Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಉದ್ಯೋಗ/ಶಿಕ್ಷಣ

ಟಾಟಾ ಮೋಟಾರ್ಸ್‌ ನಿಂದ ಕೌಶಲ್ಯ ಯೋಜನೆಯ ಮೂಲಕ 23,000ಕ್ಕೂ ಹೆಚ್ಚು ಯುವ ಜನತೆಯ ಸಬಲೀಕರಣ, 5,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ

ಭಾರತದ ಮುಂದಿನ ಪೀಳಿಗೆಯ ಮೊಬಿಲಿಟಿ ಉದ್ಯೋಗಿಗಳನ್ನು ಸಜ್ಜುಗೊಳಿಸುತ್ತಿರುವ ಬೃಹತ್ ಯೋಜನೆ

Dhrishya News by Dhrishya News
15/07/2026
in ಉದ್ಯೋಗ/ಶಿಕ್ಷಣ, ಸುದ್ದಿಗಳು
0
ಟಾಟಾ ಮೋಟಾರ್ಸ್‌ ನಿಂದ ಕೌಶಲ್ಯ ಯೋಜನೆಯ ಮೂಲಕ 23,000ಕ್ಕೂ ಹೆಚ್ಚು ಯುವ ಜನತೆಯ ಸಬಲೀಕರಣ, 5,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ
0
SHARES
18
VIEWS
Share on FacebookShare on Twitter

ಬೆಂಗಳೂರು, ಜುಲೈ 13, 2026: ಪ್ರತಿಷ್ಠಿತ ಟಾಟಾ ಮೋಟಾರ್ಸ್ ಸಂಸ್ಥೆಯು ವಿಶ್ವ ಯುವ ಕೌಶಲ ದಿನದ ಸಂದರ್ಭದಲ್ಲಿ, ಭಾರತೀಯ ಯುವ ಪೀಳಿಗೆಯ ಸಾಧನೆ ಮತ್ತು ಆಕಾಂಕ್ಷೆಗಳಿಗೆ ರೆಕ್ಕೆ ನೀಡುವ ತನ್ನ ಹೆಮ್ಮೆಯ ಕೌಶಲ್ಯ ಯೋಜನೆಯು ಭರ್ಜರಿ ಯಶಸ್ಸನ್ನು ಗಳಿಸಿರುವುದಾಗಿ ಘೋಷಿಸಿದೆ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾದ ಕೌಶಲ್ಯ ಯೋಜನೆಯು ಉದ್ಯಮ ರಂಗದ ನೇರ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಕೌಶಲಾಭಿವೃದ್ಧಿ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಕೌಶಲ್ಯ ಯೋಜನೆಯಲ್ಲಿ ಇದುವರೆಗೆ 23,000ಕ್ಕೂ ಹೆಚ್ಚು ಯುವಜನತೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಈ ತರಬೇತಿ ಮುಗಿಸಿದ 5,000ಕ್ಕೂ ಹೆಚ್ಚು ಪದವೀಧರರಿಗೆ ನೂರಕ್ಕೆ ನೂರರಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗಿದ್ದು, ಇದರಲ್ಲಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳು ಸೇರಿವೆ. ಭಾರತವು ಜಾಗತಿಕ ಉತ್ಪಾದನಾ ವಲಯದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ವೇಗವಾಗಿ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಕೌಶಲ್ಯ ಯೋಜನೆಯು ಯುವಕರಿಗೆ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಡುತ್ತಿದೆ. ಅತ್ಯಾಧುನಿಕ ಉತ್ಪಾದನೆ, ಆಟೊಮೇಷನ್ ಹಾಗೂ ಉದಯೋನ್ಮುಖ ಸಾರಿಗೆ ತಂತ್ರಜ್ಞಾನಗಳಲ್ಲಿ ಭವಿಷ್ಯಕ್ಕೆ ಪೂರಕವಾದ ಕೌಶಲಗಳನ್ನು ಯುವಜನತೆಗೆ ಕಲಿಸಲಾಗುತ್ತಿದ್ದು, ಇದು ಉದ್ಯಮ ರಂಗದಲ್ಲಿ ನುರಿತ ಉದ್ಯೋಗಿಗಳಿಗೆ ಇರುವ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಪ್ರಮುಖವಾಗಿ ನೆರವಾಗುತ್ತಿದೆ.

ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಉತ್ಪಾದನಾ ವಲಯದಲ್ಲಿ ಇದುವರೆಗೆ ಪ್ರಾತಿನಿಧ್ಯ ಸಿಗದ ಸಮುದಾಯಗಳಿಗೂ ಕೌಶಲ್ಯ ಯೋಜನೆಯು ಹೊಸ ಹಾದಿಗಳನ್ನು ಮುಕ್ತಗೊಳಿಸುತ್ತಿದೆ. ಈ ತರಬೇತಿಯಲ್ಲಿ ಪಾಲ್ಗೊಂಡವರಲ್ಲಿ ಶೇಕಡಾ 21 ರಷ್ಟು ಮಹಿಳೆಯರಿದ್ದರೆ, ಶೇಕಡಾ 25 ರಷ್ಟು ಮಂದಿ ಸಮಾಜದ ಹಿಂದುಳಿದ ಹಾಗೂ ಉದ್ಯೋಗದ ಸೌಲಭ್ಯ ವಂಚಿತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇದು ಭವಿಷ್ಯದ ಭಾರತಕ್ಕಾಗಿ ವೈವಿಧ್ಯಮಯ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನ ಅವಕಾಶಗಳುಳ್ಳ ಉದ್ಯೋಗಿಗಳನ್ನು ಸಜ್ಜುಗೊಳಿಸುವ ಟಾಟಾ ಮೋಟಾರ್ಸ್‌ ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಈ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೀತಾರಾಮ್ ಕಂಡಿ ಅವರು, “ಭಾರತದ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಮತ್ತು ಸಾರಿಗೆ ಕ್ಷೇತ್ರದ ಸಾಧನೆಗಳು ಇಲ್ಲಿನ ಉದ್ಯೋಗಿಗಳ ಸಾಮರ್ಥ್ಯದ ಮೇಲೆ ನಿರ್ಧಾರವಾಗಲಿವೆ. ಕೌಶಲ್ಯ ಯೋಜನೆಯ ಮೂಲಕ ನಾವು ತಾಂತ್ರಿಕ ಶಿಕ್ಷಣ, ಉದ್ಯಮ ರಂಗದ ಪರಿಚಯ ಮತ್ತು ನೈಜ ಕಾರ್ಯಾನುಭವವನ್ನು ಒಟ್ಟುಗೂಡಿಸಿ, ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ರೂಪಿಸಲು ಹೂಡಿಕೆ ಮಾಡುತ್ತಿದ್ದೇವೆ. ತಂತ್ರಜ್ಞಾನ ಆಧಾರಿತವಾಗಿ ವೇಗವಾಗಿ ಮುನ್ನಡೆಯುತ್ತಿರುವ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ನುರಿತ ಪ್ರತಿಭೆಗಳನ್ನು ಒದಗಿಸುವ ಜೊತೆಗೆ, ಯುವಕರು ಅರ್ಥಪೂರ್ಣ ವೃತ್ತಿಜೀವನವನ್ನು ಕಂಡುಕೊಳ್ಳಲು ಈ ಯೋಜನೆ ನೆರವಾಗುತ್ತಿದೆ. ನಮ್ಮ ತರಬೇತಿ ಪಡೆದ ಯುವಕರು ಗಳಿಸಿರುವ ಅತ್ಯುತ್ತಮ ಉದ್ಯೋಗಾವಕಾಶಗಳು, ಪ್ರಸ್ತುತ ಉದ್ಯಮಕ್ಕೆ ಪೂರಕವಾದ ಹಾಗೂ ಭವಿಷ್ಯಕ್ಕೆ ಸಜ್ಜಾದ ಕೌಶಲಗಳನ್ನು ರೂಪಿಸುವಲ್ಲಿ ಶೈಕ್ಷಣಿಕ ವಲಯ ಮತ್ತು ಉದ್ಯಮ ರಂಗದ ನಡುವಿನ ಸಹಭಾಗಿತ್ವ ಎಷ್ಟು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ. ಈ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಭಾರತದ ಯಶಸ್ಸಿನ ಪಯಣದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಪಾಲ್ಗೊಳ್ಳುವಂತೆ ಅವರನ್ನು ಸಬಲೀಕರಿಸಲು ನಾವು ಬದ್ಧರಾಗಿದ್ದೇವೆ” ಎಂದರು.

