ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಿಲಿಕಲ್ಲು ಎಂಬಲ್ಲಿ ಜೂನ್ 24ರ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ.
ಸಂದೀಪ್ ಪೂಜಾರಿ ಪಿಲಿಕಲ್ಲು ಎಂಬುವರು ಕಾರ್ಕಳ ಪೇಟೆಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಚಿರತೆಯೊಂದು ಅವರಿಗೆ ಕಾಣಿಸಿಕೊಂಡಿದ್ದು, ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಅವರು ಸೆರೆಹಿಡಿದಿದ್ದಾರೆ.
ಈ ರಸ್ತೆಯ ಸ್ವಲ್ಪ ದೂರದಲ್ಲಿಯೇ, ಶಿಕ್ಷಣ ಸಂಸ್ಥೆಯಿದ್ದು ಮಕ್ಕಳು ಮತ್ತು ಜನರು ಓಡಾಡುವ ಪ್ರದೇಶವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.






