Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

Dhrishya News by Dhrishya News
04/05/2026
in ಸುದ್ದಿಗಳು
0
ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!
0
SHARES
6
VIEWS
Share on FacebookShare on Twitter

ಕಾರ್ಕಳ :ದೇಶದಲ್ಲಿ ಉಂಟಾಗುತ್ತಿರುವ ಅನಿಲ ಮತ್ತು ಇಂಧನ ಕೊರತೆ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಅದರ ಪರಿಣಾಮ ಇತರ ದೇಶಗಳ ಮೇಲೂ ಬೀಳುವುದು ಸಹಜ. ಯುದ್ಧವು ಏಕಾಏಕಿ ಆರಂಭವಾಗುವುದಿಲ್ಲ; ಅದರ ಮುನ್ಸೂಚನೆಗಳು ಬಹಳ ಹಿಂದೆಯೇ ಲಭ್ಯವಾಗುತ್ತವೆ. ಆದರೂ ಭಾರತ ಅನಿಲ ಮತ್ತು ಇಂಧನ ಸಮಸ್ಯೆಯಲ್ಲಿ ಸಿಲುಕಿರುವುದಕ್ಕೆ ಹಲವು ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.
ಇತರ ದೇಶಗಳ ಮೇಲಿನ ಅವಲಂಭನೆ, ಕೆಲವೇ ರಾಷ್ಟ್ರಗಳೊಂದಿಗೆ ಸರಬರಾಜು ಒಪ್ಪಂದ ಮಾಡಿಕೊಳ್ಳುವುದು, ಪೂರ್ವಸಂಗ್ರಹಣ (ಸ್ಟ್ರಾಟೆಜಿಕ್ ರಿಸರ್ವ್) ವ್ಯವಸ್ಥೆಯ ಕೊರತೆ ಹಾಗೂ ಅನಿಲ-ಇಂಧನವನ್ನು ಕೇವಲ ಆರ್ಥಿಕ ಅಗತ್ಯವೆಂದು ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಭಾಗವಾಗಿ ನೋಡದಿರುವುದು ಇಂದಿನ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಮಸ್ಯೆಗೆ ಪರಿಹಾರವಾಗಿ ದೇಶ ಸ್ವಾವಲಂಭಿಯಾಗಬೇಕಿದ್ದು, ಸೌರ, ಜಲ, ಗಾಳಿ ವಿದ್ಯುತ್, ಜೈವಿಕ ಅನಿಲ ಸೇರಿದಂತೆ ನವೀಕರಿಸಬಹುದಾದಶಕ್ತಿ ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದಲ್ಲದೆ, ಅನಿಲ ಮತ್ತು ಇಂಧನ ಸರಬರಾಜಿಗಾಗಿ ಒಂದೆರಡು ದೇಶಗಳ ಮೇಲಷ್ಟೇ ಅವಲಂಭಿಸದೇ, ವಿವಿಧ ತೈಲೋತ್ಪಾದಕ ರಾಷ್ಟ್ರಗಳೊಂದಿಗೆ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ. ತುರ್ತು ಪರಿಸ್ಥಿತಿಗಳಿಗೆ ಮಾತ್ರವಲ್ಲದೆ, ದೇಶದ ದೀರ್ಘಕಾಲೀನ ಅಗತ್ಯಗಳನ್ನು ಪೂರೈಸುವಂತೆ ಪೂರ್ವಸಂಗ್ರಹಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಹ್ಯ ಹಾಗೂ ಆಂತರಿಕ ಭದ್ರತೆ ಎರಡೂ ಸಮಾನವಾಗಿ ಬಲವಾಗಿದ್ದಾಗ ಮಾತ್ರ ರಾಷ್ಟ್ರೀಯ ಭದ್ರತೆ ಸಾಧ್ಯವಾಗುತ್ತದೆ. ಬಲವಾದ ಆಂತರಿಕ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿರುವುದೇ ಇಂದಿನ ಸಮಸ್ಯೆಗೆ ಪ್ರಮುಖ ಕಾರಣ ಎಂದು ಅವರು ಟೀಕಿಸಿದ್ದಾರೆ.

Previous Post

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 04 ಸೋಮವಾರ )

Next Post

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

23/06/2026
ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

23/06/2026
ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

23/06/2026
ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

23/06/2026

Recent News

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

23/06/2026
ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

23/06/2026
ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

23/06/2026
ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

23/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved