Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

ಒಗಿಲ್ವಿ ಪರಿಕಲ್ಪನೆಯ ಈ ಪ್ರಚಾರವು, ಇಂದ್ರಿಯದ ವರ್ಗದಲ್ಲೇ-ಅತ್ಯುತ್ತಮವಾದ ವಜ್ರ ಆಯ್ಕೆ ಮಾನದಂಡಗಳನ್ನು ಎತ್ತಿತೋರಿಸಿ, ಅದ್ವಿತೀಯವಾದ ವಜ್ರ ಹೊಳಪಿನ ಆಕರ್ಷಣೆಯನ್ನು ಮುನ್ನೆಲೆಗೆ ತಂದಿದೆ.

Dhrishya News by Dhrishya News
29/06/2026
in ಸುದ್ದಿಗಳು
0
‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ
0
SHARES
7
VIEWS
Share on FacebookShare on Twitter

ಬೆಂಗಳೂರು, 29 ಜೂನ್, 2026 ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ, ತನ್ನ ಇತ್ತೀಚಿನ ಮಾರ್ಕೆಟಿಂಗ್ ಪ್ರಚಾರ ‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯನ್ನು ಅನಾವರಣಗೊಳಿಸಿ ಭಾರತದಲ್ಲಿ ವಜ್ರ ಆಯ್ಕೆಯನ್ನು ಮರುವಿವರಿಸುತ್ತಿರುವ ಉದ್ದಿಮೆ-ಮೊದಲು ಮಾನದಂಡದಲ್ಲಿ ಆಧಾರಗೊಂಡ ಅತ್ಯಧಿಕ ಹೊಳಪು ಮತ್ತು ಗುಣಮಟ್ಟದ ವಜ್ರಗಳನ್ನು ಮುನ್ನೆಲೆಗೆ ತಂದಿದೆ. ಅದ್ವಿತೀಯವಾದ ಹೊಳಪು ವಜ್ರದ ಗುಣಮಟ್ಟದ ಅತ್ಯಂತ ಗೋಚರ ಅಭಿವ್ಯಕ್ತಿಯಾಗಿದೆ ಎಂಬ ನಂಬಿಕೆಯಲ್ಲಿ ಬೇರುಬಿಟ್ಟಿರುವ ಈ ಪ್ರಚಾರವು, ವಜ್ರವು ಅತ್ಯಂತ ಪರಿಣಾಮಕಾರಿಯಾಗಿ ಅತ್ಯುತ್ಕೃಷ್ಟವಾದ ಪ್ರಖರತೆ, ಜ್ವಾಲೆ ಮತ್ತು ಮಿನುಗು ಒದಗಿಸಲು ಬೆಳಕನ್ನು ಪ್ರತಿಫಲಿಸಿ, ಹೊರಸೂಸಿ ಹಿಂದಿರುಗಿಸುವ ಗುಣದ ಮೌಲ್ಯಮಾಪನ ಮಾಡುವುದಕ್ಕಾಗಿ ವಿನ್ಯಾಸಗೊಂಡಿರುವ ಬ್ರ್ಯಾಂಡ್‌ನ ವರ್ಗದಲ್ಲಿ-ಅತ್ಯುತ್ತಮ ಆಯ್ಕೆ ಮಾನದಂಡಗಳ ಮೇಲೆ ನಿರ್ಮಾಣಗೊಂಡಿದೆ. ಇಂದ್ರಿಯ ಆಯ್ಕೆ ಮಾಡುವ ಪ್ರತಿಯೊಂದು ವಜ್ರವೂ ಅತ್ಯಂತ ಕಠಿಣ ಮಾನದಂಡಗಳನ್ನು ಪೂರೈಸುತ್ತದೆ ಮತ್ತು 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅದಿತಿ ರಾವ್ ಹೈದರಿ ಇರುವ ಬ್ರ್ಯಾಂಡ್ ಚಿತ್ರವು, ಅದಿತಿ ಅವರು ತಮ್ಮ ವಜ್ರಗಳ ಹೊಳಪನ್ನು ಅನಾವರಣಗೊಳಿಸಲು ತಮ್ಮ ಗ್ಲವ್ಸ್‌ಅನ್ನು ಅತ್ಯಂತ ಗಾಂಭೀರ್ಯದಿಂದ ತೆಗೆಯುತ್ತಿರುವ ಒಂದು ನಿಶ್ಶಬ್ದ ಅನಾವರಣದ ಕ್ಷಣದ ಮೂಲಕ ಸೆರೆಹಿಡಿಯಲ್ಪಡುವ ಬೇರೆಲ್ಲೂ ಕಾಣದ ಅತ್ಯುತ್ಕೃಷ್ಟ ವಜ್ರಗಳ ಹೊಳಪನ್ನು ಪ್ರದರ್ಶಿಸುತ್ತದೆ. ಈ ಸಂಜ್ಞೆಯು ಅಷ್ಟು ಮಹತ್ವದ್ದಲ್ಲವಾಗಿ ತೋರಿದರೂ ಕೂಡಲೇ ಸೆರೆಹಿಡಿಯುತ್ತದೆ. ಸೂಕ್ಷ್ಮ ಸ್ಟೈಲ್‌ನ ಒಕ್ಕೂಟದಲ್ಲಿ ಚಿತ್ರಿಸಲಾಗಿರುವ ಚಿತ್ರವು, ಅದಿತಿ ಅವರು ಈ ಸ್ಥಳವನ್ನು ಪ್ರವೇಶಿಸುವುದನ್ನೇ ಅನುಸರಿಸುತ್ತಾ, ಆಧುನಿಕ ಆಭರಣವನ್ನು ಮುನ್ನೆಲೆಗೆ ತಂದು ಸಹಜವಾಗಿ, ಅದೇ ಅದರ ಕೇಂದ್ರಬಿಂದು ಆಗಿರುವಂತೆ ತೋರಿಸುತ್ತದೆ. ಆಕೆ ಧರಿಸಿರುವ ವಜ್ರಗಳ ಅಚಲ ಹೊಳಪಿನಿಂದಾಗಿ, ಮಾತುಕತೆಗಳು ಸ್ಥಗಿತಗೊಳ್ಳುತ್ತವೆ, ನೋಟ ನಿಶ್ಚಲವಾಗುತ್ತದೆ ಮತ್ತು ಗಮನ ಅವರತ್ತಲೇ ಸೆಳೆಯಲ್ಪಡುತ್ತದೆಯೇ ಹೊರತು ಅವರ ಸಂಜ್ಞೆಗಳೆಡೆಗೆ ಅಲ್ಲ. ಹಾಗೆ ಮಾಡುವಾಗ ಚಿತ್ರವು ಅಸಾಮಾನ್ಯ ಹೊಳಪು ತಲೆಗಳನ್ನು ತಿರುಗಿಸಿ ಸೆರೆಹಿಡಿಯುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಜೀವಂತವಾಗಿ ತಂದಿದೆ.

