Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

Dhrishya News by Dhrishya News
14/07/2026
in ಸುದ್ದಿಗಳು
0
ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ
0
SHARES
7
VIEWS
Share on FacebookShare on Twitter

● ದೇಶದ ಉನ್ನತ ನಾಯಕತ್ವದ ಶೇ. 55 ರಷ್ಟು ಹುದ್ದೆಗಳಲ್ಲಿ ಈಗ ಮಿಲೇನಿಯಲ್ ಗಳೇ ಮುಂಚೂಣಿಯಲ್ಲಿ
● ನಿರ್ಧಾರ ಕೈಗೊಳ್ಳಲು ಶೇ. 84 ರಷ್ಟು ಪ್ರಮುಖ ಅಧಿಕಾರಿಗಳಿಂದ ಎಐ ಪರಿಕರಗಳ ಬಳಕೆ. ಶೇ.82 ಸಿಎಂಓಗಳು ಎಐ ಅಳವಡಿಸಿಕೊಳ್ಳುವ ಒತ್ತಡ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಜುಲೈ 13, 2026: ಎಐ ತಂತ್ರಜ್ಞಾನದ ಬೆಳವಣಿಗೆಯು ಕಾರ್ಪೊರೇಟ್ ವಲಯದ ನಿರ್ಧಾರ ಕೈಗೊಳ್ಳುವ ಶೈಲಿಯನ್ನು ಬದಲಾಯಿಸುತ್ತಿದ್ದು, ಭಾರತೀಯ ಕಂಪನಿಗಳ ಉನ್ನತ ನಾಯಕತ್ವದ ಹುದ್ದೆಗಳಿಗೆ (ಸಿ-ಸೂಟ್) ಏರುವ ಹಾದಿ ಈಗ ಮತ್ತಷ್ಟು ವಿಸ್ತಾರವಾಗಿದೆ. ವಿಶ್ವದ ಅತಿ ದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್‌ ಇನ್ ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳ ಪ್ರಕಾರ, ಭಾರತದ ಉನ್ನತ ಅಧಿಕಾರಿಗಳ ಪೈಕಿ ಬರೋಬ್ಬರಿ ಶೇ. 55 ರಷ್ಟು ಹುದ್ದೆಗಳನ್ನು ಈಗ ಮಿಲೇನಿಯಲ್ಸ್ ಅಲಂಕರಿಸಿದ್ದಾರೆ. ಇದರೊಂದಿಗೆ ಸೀನಿಯರ್ ಎಕ್ಸಿಕ್ಯೂಟಿವ್ಸ್ ವಿಭಾಗದಲ್ಲಿ ಇವರೇ ಅತಿ ದೊಡ್ಡ ತಲೆಮಾರಿನ ಗುಂಪಾಗಿ ಹೊರಹೊಮ್ಮಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಭಾರತದ ಸಿ-ಸೂಟ್ ನಾಯಕತ್ವದಲ್ಲಿ ಮಿಲೇನಿಯಲ್ಸ್‌ಗಳ ಪ್ರಾತಿನಿಧ್ಯ ಶೇ. 14.5 ರಷ್ಟು ಹೆಚ್ಚಾಗಿದೆ.

ಶೇ. 84 ರಷ್ಟು ಸಿ-ಸೂಟ್ ಲೀಡರ್ಸ್ ಪ್ರಕಾರ, ತಮ್ಮ ದೈನಂದಿನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈಗ ಎಐ ಪರಿಕರಗಳ ಸಲಹೆಗಳು ಅತ್ಯಂತ ಪ್ರಮುಖ ಹಂತವಾಗಿದೆ. ಶೇ. 82 ರಷ್ಟು ಚೀಫ್ ಮಾರ್ಕೆಟಿಂಗ್ ಆಫೀಸರ್‌ಗಳು (ಸಿಎಂಓ) ಪ್ರಕಾರ, ಕೃತಕ ಬುದ್ಧಿಮತ್ತೆಯ ಒಟ್ಟಾರೆ ಪ್ರಭಾವವನ್ನು ಸರಿಯಾಗಿ ಅಳೆಯುವ ಮುನ್ನವೇ, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಲು ಎಐ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಬೇಕಾದ ಭಾರಿ ಒತ್ತಡದಲ್ಲಿದ್ದಾರೆ.