2021ರಲ್ಲಿ ಆರಂಭಗೊಂಡ ಈ ಕೌಶಲ್ಯ ಯೋಜನೆಯು ಪ್ರಸ್ತುತ ಪುಣೆ, ಜಮ್‌ ಶೆಡ್‌ ಪುರ, ಲಕ್ನೋ, ಪಂತ್‌ನಗರ, ಸಾನಂದ್ ಮತ್ತು ಧಾರವಾಡದಲ್ಲಿರುವ ಟಾಟಾ ಮೋಟಾರ್ಸ್‌ ನ ಉತ್ಪಾದನಾ ಘಟಕಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಯುವಜನತೆಗೆ ಸಂಪೂರ್ಣ ಪ್ರಾಯೋಜಿತ ಮೆಕಾಟ್ರಾನಿಕ್ಸ್ ಡಿಪ್ಲೊಮಾವನ್ನು ಗಳಿಸುತ್ತಾ ಕಲಿಯಿರಿ ಮಾದರಿಯ ತರಬೇತಿ ನೀಡಲಾಗುತ್ತದೆ. ಉದ್ಯಮ ರಂಗದ ತಜ್ಞರ ಸಹಯೋಗದೊಂದಿಗೆ ಮತ್ತು ಭವಿಷ್ಯದ ಸಾರಿಗೆ ತಂತ್ರಜ್ಞಾನಕ್ಕೆ ಪೂರಕವಾಗಿ ಇದರ ಪಠ್ಯಕ್ರಮವನ್ನು ರೂಪಿಸಲಾಗಿದ್ದು, ಇದು ತರಗತಿಯ ಕಲಿಕೆಯೊಂದಿಗೆ ಟಾಟಾ ಮೋಟಾರ್ಸ್‌ ನ ಕಾರ್ಖಾನೆಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿದೆ. ಇಲ್ಲಿ ತರಬೇತಿ ಪಡೆಯುವವರು ಆಟೊಮೊಬೈಲ್ ಎಂಜಿನಿಯರಿಂಗ್, ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕಾಟ್ರಾನಿಕ್ಸ್, ಆಟೊಮೇಷನ್, ಐಒಟಿ ಮತ್ತು ಇಂಡಸ್ಟ್ರಿ 4.0 ವಲಯಗಳಲ್ಲಿ ವಿಶೇಷ ಕೌಶಲಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಟಾಟಾ ಮೋಟಾರ್ಸ್‌ ನ ವಿಸ್ತಾರವಾದ ಜಾಲದ ವ್ಯಾಪ್ತಿಯಲ್ಲಿರುವ ಡೀಲರ್‌ ಶಿಪ್‌ ಗಳು, ಪ್ರಮುಖ ಬಿಡಿಭಾಗ ಪೂರೈಕೆದಾರರು, ವೆಂಡರ್‌ ಗಳು, ಟಾಟಾ ಗ್ರೂಪ್‌ ನ ಇತರ ಕಂಪನಿಗಳು, ವಿವಿಧ ಆಟೊಮೊಬೈಲ್ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಕಂಪನಿಗಳಲ್ಲಿ ವ್ಯವಸ್ಥಿತ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಪ್ರಸ್ತುತ ಈ ಯೋಜನೆಯ ಹಳೆಯ ವಿದ್ಯಾರ್ಥಿಗಳು ಟಾಟಾ ಸ್ಟೀಲ್ ಡೌನ್‌ ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಜೈಡಸ್, ಜೆಎಸ್‌ಡಬ್ಲ್ಯೂ ಗ್ರೀಂಟೆಕ್, ಸುಬ್ರೋಸ್, ಸ್ಪಿನ್ನಿ, ವಿಪ್ರೋ ಸೇರಿದಂತೆ ದೇಶದ ಪ್ರಖ್ಯಾತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ, ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲೂ ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗಿದ್ದು, ಇಲ್ಲಿ ತರಬೇತಿ ಪಡೆದ 50 ಪದವೀಧರರು ಸ್ಲೋವಾಕಿಯಾದ ನಿಟ್ರಾದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ನ ಉತ್ಪಾದನಾ ಘಟಕದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಲೋವಾಕಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯಲ್ಲಿ ಉದ್ಯೋಗ ಪಡೆದಿರುವ ಮೆಕಾಟ್ರಾನಿಕ್ಸ್ ಡಿಪ್ಲೊಮಾ ತರಬೇತಿ ನಿರತ ಯುವತಿ ಅನಿತಾ ಕೆಂಡೆ ಬೆಥೇಕರ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, “ಮಹಾರಾಷ್ಟ್ರದ ಗ್ರಾಮೀಣ ಭಾಗದ ಬುಡಕಟ್ಟು ಹಳ್ಳಿಯೊಂದರಿಂದ ಬಂದ ನನಗೆ, ಆಟೋಮೊಬೈಲ್ ಉದ್ಯಮದಲ್ಲಿ ಜಾಗತಿಕ ಮಟ್ಟದ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದು ಒಂದು ಕಾಲದಲ್ಲಿ ಅಸಾಧ್ಯದ ಮಾತಾಗಿತ್ತು. ಆದರೆ ಟಾಟಾ ಮೋಟಾರ್ಸ್‌ ನ ಕೌಶಲ್ಯ ಯೋಜನೆಯು ನನಗೆ ಎಂದಿಗೂ ಊಹಿಸದ ಅವಕಾಶಗಳನ್ನು ಕೈಗೆಟುಕುವಂತೆ ಮಾಡಿತು. ಅದಕ್ಕೆ ಬೇಕಾದ ಕೌಶಲ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿತು. ಇಂದು ನನ್ನ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲೇ ಪಾಸ್‌ ಪೋರ್ಟ್ ಪಡೆದ ಹಾಗೂ ಸ್ಲೋವಾಕಿಯಾದ ಜಾಗ್ವಾರ್ ಲ್ಯಾಂಡ್ ರೋವರ್‌ ನಲ್ಲಿ ವೃತ್ತಿಜೀವನ ಆರಂಭಿಸಿದ ಮೊದಲ ಯುವತಿ ನಾನೇ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಈ ಸಾಧನೆ ಕೇವಲ ನನ್ನದಲ್ಲ, ಇದು ನನ್ನ ಕುಟುಂಬ, ನನ್ನ ಸಮುದಾಯ ಮತ್ತು ಪರಿಸ್ಥಿತಿಯನ್ನು ಮೀರಿ ಕನಸು ಕಾಣುವ ಪ್ರತಿಯೊಬ್ಬ ಹೆಣ್ಣುಮಗಳ ಹೆಮ್ಮೆಯಾಗಿದೆ” ಎಂದು ಭಾವುಕರಾಗಿ ನುಡಿದರು.

