Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದ ಕುಟುಂಬ | ಟೆರೆಸ್‌ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು

Dhrishya News by Dhrishya News
11/08/2026
in ಸುದ್ದಿಗಳು
0
ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು
0
SHARES
57
VIEWS
Share on FacebookShare on Twitter

ಉಡುಪಿ: ಶಿಕ್ಷಕಿಯೊಬ್ಬರ ಮನೆಯಲ್ಲಿ ಕಳ್ಳರು ನುಗ್ಗಿ ಸುಮಾರು ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಕೊಡಂಕೂರು ಪತ್ತೂರು ಗ್ರಾಮದ ಸಾಯಿಬಾಬಾ ನಗರದ ನಿವಾಸಿ, ಮೈಸೂರು ಜಿಲ್ಲೆಯ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಶಶಿರೇಖಾ ಬಿ. (38) ಅವರು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಮೇ 25ರಂದು ರಾತ್ರಿ 9 ಗಂಟೆಗೆ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು.

ಆಗಸ್ಟ್‌ 9ರಂದು ರಾತ್ರಿ 10.30ರ ಸುಮಾರಿಗೆ ಪತಿ ಶರತ್‌ ಕುಮಾರ್‌ ಎಂ.ಬಿ. ಹಾಗೂ ಮನೆಯವರೊಂದಿಗೆ ಮನೆಗೆ ವಾಪಸ್‌ ಬಂದಾಗ ಮನೆಯೊಳಗಿನ ಕಪಾಟು ಹಾಗೂ ಬೀರುಗಳ ಬಾಗಿಲು ತೆರೆದಿರುವುದು ಮತ್ತು ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

ಕಳ್ಳರು ಮನೆಯ ಪ್ರವೇಶದ್ವಾರವನ್ನು ಯಾವುದೋ ಆಯುಧದಿಂದ ಮೀಟಿ ತೆರೆಯಲು ಪ್ರಯತ್ನಿಸಿದ್ದು, ಬಳಿಕ ಮನೆಯ ದಕ್ಷಿಣ ಭಾಗದ ಗೋಡೆಯನ್ನು ಹತ್ತಿ ಟೆರೆಸ್‌ ಮೇಲಿನ ಬಾಗಿಲನ್ನು ಆಯುಧದಿಂದ ಮೀಟಿ ತೆರೆದು ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ.

ಮನೆಯ ಬೆಡ್‌ರೂಂನ ಕಪಾಟಿನಲ್ಲಿದ್ದ 100 ಗ್ರಾಂ ತೂಕದ ಚಿನ್ನದ ಸರ, 1 ಗ್ರಾಂ ಹಾಗೂ ½ ಗ್ರಾಂ ತೂಕದ ಚಿನ್ನದ ಕಾಯಿನ್‌ಗಳು, ಮತ್ತೊಂದು ಬೆಡ್‌ರೂಂನಲ್ಲಿದ್ದ ಬೆಳ್ಳಿಯ ಚೆಂಬು, ಹರಿವಾಣ, ಪಂಚಪಾತ್ರೆ, ತಟ್ಟೆ, ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಅರಸಿನ ಕುಂಕುಮ ಬಟ್ಟಲು, ಎರಡು ಬೆಳ್ಳಿಯ ದೀಪಗಳು ಹಾಗೂ ಬೆಳ್ಳಿಯ ಕಾಲುಚೈನ್‌ ಸೇರಿದಂತೆ ಒಟ್ಟು 1 ಕೆಜಿ 650 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಕಳವಾಗಿವೆ.

ಇದರ ಜೊತೆಗೆ ಮನೆಯಲ್ಲಿದ್ದ ₹40,000 ನಗದು ಕೂಡ ಕಳ್ಳತನವಾಗಿದ್ದು, ಚಿನ್ನ, ಬೆಳ್ಳಿ ಹಾಗೂ ನಗದು ಸೇರಿ ಒಟ್ಟು ₹12,00,000 ಮೌಲ್ಯದ ಸೊತ್ತು ಕಳವಾಗಿರುವುದಾಗಿ ದೂರು ನೀಡಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Previous Post

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

Next Post

ಮೈಕ್ರೋಸಾಫ್ಟ್‌ನಿಂದ ಮಾಹೆಯಲ್ಲಿ ಐದು ಅತ್ಯಾಧುನಿಕ ಎಐ ತಂತ್ರಜ್ಞಾನ ಲ್ಯಾಬ್‌ಗಳ ಸ್ಥಾಪನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮೈಕ್ರೋಸಾಫ್ಟ್‌ನಿಂದ ಮಾಹೆಯಲ್ಲಿ ಐದು ಅತ್ಯಾಧುನಿಕ ಎಐ ತಂತ್ರಜ್ಞಾನ ಲ್ಯಾಬ್‌ಗಳ ಸ್ಥಾಪನೆ

ಮೈಕ್ರೋಸಾಫ್ಟ್‌ನಿಂದ ಮಾಹೆಯಲ್ಲಿ ಐದು ಅತ್ಯಾಧುನಿಕ ಎಐ ತಂತ್ರಜ್ಞಾನ ಲ್ಯಾಬ್‌ಗಳ ಸ್ಥಾಪನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಛಲವೊಂದಿದ್ದರೆ ಸಾಧನೆ ಸಾದ್ಯ, ಶಿಸ್ತೊಂದಿದ್ದರೆ ಗೆಲುವು ನಿಶ್ಚಿತ – ಶ್ರೀ ವೆಂಕಟೇಶ ಭಟ್

ಛಲವೊಂದಿದ್ದರೆ ಸಾಧನೆ ಸಾದ್ಯ, ಶಿಸ್ತೊಂದಿದ್ದರೆ ಗೆಲುವು ನಿಶ್ಚಿತ – ಶ್ರೀ ವೆಂಕಟೇಶ ಭಟ್

09/09/2026
ಕುಂದಾಪುರ: ನಂದಿನಿ ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ₹1.10 ಲಕ್ಷ ಕಳವು..!

ಕುಂದಾಪುರ: ನಂದಿನಿ ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ₹1.10 ಲಕ್ಷ ಕಳವು..!

08/09/2026
ಕುಂದಾಪುರದಲ್ಲಿ ಮನೆಯ ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

ಕುಂದಾಪುರದಲ್ಲಿ ಮನೆಯ ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

08/09/2026
ಇಸ್ರೋ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಇಸ್ರೋ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

08/09/2026

Recent News

imunify-bot-check