ಬ್ರಹ್ಮಾವರ.ಬಾರಕೂರು ಉದ್ದಾಲಗುಡ್ಡೆಯ ನಿವಾಸಿ ದಿವಂಗತ ಹೆಗ್ಗುಂಜೆ ನರಸಿಂಹ ಶೆಟ್ಟಿಯವರ ಪತ್ನಿ ಲಕ್ಷ್ಮೀ ಶೆಟ್ಟಿ(94) ವಯೋಸಹಜವಾಗಿ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು.
ಅವರು ಬೆಂಗಳೂರಿನಲ್ಲಿ ಅವರ ಮಗಳು ವಿಐಪಿ ಶಾಲೆಯ ಪ್ರಿನ್ಸಿಪಾಲ್ ಸಾಕಮ್ಮ ಶೆಟ್ಟಿಯವರ ಮನೆಯಲ್ಲಿ ಕೆಲವು ಸಮಯದಿಂದ ಬೆಂಗಳೂರಿನಲ್ಲಿದ್ದರು. ಮೃತರು ಏಳು ಹೆಣ್ಣು ಮಕ್ಕಳು ಅಳಿಯಂದಿರು ಸೊಸೆಯಂದಿರು ಮತ್ತು ಬೆಂಗಳೂರಿನ ಬಂಟ ಸಂಘದ ಕ್ರೀಯಾಶೀಲ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬಾರಕೂರು ಉದ್ದಾಲಗುಡ್ಡೆಯ ಅವರ ಮೂಲಮನೆಯಲ್ಲಿ ಶನಿವಾರ ಜರುಗಲಿದೆ.