ವೈವಿಧ್ಯಮಯ ವೃತ್ತಿಪರ ಅನುಭವಕ್ಕೆ ಮನ್ನಣೆ; ಲಿಂಕ್ಡ್‌ಇನ್ ವರದಿಯ ಪ್ರಕಾರ, ಕೇವಲ ಒಂದೇ ಉದ್ಯಮದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಸಿ-ಸೂಟ್ ಲೀಡರ್‌ ಗಳ ಪ್ರಮಾಣವು ಶೇ. 80 ರಿಂದ ಶೇ. 58 ಕ್ಕೆ ಕುಸಿದಿದೆ. ಅಂದರೆ, ಇಂದಿನ ಕಾರ್ಪೊರೇಟ್ ಮಾರುಕಟ್ಟೆಯಲ್ಲಿ ಕೇವಲ ಒಂದೇ ವಲಯಕ್ಕೆ ಸೀಮಿತವಾಗದೆ ವಿವಿಧ ಕಂಪನಿಗಳು, ವಿಭಿನ್ನ ಜವಾಬ್ದಾರಿಗಳು ಹಾಗೂ ವೈವಿಧ್ಯಮಯ ವ್ಯಾಪಾರ ಸಂದರ್ಭಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಾಯಕರಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಎಐ ತಂತ್ರಜ್ಞಾನದ ಆಗಮನವು ಈ ಬದಲಾವಣೆಯನ್ನು ಮತ್ತಷ್ಟು ವೇಗಗೊಳಿಸಿದೆ ಎಂದು ಲಿಂಕ್ಡ್‌ ಇನ್ ಸಂಶೋಧನೆ ತಿಳಿಸಿದೆ. ಶೇ. 84 ರಷ್ಟು ಭಾರತೀಯ ಸಿ-ಸೂಟ್ ಲೀಡರ್‌ ಗಳು ತಮ್ಮ ಸಂಸ್ಥೆಗಳಲ್ಲಿ ಎಐ ತಂತ್ರಜ್ಞಾನದಿಂದಾಗಿ ಹೊಸ ಉದ್ಯೋಗಾವಕಾಶಗಳು ಮತ್ತು ಹುದ್ದೆಗಳು ಸೃಷ್ಟಿಯಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪೈಕಿ ಚೀಫ್ ಮಾರ್ಕೆಟಿಂಗ್ ಆಫೀಸರ್‌ ಗಳಲ್ಲಿ ಈ ನಂಬಿಕೆ ಅತ್ಯಧಿಕವಾಗಿದ್ದು (ಶೇ. 94), ಉನ್ನತ ನಾಯಕರು ತಮ್ಮ ನಿರ್ಧಾರಗಳನ್ನು ಹೆಚ್ಚು ನಿಖರವಾಗಿಸಲು ನೇರವಾಗಿ ಎಐ ಪರಿಕರಗಳ ಬೆಂಬಲ ಪಡೆಯುತ್ತಿದ್ದಾರೆ.

ಭಾರತದ ಲಿಂಕ್ಡ್‌ ಇನ್ ಕಂಟ್ರಿ ಮ್ಯಾನೇಜರ್ ಮತ್ತು ವಿಪಿ ಎಲ್‌ಎಸ್‌ಎಸ್ ಪ್ರಾಡಕ್ಟ್ ಆಗಿರುವ ಕುಮರೇಶ್ ಪಟ್ಟಾಭಿರಾಮನ್  ಅವರು ಈ ಕುರಿತು ಮಾತನಾಡಿ, “ಭಾರತದ ಉನ್ನತ ನಾಯಕತ್ವ ಇಂದು ಅತ್ಯಂತ ಕಠಿಣ ಹಾಗೂ ಸವಾಲಿನ ಹಂತವನ್ನು ತಲುಪಿದೆ. ಎಐ ತಂತ್ರಜ್ಞಾನವು ಹಳೆಯ ನಿಯಮಾವಳಿಗಳ ಆಯುಷ್ಯವನ್ನು ಕಡಿಮೆ ಮಾಡುತ್ತಿದೆ. ಹೀಗಾಗಿ, ನಾಯಕರು ಯಾವುದೇ ಸ್ಪಷ್ಟ ಮಾರ್ಗದರ್ಶಿಯಿಲ್ಲದೆಯೂ ಹೊಸ ಸಾಕ್ಷ್ಯಗಳಿಗೆ ಮುಕ್ತವಾಗಿ ಸ್ಪಂದಿಸುತ್ತಾ, ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ತಮ್ಮ ವಿವೇಚನೆಗೆ ಎಐ ಅನ್ನು ಒಂದು ಚುರುಕಾದ ಸಾಧನವಾಗಿ ಬಳಸಿಕೊಳ್ಳುವ ಹಾಗೂ ತಂತ್ರಜ್ಞಾನ, ಪ್ರತಿಭೆ ಮತ್ತು ವ್ಯವಹಾರದ ತಂಡಗಳನ್ನು ಮುಂಚಿತವಾಗಿಯೇ ಜೊತೆಗೂಡಿಸಿ ಸಾಮರ್ಥ್ಯದ ಕೊರತೆಗಳನ್ನು ಮೊದಲೇ ಗುರುತಿಸುವ ನಾಯಕರೇ ಯಶಸ್ವಿಯಾಗಲಿದ್ದಾರೆ. ಮಾರುಕಟ್ಟೆ ಬದಲಾಗುವಷ್ಟೇ ವೇಗವಾಗಿ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ನಾಯಕರಿಗೇ ನಿಜವಾದ ಲಾಭವಿದೆ” ಎಂದು ಅವರು ತಿಳಿಸಿದ್ದಾರೆ.

ವೇಗವೇ ಉನ್ನತ ಅಧಿಕಾರಿಗಳ ಹೊಸ ತಲೆನೋವು
ವರದಿಯ ಪ್ರಕಾರ, ಭಾರತದ ಪ್ರತಿ 5 ಉನ್ನತ ಅಧಿಕಾರಿಗಳಲ್ಲಿ ಸುಮಾರು 4 ರಷ್ಟು ನಾಯಕರು ತಮಗೆ ಎಐ ತಂತ್ರಜ್ಞಾನದ ಒಟ್ಟಾರೆ ಪ್ರಭಾವವನ್ನು ಸರಿಯಾಗಿ ಅಳೆಯುವ ಮುನ್ನವೇ, ಅದನ್ನು ವೇಗವಾಗಿ ಅಳವಡಿಸಿಕೊಳ್ಳಬೇಕಾದ ಭಾರಿ ಒತ್ತಡವಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಒತ್ತಡವು ಮುಖ್ಯವಾಗಿ ಚೀಫ್ ಮಾರ್ಕೆಟಿಂಗ್ ಆಫೀಸರ್‌ ಗಳು (ಸಿಎಂಓಗಳು – ಶೇ. 82) ಮತ್ತು ಚೀಫ್ ಟೆಕ್ನಾಲಜಿ ಆಫೀಸರ್‌ ಗಳಲ್ಲಿ (ಸಿಟಿಓಗಳು – ಶೇ. 81) ಅತ್ಯಧಿಕವಾಗಿದೆ. ಇದೇ ವೇಳೆ, ಶೇ. 39 ರಷ್ಟು ಭಾರತೀಯ ಸಿ-ಸೂಟ್ ನಾಯಕರು ನಿರಂತರ ಅನಿಶ್ಚಿತತೆಯ ನಡುವೆಯೂ ಅತ್ಯಂತ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ತಮಗೆ ಇರುವ ದೊಡ್ಡ ಸವಾಲು ಎಂದಿದ್ದಾರೆ. ಇದು ಮುಖ್ಯವಾಗಿ ಸಿಎಂಓಗಳು (ಶೇ. 46) ಮತ್ತು ಸಿಇಓಗಳನ್ನು (ಶೇ. 43) ಕಾಡುತ್ತಿದ್ದು, ಸದ್ಯದ ಮಾರುಕಟ್ಟೆಯಲ್ಲಿ ವೇಗದ ಜೊತೆಗೆ ಗುಣಮಟ್ಟದ ನಿರ್ಧಾರ ಕೈಗೊಳ್ಳುವುದೇ ಅತಿ ದೊಡ್ಡ ಪರೀಕ್ಷೆಯಾಗಿದೆ.

