ಕಾರ್ಕಳ : ನಿಟ್ಟೆ ಪ್ರಜಾಪಿತ ಬ್ರಹ್ಮ ಕುಮಾರಿಸ್ ನ ವೃoಧವನ ಧ್ಯಾನ ಕೇಂದ್ರದಿಂದ ಪಂಚಾಯತ್ ಆಡಳಿತ ಅಧಿಕಾರಿ ಶ್ರೀನಿವಾಸ್ ರಾವ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಭಾರ್ತಿ ಹಾಗೂ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ನಿತಿನ್ ರ ವರ ಕೋರಿಕೆಯಂತೆ ಪಂಚಾಯತ್ ಕಾರ್ಯದರ್ಶಿ ರಮೇಶ್ ರವರಿಗೆ ಕಸ ಸಂಗ್ರಹಣೆ ವಾಹನವನ್ನು ಪ್ರಜಾಪಿತ ಬ್ರಹ್ಮಕುಮಾರಿ ಗುಜರಾತ್ ಗಾಂಧಿನಗರ ಸೇವಾ ಕೇಂದ್ರದ ಹಿರಿಯ ಸಹೋದರಿ ರಾಜಯೋಗಿಣಿ ಕೈಲಾಶ್ ದೀದಿ ಹಾಗೂ, ಮಂಗಳೂರು ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ ಮತ್ತು ಬ್ರಹ್ಮಕುಮಾರಿ ಸಹೋದರಿಯವರ ಉಪಸ್ಥಿತಿ ಯಲ್ಲಿ ನಿಟ್ಟೆ ಯ ಬಿ. ಕೆ. ಯಶೋದಾಕ್ಕ ಮತ್ತು ಬಿ. ಕೆ. ಮನೋಹರ್ ಶೆಟ್ಟಿಯವರು ವಾಹನವನ್ನು ನೀಡುವುದರ ಜೊತೆಗೆ ಪಂಚಾಯತ್ ಕಚೇರಿಯ ಬಳಿಯ ಬಸ್ ತಂಗುದಾನವನ್ನು ನವಿಕರಿಸಿ ಉದ್ಘಾಟಿಸಿದರು.







