Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 

Dhrishya News by Dhrishya News
21/06/2026
in ಸುದ್ದಿಗಳು
0
ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 
0
SHARES
3
VIEWS
Share on FacebookShare on Twitter

ಮಣಿಪಾಲ, ಜೂನ್ 21, 2026: ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), “ಆರೋಗ್ಯಕರ ವಯೋ ವೃದ್ಧಿಗಾಗಿ ಯೋಗ” ಎಂಬ ಆಶಯದಡಿ 2026ರ ಅಂತರರಾಷ್ಟ್ರೀಯ ಯೋಗ ದಿನವನ್ನು ಉತ್ಸುಕತೆಯಿಂದ ಆಚರಿಸಲಾಯಿತು. ಮಾಹೆಯ ಸಮಗ್ರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ (Centre for Integrative Medicine and Research -CIMR) ಯೋಗ ವಿಭಾಗದ ವತಿಯಿಂದ “ಯೋಗ ಸಂಗಮ” ಎಂಬ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಹಾಗೂ ಸಮುದಾಯದ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಆಚರಣೆಯು ಯೋಗದ ಸಮಗ್ರ ಆರೋಗ್ಯ ಮತ್ತು ಕ್ಷೇಮದ ಮೇಲಿನ ಶಾಶ್ವತ ಪ್ರಭಾವವನ್ನು ಪ್ರತಿಬಿಂಬಿಸಿತು. ಯೋಗ ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸ್ಪರ್ಧೆಗಳು, ತಜ್ಞರ ಉಪನ್ಯಾಸಗಳು ಹಾಗೂ ಸಮುದಾಯ ಸಹಭಾಗಿತ್ವದ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಐವತ್ತು ದಿನಗಳ ಸುದೀರ್ಘ ಅಭಿಯಾನದ ಸಮಾರೋಪವಾಗಿ ಈ ಕಾರ್ಯಕ್ರಮ ನಡೆಯಿತು. ಈ ಚಟುವಟಿಕೆಗಳು ವಿದ್ಯಾರ್ಥಿಗಳು, ಅಧ್ಯಾಪಕರು, ಆರೋಗ್ಯ ವೃತ್ತಿಪರರು, ಸಿಬ್ಬಂದಿ, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರನ್ನು ತಲುಪಿದ್ದು, ಸಮಗ್ರ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಮತ್ತಷ್ಟು ಬಲಪಡಿಸಿವೆ. 

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಸಮಕಾಲೀನ ಸಮಾಜದಲ್ಲಿ ಯೋಗದ ಶಾಶ್ವತ ಪ್ರಸ್ತುತತೆಯನ್ನು ಒತ್ತಿಹೇಳಿದರು. “ಯೋಗವು ಭಾರತವು ಮಾನವಕುಲಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ. ಇಂದು ಅದು ಸುಮಾರು 190 ರಾಷ್ಟ್ರಗಳಲ್ಲಿ ಜನಪ್ರಿಯವಾಗಿದೆ. ಭೌಗೋಳಿಕ ಗಡಿಗಳು, ಸಂಸ್ಕೃತಿಗಳು ಮತ್ತು ವಯೋಮಿತಿಗಳನ್ನು ಮೀರಿ ವಿಶ್ವದಾದ್ಯಂತ ಜನರನ್ನು ಯೋಗ ಒಂದಾಗಿಸಿದೆ. ವಯೋವೃದ್ಧ ಜನಸಂಖ್ಯೆ ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಹೆಚ್ಚುತ್ತಿರುವ ಸವಾಲುಗಳನ್ನು ಸಮಾಜಗಳು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ತಡೆಗಟ್ಟುವಿಕೆ, ಆರೋಗ್ಯ ಸಂರಕ್ಷಣೆ ಮತ್ತು ಸ್ವಯಂ ಆರೈಕೆಯನ್ನು ಒಳಗೊಂಡ ಸರಳವಾದ ಆದರೆ ಪರಿಣಾಮಕಾರಿ ಪರಿಹಾರವನ್ನು ಯೋಗ ಒದಗಿಸುತ್ತದೆ. ಆರೋಗ್ಯ ಸೇವೆ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಮಾಹೆ ಹೆಮ್ಮೆಪಡುತ್ತದೆ. ಇದರ ಮೂಲಕ ಆರೋಗ್ಯವಂತ ಹಾಗೂ ಹೆಚ್ಚು ಸ್ಥೈರ್ಯಶಾಲಿ ಸಮುದಾಯಗಳ ನಿರ್ಮಾಣಕ್ಕೆ ನಾವು ಕೊಡುಗೆ ನೀಡುತ್ತಿದ್ದೇವೆ” ಎಂದು ಅವರು ಹೇಳಿದರು. 