“Dil Abhi Bhara Nahin…”. ಎಂಬ ಇಂದ್ರಿಯದ ಸಿಗ್ನೇಚರ್ ಸಾಲಿನಿಂದ ಪ್ರೇರಿತಗೊಂಡ ಮೈಕಿ ಮ್ಯಾಕ್ ಕ್ಲಿಯರಿ (Mikey McCleary) ಅವರು ವಿಶೇಷವಾಗಿ ರಚಿಸಿರುವ ಟ್ರ್ಯಾಕ್ ಕಥೆಯನ್ನು ಇನ್ನಷ್ಟು ವರ್ಧಿಸುತ್ತದೆ. ಆಧುನಿಕ ಸಂದರ್ಭಕ್ಕಾಗಿ ಮರುಕಲ್ಪಿಸಲಾಗಿರುವ ಈ ಕ್ಲಾಸಿಕ್ ಹಾಡಿನ ಗೀತೆ, ತತ್ಕಾಲೀನ ಶಬ್ದವನ್ನು ಅದರ ಹಿಂದಿರುವ ಕಾಲಾತೀತ ಭಾವನೆಯೊಡನೆ ಮೇಳೈಸಿ ಸುಂದರ ಕ್ಷಣವನ್ನು ಆಸ್ವಾದಿಸುವ ನಿಧಾನ ಬಯಕೆಯನ್ನು ಸೆರೆಹಿಡಿಯುತ್ತದೆ. ಸಾಹಿತ್ಯವು, ವಜ್ರದ ನಕ್ಷತ್ರದಂತಹ ಹೊಳಪಿನತ್ತ ದೃಷ್ಟಿನೆಟ್ಟು ಇಂತಹ ಮನಸೂರೆಗೊಳ್ಳುವ ಹೊಳಪು ಎಲ್ಲಿಂದ ಬಂತು ಎಂದು ಕೇಳುವ ವೀಕ್ಷಕರ ಅಚ್ಚರಿಯನ್ನು ಪ್ರತಿಧ್ವನಿಸುತ್ತದೆ. ಸಂಗೀತವು ವಿಶುವಲ್ ಪಯಣವನ್ನು ಪ್ರತಿಫಲಿಸಿ, ವೀಕ್ಷಕರನ್ನು ತನ್ನ ಪ್ರಚೋದನೀಯ ಹೊಳಪಿನೊಂದಿಗೆ ಸೆಳೆಯುವ ಸಮಯದಲ್ಲೇ “ಆಭರಣದ ವಿಷಯ ಬಂದರೆ, ಇನ್ನೂ ಬೇಕು ಎನ್ನುವುದಕ್ಕೆ ಯಾವಾಗಲೂ ಕಾರಣವಿರುತ್ತದೆ “ ಎಂಬ ಸಾರ್ವತ್ರಿಕ ಸತ್ಯವನ್ನು ಪ್ರತಿಧ್ವನಿಸುತ್ತದೆ