ಅದೇ ರೀತಿ, ಆಟೋಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಡಿಪ್ಲೊಮಾ ತರಬೇತಿ ಪಡೆದು ಪ್ರಸ್ತುತ ಟಾಟಾ ಮೋಟಾರ್ಸ್ ಕಸ್ಟಮರ್ ಸಪೋರ್ಟ್‌ ನಲ್ಲಿ ಉದ್ಯೋಗದಲ್ಲಿರುವ ಸೋಹಮ್ ರವೀಂದ್ರ ಮನ್ಮೋಡೆ ಮಾತನಾಡಿ , “ಸಣ್ಣ ಪಟ್ಟಣದ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ನನಗೆ ಆಟೊಮೊಬೈಲ್ ರಂಗದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವುದು ಒಂದು ದೂರದ ಕನಸಾಗಿತ್ತು. ಆದರೆ ಕೌಶಲ್ಯ ಯೋಜನೆಯು ಒಂದೇ ಸಮಯದಲ್ಲಿ ಕಲಿಯಲು, ಗಳಿಸಲು ಮತ್ತು ನೈಜ ಉದ್ಯಮದ ಅನುಭವವನ್ನು ಪಡೆಯಲು ನೆರವಾಗುವ ಮೂಲಕ ನನ್ನ ಬದುಕನ್ನೇ ಬದಲಾಯಿಸಿತು. ಇಲ್ಲಿ ನಾನು ಕಲಿತ ಕೌಶಲಗಳು ಮತ್ತು ಆತ್ಮವಿಶ್ವಾಸ ಇಂದು ಟಾಟಾ ಮೋಟಾರ್ಸ್‌ನಲ್ಲಿ ಉತ್ತಮ ವೃತ್ತಿಜೀವನವನ್ನು ಕಂಡುಕೊಳ್ಳಲು ಸಹಾಯ ಮಾಡಿದೆ. ಇಂದು ನನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ಮತ್ತು ಭಾರತದ ಆಟೊಮೊಬೈಲ್ ಪ್ರಗತಿಯಲ್ಲಿ ಭಾಗಿಯಾಗಲು ನನಗೆ ಹೆಮ್ಮೆಯಿದೆ” ಎಂದರು.