ವೈದ್ಯ ವಿಜ್ಞಾನವು ನಮ್ಮ ಜೀವನಕ್ಕೆ ವರ್ಷಗಳನ್ನು ಹೆಚ್ಚಿಸಿದರೆ, ಯೋಗವು ಆ ವರ್ಷಗಳಿಗೆ ಜೀವನೋತ್ಸಾಹವನ್ನು ತುಂಬುತ್ತದೆ. ಈ ಅಂತರರಾಷ್ಟ್ರೀಯ ಯೋಗ ದಿನದ ‘ಆರೋಗ್ಯಕರ ವಯೋವೃದ್ಧಿಗಾಗಿ ಯೋಗ’ ಎಂಬ ಧ್ಯೇಯವಾಕ್ಯವು ನಮಗೆ ಮಹತ್ವದ ಸಂಗತಿಯನ್ನು ನೆನಪಿಸುತ್ತದೆ—ದೇಹದ ಪಟುತ್ವ, ಸಹನಶಕ್ತಿ ಮತ್ತು ಶಾಂತ ಮನಸ್ಸುಗಳು ಐಷಾರಾಮದ ಸಂಗತಿಗಳಲ್ಲ; ಅವು ಆರೋಗ್ಯಕರ ಜೀವನದ ತಂತ್ರಗಳಾಗಿವೆ. ನಿರಂತರ ಡಿಜಿಟಲ್ ಗೊಂದಲಗಳ ನಡುವೆ ಸಾಗುತ್ತಿರುವ ನಮ್ಮ ವಿದ್ಯಾರ್ಥಿಗಳಿಗೆ ಯೋಗದ ಚಾಪೆಯು ಮನಸ್ಸು ಮತ್ತು ದೇಹವನ್ನು ಮರುಸ್ಥಾಪಿಸುವ ಶಕ್ತಿಶಾಲಿ ಸಾಧನವಾಗಿದೆ,” ಎಂದು ಅವರು ಹೇಳಿದರು. 

ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ವಿ.ಎಸ್.ಎಂ. (ನಿವೃತ್ತ), ಅವರು ತಡೆಗಟ್ಟುವ ಆರೋಗ್ಯ ಸೇವೆಯ ಮಹತ್ವ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರವನ್ನು ವಿವರಿಸಿದರು. “ನಾವು ಮಾಡಬಹುದಾದ ಅತ್ಯುತ್ತಮ ಹೂಡಿಕೆ ಎಂದರೆ ನಮ್ಮ ಆರೋಗ್ಯದ ಮೇಲಿನ ಹೂಡಿಕೆ. ಜೀವನದುದ್ದಕ್ಕೂ ದೈಹಿಕ ಕ್ಷಮತೆ, ಮಾನಸಿಕ ನೆಮ್ಮದಿ ಹಾಗೂ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗವು ಅಗತ್ಯ ಸಾಧನಗಳನ್ನು ಒದಗಿಸುತ್ತದೆ. ವಿಶ್ವದ ಆರೋಗ್ಯ ವ್ಯವಸ್ಥೆಗಳು ದೀರ್ಘಕಾಲಿಕ ಕಾಯಿಲೆಗಳು ಮತ್ತು ವಯೋವೃದ್ಧ ಜನಸಂಖ್ಯೆಯ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವಾಗ, ಯೋಗದಂತಹ ಅಭ್ಯಾಸಗಳು ಆರೋಗ್ಯಕರ ಜೀವನಶೈಲಿ ಮತ್ತು ತಡೆಗಟ್ಟುವ ಆರೈಕೆಯಲ್ಲಿ ಪರಿವರ್ತನಾತ್ಮಕ ಪಾತ್ರ ವಹಿಸಬಲ್ಲವು. ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸುವ ಜವಾಬ್ದಾರಿ ಮಾಹೆಯಂತಹ ಶಿಕ್ಷಣ ಸಂಸ್ಥೆಗಳ ಮೇಲಿದೆ” ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಮಾಹೆಯ ಅಂತರರಾಷ್ಟ್ರೀಯ ಸಂದರ್ಶಕ ಪ್ರಾಧ್ಯಾಪಕರಾದ ಡಾ. ನಾಗಭೂಷಣ ಮೂಲ್ಕಿ ಅವರು ಮಾತನಾಡಿದರು. ಯೋಗವನ್ನು ಪ್ರಚುರ ಪಡಿಸುವ ಮೂಲಕ ವಿದ್ಯಾರ್ಥಿ ಹಾಗೂ ಬೋಧಕ ಸಮುದಾಯದ ಒಳಿತಿಗಾಗಿ ವಿಶೇಷ ಕೊಡುಗೆ ನೀಡಿದ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಹಿಂದಿನ ನಿರ್ದೇಶಕಿ ಹಾಗೂ ಮಣಿಪಾಲ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ಗೀತಾ ಮಯ್ಯ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಯೋಗ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ನಿತಿನ್ ಪಾಟೀಲ್ ಸ್ವಾಗತಿಸಿದರು. ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕರಾದ ಡಾ. ಪೂರ್ಣಿಮಾ ಪಾಂಡುರಂಗ ಕುಂದಾಪುರ ವಂದಿಸಿದರು. 

2026ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಸಮಗ್ರ ಆರೋಗ್ಯವನ್ನು ಉತ್ತೇಜಿಸುವ ಮತ್ತು ಆರೋಗ್ಯಕರ ವೃದ್ಧಾಪ್ಯ ಹಾಗೂ ಒಟ್ಟಾರೆ ಕ್ಷೇಮಕ್ಕಾಗಿ ಯೋಗವನ್ನು ಜೀವನಪರ್ಯಂತದ ಅಭ್ಯಾಸವಾಗಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಮಾಹೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: 

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.

Yoga Day 2 &3 -Performance of yoga by the students.
Add one line for Yoga day 4 (Geetha maiya;sitting) as caption: standing (Left to right) Dr. NJ Patil, Professor and Head of Yoga Division, Dr. Nagabhushan Moolky, International Visiting Faculty at MAHE, Dr. Sharath Rao, VIce Chancelor, MAHE Maj. Gen. Mathew Jacob VSM (Retd.), Pro Vice Chancellor (Health Sciences), MAHE and Dr. Poornima Panduranga, Director Student Affairs are in the picture.

Previous Post

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 

21/06/2026
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

21/06/2026
ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026

Recent News

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ ಮಾಹೆ; ಆರೋಗ್ಯಕರ ವಯೋವೃದ್ಧಿಗಾಗಿ ಯೋಗಕ್ಕೆ ಆದ್ಯತೆ 

21/06/2026
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

21/06/2026
ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved