ಬ್ರಹ್ಮಾವರ: ಬ್ರಹ್ಮಾವರ ಬಳಿಯ ಚೇರ್ಕಾಡಿ ಪ್ರಗತಿ ನಗರದ ತೀರಾ ಬಡವರಾದ ಉಷಾ ಮತ್ತು ಅಣ್ಣಪ್ಪ ದಂಪತಿಗಳ ಮಗು ಕಳೆದ ವರ್ಷ ಜೂನ್ 28ರಂದು ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ 6ನೇ ದಿನದಿಂದ ಇಂದಿಗೂ ಆಸ್ಪತ್ರೆಯಲ್ಲಿಯೇ ಇದ್ದು ಹೃದಯಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಸಾರ್ವನಿಕರ ನೆರವನ್ನು ಯಾಚಿಸಿದ್ದಾರೆ.
ಮಗು ಹುಟ್ಟಿದ 6ನೇ ದಿನಂದು ಮನೆಗೆ ಹೋಗುವ ಜನನ ದೃಡೀಕರಣಕ್ಕಾಗಿ ಈಶಾನ್ ಹೆಸರನ್ನು ನೊಂದಾಯಿದ್ದರು. ಈ ಸಂದರ್ಭ ಮಗು ತೀರಾ ಅಸ್ವಸ್ಥಗೊಂಡ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಪರೀಶೀಲನೆ ಮಾಡಿದಾಗ ಮಗುವಿಗೆ ಹೃದಯಸಂಭಂದಿ ತೊಂದರೆ ಇರುವುದನ್ನು ಗಮನಿಸಿ ಉಡುಪಿ ಜಿಲ್ಲಾ ಆಸ್ಪತ್ರೆ ಬಳಿಕ ಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ತಿಂಗಳಕಾಲ ನಿರಂತರ ಬಲೂನು ಮೂಲಕ ಚಿಕಿತ್ಸೆ ಮಾಡಿದ್ದರು.
ಅಲ್ಲಿ ಕೂಡಾ ಫಲಕಾರಿಯಾಗದ ಕಾರಣ ಇದೀಗ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣಮುಖವಾಗುವ ಬರವಸೆ ನೀಡಲಾಗಿದ್ದು ಚಿಕಿತ್ಸೆಗೆ 6 ಲಕ್ಷದಷ್ಟು ಹಣ ಬೇಕಾದ ಕಾರಣ ಕೂಲಿಕಾರ್ಮಿಕ ಬಡ ದಂಪತಿಗಳು ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಸಾರ್ವನಿಕರ ನೆರವನ್ನು ಯಾಚಿಸಲಾಗಿದ್ದು ಆರ್ಥಿಕ ನೆರವು ನೀಡುವವರು ಮಗುವಿನ ತಾಯಿ ಉಷಾ ಫೋನ್ ಪೇ ಅಥವಾ ಪೇತ್ರಿ ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆಗೆ ವರ್ಗಾಹಿಸಬಹುದು. ಖಾತೆ ಸಂಖ್ಯೆ:81812210010210. ifse.code.CNRBOO10181.