ಈ ಪ್ರಚಾರದ ಬಗ್ಗೆ ಮಾತನಾಡುತ್ತಾ, ಇಂದ್ರಿಯದ ಮಾರ್ಕೆಟಿಂಗ್ ಮತ್ತು ವಿಶುವಲ್ ಮರ್ಚೆಂಡೈಸಿಂಗ್ ವಿಭಾಗದ ಮುಖ್ಯಸ್ಥ ಶಾಂತಿಸ್ವರೂಪ್ ಪಾಂಡ “ವಜ್ರದ ವರ್ಗವು ಸಾಂಪ್ರದಾಯಿಕವಾಗಿ, ಗ್ರಾಹಕರು ಅನೇಕ ವೇಳೆ ವಿಶ್ವಾಸವಿಡುವ ಆದರೆ ಸುಲಭವಾಗಿ ಕಲ್ಪಿಸಿಕೊಳ್ಳಲಾರದ ತಾಂತ್ರಿಕ ಮಾನದಂಡಗಳ ಮೂಲಕ ಗುಣಮಟ್ಟವನ್ನು ತಿಳಿಸುತ್ತಾ ಬಂದಿದೆ. ‘Sparkle Like No Other’ ಪ್ರಚಾರದ ಮೂಲಕ, ಒಂದು ತಾಂತ್ರಿಕ ಉತ್ಪನ್ನ ಸತ್ಯವನ್ನು ಒಂದು ಶಕ್ತಿಶಾಲಿ ಗ್ರಾಹಕ ಕಥೆಯಾಗಿ ಪರಿವರ್ತಿಸುವ ಮೂಲಕ ಆ ಅಂತರವನ್ನು ಕಡಿಮೆ ಮಾಡಬೇಕೆಂದಿದ್ದೆವು. ವಜ್ರದ ಬಗ್ಗೆ ಜನರು ಮೊದಲು ಗಮನಿಸುವ ಅಂಶಗಳ ಪೈಕಿ ಒಂದೆಂದರೆ ಹೊಳಪು. ಆದರೂ ಅದು ಬಹಳ ಅಪರೂಪಕ್ಕೆ ಸಂವಾದದ ಕೇಂದ್ರಬಿಂದುವಾಗಿತ್ತು. ಈ ಪ್ರಚಾರವು, ಹೊಳಪನ್ನು ಕೇವಲ ಒಂದು ಸೌಂದರ್ಯ ಗುಣವನ್ನಾಗಿ ಮಾತ್ರವಲ್ಲದೆ, ಗುಣಮಟ್ಟದ ಗೋಚರೀಯ ಅಭಿವ್ಯಕ್ತಿಯಾಗಿಯೂ ಮರುರೂಪಿಸುತ್ತದೆ. ಈ ಚಿತ್ರದ ಮೂಲಕ, ಸಂಗೀತ, ನಮ್ಮ ಇನ್-ಸ್ಟೋರ್ ಅನುಭವ ಮತ್ತು SparkleScope ಮೂಲಕ ನಾವು ಗ್ರಾಹಕರು ವ್ಯತ್ಯಾಸವನ್ನು ಸ್ವತಃ ನೋಡುವ, ಭಾವಿಸುವ ಮತ್ತು ಅರ್ಥಮಾಡಿಕೊಳ್ಳುವಂತಹ ಒಂದು ಸಂಪರ್ಕಗೊಂಡ ಬ್ರ್ಯಾಂಡ್ ಅನುಭವವನ್ನು ಸೃಷ್ಟಿಸುತ್ತಿದ್ದೇವೆ.”

ಒಗಿಲ್ವಿ ಇಂಡಿಯಾದ ಹಿರಿಯ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಬ್ಯೂಟಿ ಅಂಡ್ ಲಕ್ಷುರಿ(ವೆಸ್ಟ್) ವಿಭಾಗದ ಕ್ರಿಯೇಟಿವ್ ಹೆಡ್ ತನುಜ ಭಟ್ಟ್ ತಮ್ಮ ಮಾತುಗಳನ್ನು ಸೇರಿಸುತ್ತಾ “ಇಂದ್ರಿಯ ವಜ್ರಗಳು ಒಂದು ವಿಶಿಷ್ಟ ಮುಖದೊಂದಿಗೆ ಬರುತ್ತವೆ. ಅವು, ವರ್ಗದ ಅತ್ಯಂತ ಹೊಳೆಯುವ ವಜ್ರಗಳಾಗಿವೆ. ಆದ್ದರಿಂದ, ನಮ್ಮ ಸೃಜನಶೀಲತೆಯ ಆಧಾರ ಸರಳವಾಗಿತ್ತು: ಸರಿಸಾಟಿಯಿಲ್ಲದ ಹೊಳಪು. ನೋಡುವ ಪ್ರತಿಯೊಂದು ಕಣ್ಣನ್ನು ಸೆರೆಹಿಡಿಯುವ ಮತ್ತು ವಜ್ರಗಳನ್ನು ಪ್ರೀತಿಸುವ ಪ್ರತಿಯೊಂದು ಹೃದಯವನ್ನೂ ಸೆರೆಹಿಡಿಯುವ ಇಂದ್ರಿಯ ವಜ್ರಗಳ ಅತ್ಯುತ್ಕೃಷ್ಟವಾದ, ಕೈಯಿಂದ ಆರಿಸಲ್ಪಟ್ಟ ಗುಣಮಟ್ಟವನ್ನು ತೋರಿಸುವುದಕ್ಕಾಗಿಯೇ ಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು.”

