ಬ್ರಹ್ಮಾವರ:ಕಲೆ ಪ್ರಕೃತಿ,ಸಂಸ್ಕೃತಿಯ ಉಳಿವು ಮತ್ತು ಬೆಳೆಸುವುದರ ಉದ್ದೇಶಕ್ಕೆ ಹೊಸದಾಗಿ ಹುಟ್ಟುಪಡೆಯಲಿರುವ ಕರಚಿತ್ರ ಸಂಸ್ಥೆಯ ಲಾಂಛನ ಅನಾವರಣ ಸಮಾರಂಭ ಮತ್ತು ಗಣಪತಿ ಚಿತ್ರಕಲಾ ಸ್ಪರ್ಧೆ 2026 ಪ್ರಶಸ್ತಿ ಪತ್ರ ವಿತರಣೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪೆರಂಪಳ್ಳಿ ಮಣಿಪಾಲ ಮಾರ್ಗದಲ್ಲಿರುವ ಶ್ರೀ ರಕ್ತೇಶ್ವರೀ ಕ್ಷೇತ್ರದಲ್ಲಿ ಜರುಗಲಿದೆ.
ಕಲಾವಿದೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುರಲ್ ಆಫ್ ವಿಜುವಲ್ ಆರ್ಟ್ ಪದವಿ ಶಿಕ್ಷಣ ಪಡೆದ ನಯನ ಆರ್ ಆಚಾರ್ಯ ಅಂಬಾಗಿಲು ಇವರು ಆಳ್ವಾಸ್ ವಿರಾಸತ್ ಸೇರಿದಂತೆ ಅನೇಕ ಕಡೆ ಚಿತ್ರಕಲಾ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಮೆಚ್ಚುಗೆ ಪಡೆದವರು ಇದೀಗ ಸೃಜನಶೀಲ ಕಲೆಗಳನ್ನು ಬೆಳೆಸುವ ಉದ್ದೇಶದಿಂದ ಕರಚಿತ್ರ ಸಂಸ್ಥೆಯನ್ನು ಹುಟ್ಟುಹಾಕಲಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ನಗರಸಭಾ ಸದಸ್ಯ ಅನಿತಾ ಬೆಲಿಂಡಾ ಡಿ’ಸೋಜ, ಗಿರಿಧರ ಆಚಾರ್ಯ ಮತ್ತು ಕ್ಷೇತ್ರದ ಧರ್ಮದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದು ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ಗಣೇಶಚಿತ್ರ ರಚನೆಯಲ್ಲಿ ಭಾಗವಹಿಸಿದವರೀಗೆ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ವಿತರಣೆ ಜರುಗಲಿದೆ.






