉದ್ಯಮಗಳು, ಗಡಿಯಾಚೆಗಿನ ಹೂಡಿಕೆಗಳು, ವೃತ್ತಿಪರರ ಪೂರೈಕೆ ಹಾಗೂ ಉಭಯ ದೇಶಗಳ ನಡುವಿನ ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ’ ಎಂದರು.

ಸಮಾರೋಪ ಸಮಾರಂಭದ ಗೌರವಾನ್ವಿತ ಅತಿಥಿಯಾಗಿದ್ದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ ‘ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮವು ಶಿಕ್ಷಣ, ಆರೋಗ್ಯ ಸೇವೆ, ಉದ್ಯಮ, ಸರ್ಕಾರ ಮತ್ತು ಉದ್ಯಮಶೀಲರನ್ನು ಒಂದೇ ವೇದಿಕೆಗೆ ತಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾಹೆಯ ಆಶಯಕ್ಕೆ ಅನುಗುಣವಾಗಿದೆ. ಕಳೆದ ಮೂರು ದಿನಗಳಲ್ಲಿ ಅತ್ಯುತ್ತಮ ನವೋದ್ಯಮ, ಅರ್ಥಪೂರ್ಣ ಸಹಭಾಗಿತ್ವ ಹಾಗೂ ಮೌಲ್ಯಯುತ ಜ್ಞಾನವಿನಿಮಯಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇವು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿವೆ. ಬ್ರಿಟಿಷ್ ಹೈ ಕಮಿಷನ್ ಮತ್ತು ಬಿಸಿಕೆಐಸಿ ಜೊತೆಗೂಡಿ ಭಾರತ–ಯುಕೆ ಸಹಕಾರವನ್ನು ಬಲಪಡಿಸುವ ಅವಕಾಶಗಳನ್ನು ಸೃಷ್ಟಿಸುವ ಅವಕಾಶ ಮಾಹೆಗೆ ಬಂದಿರುವುದಕ್ಕೆ ಹೆಮ್ಮೆ ಇದೆ’ಎಂದು ಹೇಳಿದರು.

ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮವು ಉಭಯ ದೇಶಗಳ ದ್ವಿಪಕ್ಷೀಯ ಆರೋಗ್ಯ ನವೋದ್ಯಮದ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದ್ದು, ಕಳೆದ ನಾಲ್ಕು ಆವೃತ್ತಿಗಳಲ್ಲಿ ಭಾರತದಾದ್ಯಂತ ಸ್ಟಾರ್ಟ್‌ಅಪ್‌ಗಳ ಸುಮಾರು 1,000 ಅರ್ಜಿಗಳನ್ನು ಸ್ವೀಕರಿಸಿದೆ, 75ಕ್ಕೂ ಹೆಚ್ಚು ಹೆಲ್ತ್‌ಟೆಕ್ ಕಂಪನಿಗಳಿಗೆ ಬೆಂಬಲ ನೀಡಿದೆ, 23 ಕಂಪನಿಗಳಿಗೆ ಯುಕೆ ಮಾರುಕಟ್ಟೆ ಪ್ರವೇಶಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ, ಏಳು ಸ್ಟಾರ್ಟ್‌ಅಪ್‌ಗಳು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತಮ್ಮ ಔದ್ಯಮಿಕ ಚಟುವಟಿಕೆಗಳನ್ನು ಆರಂಭಿಸಲು ನೆರವು ನೀಡಿದೆ, ಸುಮಾರು 32 ಮಿಲಿಯನ್ ಪೌಂಡು ಮೌಲ್ಯದ ಹೂಡಿಕೆ ಚಟುವಟಿಕೆಗಳನ್ನು ಮತ್ತು ನೂರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಭಾರತದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 25 ನವೀನ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳ ಪ್ರವರ್ತಕರು, ಯುಕೆ ಉದ್ಯಮ ಪ್ರತಿನಿಧಿಗಳು ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಉಭಯ ದೇಶಗಳ ವ್ಯವಹಾರ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಈ ಕಾರ್ಯಕ್ರಮದಲ್ಲಿ ಚಿಂತನೆ ನಡೆಸಲಾಯಿತು. ಆರು ಸ್ಟಾರ್ಟ್‌ಅಪ್‌ಗಳ ಪ್ರವರ್ತಕರನ್ನು ಯುಕೆಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದು, ಯುಕೆ ಆರೋಗ್ಯ ವ್ಯವಸ್ಥೆ, ಹೂಡಿಕೆದಾರರು ಹಾಗೂ ಎನ್‌ಎಚ್‌ಎಸ್‌ ಪಾಲುದಾರರೊಂದಿಗೆ ನೇರವಾಗಿ ಸಂವಾದ ನಡೆಯಲಿದೆ.

Dr H S Ballal, Pro Chancellor, MAHE, presents a memento to Mr Chandru Iyer, British Deputy High Commissioner to Karnataka, during the inauguration of the 4th Edition of the UK-India HealthTech Accelerator Programme (2026-2028).
Dignitaries inaugurate the 4th Edition of the UK-India HealthTech Accelerator Programme (2026-2028) by lighting the ceremonial lamp at Dr TMA Pai Hall, MAHE, Manipal.
Previous Post

ಉಡುಪಿಯಲ್ಲಿ ಸ್ವದೇಶಿ ಖಾದ್ಯಗಳ ಮಹಾಮೇಳ : ಜು. 31ರಿಂದ ಆಗಸ್ಟ್ 2ರವರೆಗೆ ಆಹಾರಪ್ರಿಯರಿಗೆ ರುಚಿಯ ಹಬ್ಬ..!

Next Post

ಉಡುಪಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ..!

ಉಡುಪಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

13/09/2026
ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಚಿತ ನೇತ್ರ ಶಿಬಿರ ಉದ್ಘಾಟನೆ

13/09/2026
ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

ಮಾಹೆಯಲ್ಲಿ‘ಮೇಘ ಮಲ್ಹಾರ್‌ 2026’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

13/09/2026
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅ.4ರಂದು ಕೋಟಿ ತುಳಸಿ ಅರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅ.4ರಂದು ಕೋಟಿ ತುಳಸಿ ಅರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ

12/09/2026

Recent News

imunify-bot-check