ಭವಿಷ್ಯದ ಉದ್ಯೋಗಿಗಳ ಸಾಮರ್ಥ್ಯದ ಕುರಿತು ಆತಂಕ:
ಎಐ ತಂತ್ರಜ್ಞಾನದ ಕಾರಣದಿಂದಾಗಿ ಉದ್ಯೋಗಗಳ ಸ್ವರೂಪ ಮತ್ತು ಅಗತ್ಯತೆಗಳು ವೇಗವಾಗಿ ಬದಲಾಗುತ್ತಿವೆ. ಹೀಗಾಗಿ, ಭವಿಷ್ಯದಲ್ಲಿ ತಮ್ಮ ಸಂಸ್ಥೆಗಳಿಗೆ ಯಾವ ರೀತಿಯ ಹೊಸ ಹುದ್ದೆಗಳು, ಕೌಶಲ್ಯಗಳು ಮತ್ತು ಸಾಮರ್ಥ್ಯಗಳು ಬೇಕಾಗಬಹುದು ಎಂಬ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವಿಲ್ಲ ಎಂದು ಶೇ. 51 ರಷ್ಟು ಭಾರತೀಯ ಸಿ-ಸೂಟ್ ನಾಯಕರು ಒಪ್ಪಿಕೊಂಡಿದ್ದಾರೆ. ಮುಖ್ಯವಾಗಿ ಚೀಫ್ ಮಾರ್ಕೆಟಿಂಗ್ ಆಫೀಸರ್‌ ಗಳಲ್ಲಿ ಈ ಆತಂಕ ಅತ್ಯಧಿಕ (ಶೇ. 58) ಪ್ರಾತಿನಿಧ್ಯ ಪಡೆದಿದೆ. ಈ ಅಂಕಿ-ಅಂಶಗಳ ಪ್ರಕಾರ, ಭವಿಷ್ಯದ ಉದ್ಯೋಗಿಗಳ ಸಿದ್ಧತೆಯು ಕೇವಲ ಮಾನವ ಸಂಪನ್ಮೂಲ (ಎಚ್ಆರ್) ವಿಭಾಗಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಇದು ಉದ್ಯಮದ ಬೆಳವಣಿಗೆ, ತಂತ್ರಜ್ಞಾನದ ಅಳವಡಿಕೆ, ಗ್ರಾಹಕ ಸ್ನೇಹಿ ತಂತ್ರಗಳು ಮತ್ತು ಸಾಂಸ್ಥಿಕ ವಿನ್ಯಾಸ ಸೇರಿದಂತೆ ಒಟ್ಟಾರೆ ನಾಯಕತ್ವದ ಜಂಟಿ ಸವಾಲಾಗಿ ಮಾರ್ಪಟ್ಟಿದೆ.

ಎಐ ಹೂಡಿಕೆಯಿಂದ ಹೊಸ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ
ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಎಐ ತಂತ್ರಜ್ಞಾನದ ಮೇಲಿನ ಹೂಡಿಕೆಗೆ ಕೇವಲ ಉತ್ಪಾದಕತೆಯನ್ನು ಹೆಚ್ಚಿಸುವುದಷ್ಟೇ ಉದ್ದೇಶವಾಗಿ ಉಳಿದಿಲ್ಲ, ಬದಲಿಗೆ ಹೊಸ ಆವಿಷ್ಕಾರ ತರುವುದೇ ಪ್ರಮುಖ ಗುರಿಯಾಗಿದೆ ಎಂದು ಲಿಂಕ್ಡ್‌ ಇನ್ ವರದಿ ತಿಳಿಸಿದೆ. ಭಾರತದ ಪ್ರತಿ 10 ಉನ್ನತ ಅಧಿಕಾರಿಗಳಲ್ಲಿ ಸುಮಾರು 9 ರಷ್ಟು ನಾಯಕರು, ತಮ್ಮ ಸಂಸ್ಥೆಗಳು ಎಐ ತಂತ್ರಜ್ಞಾನದ ಮೇಲೆ ಮಾಡುತ್ತಿರುವ ಹೂಡಿಕೆಯಿಂದ ಹೊಸ ಆವಿಷ್ಕಾರವೇ ಅತ್ಯಂತ ಪ್ರಮುಖ ಫಲಿತಾಂಶವಾಗಬೇಕು ಎಂದು ಬಯಸಿದ್ದಾರೆ.