ಜಾಗತಿಕ ವಜ್ರ ಉದ್ದಿಮೆಯ ಹೃದ್ಭಾಗದಲ್ಲಿ ಕುಳಿತಿರುವ ಭಾರತದಲ್ಲಿ, ಜಗತ್ತಿನ 90%ಗಿಂತ ಹೆಚ್ಚಿನ ವಜ್ರ ಕಟ್ ಮತ್ತು ಪಾಲಿಶ್‌ಅನ್ನು ಸೂರತ್ ಮತ್ತು ಮುಂಬೈಗಳಂತಹ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತದೆ. ಆದಾಗ್ಯೂ, ಈ ಆಳವಾಗಿ-ಬೇರುಬಿಟ್ಟ ನೈಪುಣ್ಯತೆಯ ಹೊರತಾಗಿಯೂ, ವಜ್ರಾಭರಣ ಬಳಕೆ ಅತ್ಯಂತ ಕಡಿಮೆ, ಅಂದರೆ 15%ಗಿಂತ ಕಡಿಮೆ ಇದೆ. ಸಾಂಪ್ರದಾಯಿಕ ವಜ್ರ ಖರೀದಿಯು ಸದಾ ತಾಂತ್ರಿಕ ವಿನಿರ್ದೇಶನಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ. ಇಂದ್ರಿಯದ ಸ್ಪಾರ್ಕ್ಲ್(ಹೊಳಪಿನ) ಕಥೆ, ಈ ಗಮನಕೇಂದ್ರೀಕರಣವನ್ನು ವಾಸ್ತವ ಜಗತ್ತಿನ ವಿಶುವಲ್ ಕಾರ್ಯಕ್ಷಮತೆಗೆ ಬದಲಾಯಿಸಿ, ಗ್ರಾಹಕರು ಪಾರದರ್ಶಕತೆ ಹಾಗೂ ವಿಶ್ವಾಸ ಮೂಲಕ ವಜ್ರದ ಹೊಳಪಿನ ಮೌಲ್ಯ ಮಾಪನ ಮಾಡಿ ಮಾಹಿತಿಯುಕ್ತ ತೀರ್ಮಾನಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಸಾಂಪ್ರದಾಯಿಕ ಗ್ರೇಡಿಂಗ್ ಮಾನದಂಡಗಳಾಚೆ ಸಾಗುತ್ತಾ, ವಜ್ರದ ಕಟ್ ಮತ್ತು ಆಯ್ಕೆಯಲ್ಲಿಇಂದ್ರಿಯದ ದೃಷ್ಟಿಕೋನವು, ವಜ್ರವು ಅತ್ಯಂತ ಪರಿಣಾಮಕಾರಿಯಾಗಿ ಅತ್ಯುತ್ಕೃಷ್ಟವಾದ ಪ್ರಖರತೆ, ಜ್ವಾಲೆ ಮತ್ತು ಮಿನುಗು ಒದಗಿಸಲು ಬೆಳಕನ್ನು ಪ್ರತಿಫಲಿಸಿ, ಹೊರಸೂಸಿ ಹಿಂದಿರುಗಿಸುವ ಗುಣದ ಮೌಲ್ಯಮಾಪನ ಮಾಡುತ್ತದೆ. 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಈ ಕಠಿಣ ಮಾನದಂಡಗಳನ್ನು ಪೂರೈಸುತ್ತದೆ.

Sparkle Like No Other’ನೊಂದಿಗೆ ಇಂದ್ರಿಯ, ಆಧುನಿಕ ಆಭರಣ ಗಮ್ಯವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಲೇ, ಭವ್ಯವಾದ ಪ್ರತಿನಿತ್ಯದ ಧರಿಸುವಿಕೆಗಳಿಂದ ಹಿಡಿದು, ಸಂದರ್ಭ, ಹಬ್ಬ ಮತ್ತು ವಿವಾಹ ಸಂಗ್ರಹಗಳವರೆಗೆ, ವಿಶಾಲ ಶ್ರೇಣಿಯ ವಜ್ರಾಭರಣಗಳನ್ನು ಒದಗಿಸುತ್ತಿದೆ. ಕಲಾವಂತಿಕೆ, ಆವಿಷ್ಕಾರ ಮತ್ತು ಗ್ರಾಹಕ ಅರಿವನ್ನು ಮಿಶ್ರಣಗೊಳಿಸುವ ಸಮಯದಲ್ಲೇ ಬ್ರ್ಯಾಂಡ್, ವಜ್ರ ಖರೀದಿಗೆ ಹೆಚ್ಚು ಪಾರದರ್ಶಕವಾದ ಹಾಗೂ ಅನುಭವ-ನಿರ್ದೇಶಿತ ದೃಷ್ಟಿಕೋನವನ್ನು ಎತ್ತಿಹಿಡಿಯುತ್ತಿದೆ.

ಪ್ರಚಾರವು, 360-ಡಿಗ್ರಿ, ಮಾಧ್ಯಮದ ಮೂಲಕ ವರ್ಧನೆಗೊಂಡು, ತಿಳುವಳಿಕೆಯಿಂದ ಹಿಡಿದು ಅನುಭವದವರೆಗೆ ಅಡಚಣೆರಹಿತ ಗ್ರಾಹಕ ಪಯಣವನ್ನು ಸೃಷ್ಟಿಸುತ್ತಿದೆ.

Previous Post

ತುಳುನಾಡ ರಕ್ಷಣಾ ವೇದಿಕೆ, ಉಡುಪಿ ಜಿಲ್ಲೆ, ಬ್ರಹ್ಮಾವರ ಘಟಕದ ಪೂರ್ವಭಾವಿ ಸಭೆ ನೂತನ ಪದಾಧಿಕಾರಿಗಳ ಆಯ್ಕೆ

Next Post

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News