ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ಡ್ ಕಾರ್ಕಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತರಬೇತಿ ಕಾರ್ಯಗಾರ ವನ್ನು ದುರ್ಗಾಪರಮೇಶ್ವರಿ ದೇವಸ್ಥಾನ ಹಿರಿಯoಗಡಿ ಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದೀಪ್ ಜಿ.ಎಸ್ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಕಾರ್ಕಳ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯವಿಪತ್ತು ನಿರ್ವಹನದ ಕೆಲಸದ ಬಗ್ಗೆ ಗೌರವಿಸಿ ಘಟಕಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು ಹಾಗೂ ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ, ಸಂಚಾರಿ ನಿಯಮ ಉಲ್ಲಂಘನೆ ಮಾದಕ ವಸ್ತುವಿನ ಮೇಲಿನ ಅವಲಂಬನೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಮಾಹಿತಿಯನ್ನು ನೀಡಿದರು.
ತರಬೇತುದಾರರಾಗಿ ಆಗಮಿಸಿರುವಂತಹ ಶಾಂತಿ ಲಾಲ್ ಜಟಿಯ ಇನ್ಸ್ಪೆಕ್ಟರ್ ನಿರ್ವಹಣಾ ಪಡೆ ಇವರು ಮಾತನಾಡಿ ಇಂದು ಪೇಟೆಗಳಲ್ಲಿ ಯಾವುದೇ ವಿಪತ್ತುಗಳಾದ ಒಬ್ಬರಿಗೆ ಒಬ್ಬರು ಸಹಕಾರ ನೀಡುವ ರೀತಿಯಲ್ಲಿ ಬದುಕುತ್ತಿರುವುದು ಕಡಿಮೆ ಒಂದೊಂದು ಪ್ಲಾಟಿನ ಒಲಗಡೆ ಜೀವನವನ್ನು ಮಾಡುತ್ತಿರುತ್ತಾರೆ ಆದರೆ ಹಳ್ಳಿಯ ಜನ ಒಬ್ಬರಿಗೊಬ್ಬರು ಸ್ಪಂದನೆ ಕೊಡುವ ರೀತಿಯಲ್ಲಿ ಬದುಕುತ್ತಿದ್ದಾರೆ ಇಂತಹ ಸಂದರ್ಭಗಳಲ್ಲಿ ನಮ್ಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಶೌರ್ಯವಿಪತ್ತು ನಿರ್ವಹನ ತಂಡವು ಅತಿ ಹೆಚ್ಚು ಸಹಕಾರವನ್ನು ನೀಡುತ್ತಿದೆ ಉತ್ತಮ ಕೆಲಸಗಳನ್ನು ಕಾರ್ಯಗಳನ್ನು ಮಾಡ್ತಾ ಇದೆ ಎಂಬುದು ತಿಳಿಸಿದರು.
ಸುಭಾಸ್ ಸಿಂದೇ ಸಬ್ ಇನ್ಸ್ಪೆಕ್ಟರ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಇವರು ವಿಪತ್ತುಗಳು ಆದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ರಕ್ಷಣೆಗಳನ್ನ ಮಾಡಬೇಕು ನೀರಿನಲ್ಲಿ ಬಿದ್ದಿರುವ ಮಕ್ಕಳು ಅಥವಾ ದೊಡ್ಡವರಿಯನ್ನು ಉಳಿಸಲು ಯಾವ ರೀತಿಯಾಗಿ ಉಸಿರು ನೀಡಬೇಕು ಹಾಗೂ ಯಾವುದೇ ಆಪತ್ತಿನ ಸಂದರ್ಭದಲ್ಲಿ ಯಾವ ರೀತಿ ರಕ್ಷಣೆ ಮಾಡಬೇಕು ತಮ್ಮ ರಕ್ಷಣೆಯ ಜೊತೆಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿಯನ್ನು ನೀಡಿದರು.
ತರಬೇತಿಯಲ್ಲಿ ಸುಮಾರು 80 ಜನ ಸ್ವಯಂಸೇವಕರು ಭಾಗವಹಿಸಿ ತರಬೇತಿ ಪಡೆಕೊಂಡರು.

ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ನಿರೂಪಿಸಿದರು.
ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಯ ಸ್ವಾಗತಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ವಂದಿಸಿದರು.