ಈ ನಿರೀಕ್ಷೆಯು ಮುಖ್ಯವಾಗಿ ಚೀಫ್ ಮಾರ್ಕೆಟಿಂಗ್ ಆಫೀಸರ್‌ ಗಳಲ್ಲಿ ಶೇ. 92 ರಷ್ಟು ಅತ್ಯಧಿಕವಾಗಿದ್ದು, ಸಿಇಓ ಮತ್ತು ಸಿಟಿಓಗಳಲ್ಲಿ ತಲಾ ಶೇ. 91 ರಷ್ಟು ಹಾಗೂ ಸಿಎಚ್‌ಆರ್‌ಒಗಳಲ್ಲಿ ಶೇ. 82 ರಷ್ಟಿದೆ. ಎಐ ತಂತ್ರಜ್ಞಾನವು ವ್ಯವಹಾರದ ಪ್ರಮುಖ ಭಾಗವಾಗಿ ಮಾರ್ಪಡುತ್ತಿರುವುದರಿಂದ, ಉನ್ನತ ನಾಯಕರು ಕೇವಲ ದೈನಂದಿನ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ಹೊಸ ಉತ್ಪನ್ನಗಳ ಸೃಷ್ಟಿ, ಗ್ರಾಹಕರ ಅನುಭವದ ಸುಧಾರಣೆ, ಹೊಸ ಶೈಲಿಯ ಕೆಲಸದ ವಾತಾವರಣ ಮತ್ತು ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧಾತ್ಮಕ ಪೈಪೋಟಿ ನೀಡುವುದರತ್ತ ಗಮನ ಹರಿಸುತ್ತಿದ್ದಾರೆ.

ಉನ್ನತ ಹುದ್ದೆಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಎಐ ಕೌಶಲ್ಯಗಳು
ಕಾರ್ಪೊರೇಟ್ ವಲಯದಲ್ಲಿ ನಾಯಕತ್ವದ ಪಾತ್ರಗಳು ಬದಲಾಗುತ್ತಿರುವಂತೆ, ಹಿರಿಯ ಅಧಿಕಾರಿಗಳಿಂದ ನಿರೀಕ್ಷಿಸುವ ಕೌಶಲ್ಯಗಳೂ ಸಹ ಬದಲಾಗುತ್ತಿವೆ. ಪ್ರಸ್ತುತ ಭಾರತದ ಉನ್ನತ ಅಧಿಕಾರಿಗಳ ವಲಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟಾಪ್ 5 ಕೌಶಲ್ಯಗಳ ಪೈಕಿ 4 ಕೌಶಲ್ಯಗಳು ನೇರವಾಗಿ ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿವೆ. ಇವುಗಳಲ್ಲಿ ಎಐ ಏಜೆಂಟ್ಸ್, ಎಐ ಪ್ರೊಡಕ್ಟಿವಿಟಿ, ರಿಟ್ರೈವಲ್ ಆಗ್ಯುಮೆಂಟೆಡ್ ಜನರೇಷನ್ (ಆರ್ ಎ ಜಿ) ಮತ್ತು ಎಐ ಸ್ಟ್ರಾಟಜಿ ಪ್ರಮುಖವಾಗಿವೆ.

ಈ ಪೈಕಿ ಎಐ ಏಜೆಂಟ್ಸ್ ಭಾರತದ ಸಿ-ಸೂಟ್ ಅಧಿಕಾರಿಗಳಲ್ಲಿ ವಾರ್ಷಿಕವಾಗಿ ಶೇ. 18.6 ರಷ್ಟು ಭರ್ಜರಿ ಬೆಳವಣಿಗೆ ಕಾಣುವ ಮೂಲಕ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಕೌಶಲ್ಯವಾಗಿ ಹೊರಹೊಮ್ಮಿದೆ. ಒಟ್ಟಾರೆಯಾಗಿ, ಎಐ ಮತ್ತು ತಾಂತ್ರಿಕ ಪರಿಣತಿಗೆ ಸಂಬಂಧಿಸಿದ ವಿಶೇಷ ಕೌಶಲ್ಯಗಳು 2020 ರಿಂದೀಚೆಗೆ ಶೇ. 10.9 ರಷ್ಟು ಹೆಚ್ಚಾಗಿದ್ದು, ಉದ್ಯಮದ ಕಾರ್ಯತಂತ್ರಗಳಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.

Previous Post

ಟಾಟಾ ಮೋಟಾರ್ಸ್‌ ನಿಂದ ಕೌಶಲ್ಯ ಯೋಜನೆಯ ಮೂಲಕ 23,000ಕ್ಕೂ ಹೆಚ್ಚು ಯುವ ಜನತೆಯ ಸಬಲೀಕರಣ, 5,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ

Next Post

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು;  ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು; ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

14/07/2026
ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!

ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!

14/07/2026
ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

14/07/2026
ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

14/07/2026

Recent News