ಪ್ರತಿ ವರ್ಷ 5,000ಕ್ಕೂ ಹೆಚ್ಚು ತರಬೇತಿ ನಿರತರನ್ನು ಉದ್ಯಮ ರಂಗಕ್ಕೆ ಸಿದ್ಧಗೊಳಿಸುವ ಗುರಿ ಹೊಂದಿರುವ ಕೌಶಲ್ಯ ಯೋಜನೆಯು, ಭಾರತದ ಆಟೊಮೊಬೈಲ್ ಮತ್ತು ಉತ್ಪಾದನಾ ವಲಯಕ್ಕೆ ನಿರಂತರವಾಗಿ ನುರಿತ ಪ್ರತಿಭೆಗಳನ್ನು ಒದಗಿಸುತ್ತಿದೆ. ಇಡೀ ವಾಹನ ಉದ್ಯಮವು ಇಲೆಕ್ಟ್ರಿಕ್ ಮತ್ತು ಆಧುನಿಕ ಸಾಫ್ಟ್‌ ವೇರ್ ತಂತ್ರಜ್ಞಾನದತ್ತ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ, ಯುವಕರಿಗೆ ಭವಿಷ್ಯಕ್ಕೆ ಪೂರಕವಾದ ಕೌಶಲಗಳನ್ನು ಕಲಿಸಲು, ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಭಾರತದ ಕೈಗಾರಿಕಾ ಪ್ರಗತಿಯ ಮುಂದಿನ ಹಂತಕ್ಕೆ ಕೊಡುಗೆ ನೀಡಲು ಟಾಟಾ ಮೋಟಾರ್ಸ್ ಬದ್ಧವಾಗಿದೆ.

Previous Post

ವಿಜೇತ ವಿಶೇಷ ಶಾಲೆಯಲ್ಲಿ ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ 5 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ.

Next Post

ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

28/08/2026
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

28/08/2026
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

28/08/2026
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

28/08/2026

Recent News

ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

28/08/2026
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

28/08/2026
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

28/08/2026
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

28/08/2026