ಉಡುಪಿ:ಮೇ, 02:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.
*01,🐏ಮೇಷ ರಾಶಿ🐏*
📃,ಕುಟುಂಬಕ್ಕೆ ಇಂದು ಅನೇಕಲಾಭಗಳುದೊರೆಯುತ್ತದೆ.ಇನ್ನೊಬ್ಬರಿಂದ ಪಡೆದ ಪ್ರಚೋದನೆಯ ಶಕ್ತಿ ಕೆಲ ಕಾಲ ಮಾತ್ರ ಉಳಿಯುವುದು. ಅತಿಯಾದಮನೆಯಕೆಲಸದಿಂದ.ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವುನಂಬಲಾರಿರಿ.ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿಉತ್ಸಾಹಿಗಳು ಎದ್ದು ಕಾಣಲಿವೆ,
ಗಮನಿಸಿ:- ಇಂದು ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು,
ಪರಿಹಾರ:- ನವಗ್ರಹ ಮಂತ್ರವನ್ನು ಪಠಿಸಿ,
*02,🐂ವೃಷಭ ರಾಶಿ🐂*
📃,ಶತ್ರುಗಳು ನಿಮ್ಮ ಪತನವನ್ನುನಿರೀಕ್ಷಿಸುತ್ತಿರುತ್ತಾರೆ. ಹೊಸ ಉದ್ಯೋಗ ಸಿಗುವುದೋ ಇಲ್ಲವೋ ಎಂಬ ಅನುಮಾನ ಕಾಡುವುದು. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ,
ಗಮನಿಸಿ:- ಇಂದು ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ,
ಪರಿಹಾರ:- ಕುಬೇರ ಮಂತ್ರವನ್ನು ಪಠಿಸಿ,
*03,👥ಮಿಥುನ ರಾಶಿ👥*
📃,ಇಂದು ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಸರಕಿನ ಉದ್ಯಮದಿಂದ ಆತಂಕ. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ಶ್ರೇಷ್ಠ ವ್ಯಕ್ತಿಗಳ ಭೇಟಿಯಿಂದ ಹೊಸ ಕಾರ್ಯಗಳನ್ನು ಮಾಡಲು ಉತ್ಸುಕರಾಗಿರುವಿರಿ. ನಿಮ್ಮಮಾತಿಗೆ ಸಮಜಾಯಿಷಿ ಕೊಡಬೇಕಾದೀತು,
ಗಮನಿಸಿ:- ಇಂದುಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲಾಗುವುದಿಲ್ಲ,
ಪರಿಹಾರ:- ಗ್ರಾಮ ದೇವತೆಯನ್ನು ಪ್ರಾರ್ಥಿಸಿ,
*04,🦀ಕಟಕ ರಾಶಿ🦀*
📃,ಸರಿಯಾದ ಸ್ಥಳದಲ್ಲಿ ಹೂಡಿಕೆಯಿಂದ ಲಾಭ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು.ನಿಮ್ಮಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದವಾತಾವರಣದಲ್ಲಿ. ಕೆಲವು ಸಮಯವನ್ನು ಕಳೆದು ಬನ್ನಿ. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ನಿಮ್ಮಮಾತುಸುಳ್ಳಾಗಬಹುದು
ಗಮನಿಸಿ:- ಇಂದು ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು,
ಪರಿಹಾರ:- ಮಾತೇ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ,
*05,🦁ಸಿಂಹ ರಾಶಿ🦁*
📃,ಫಲಾಪೇಕ್ಷೆ ಇಲ್ಲದೇ ಮಾಡುವ ಸಹಾಯದ ಮೌಲ್ಯ ಅರಿವಾಗುವುದು. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರ ಬಳಿ ಸಾವಧಾನತೆಯಿಂದ ಮಾತನಾಡಿ.ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಅನಕ್ಷರಸ್ಥರ ಜೊತೆ ವಾಗ್ವಾದ ಸಲ್ಲ. ಶಕ್ತಿ ಮೀರಿದ ಕೆಲಸವನ್ನು ಮಾಡಿಆಯಾಸಮಾಡಿಕೊಳ್ಳುವುದು ಬೇಡ,
ಗಮನಿಸಿ:-ಇಂದು ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು,
ಪರಿಹಾರ:-ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ,
*06,👩🦳ಕನ್ಯಾ ರಾಶಿ👩🦳*
📃,ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಮನೆಯ ಹಿರಿಯರನ್ನು ಸಂತೋಷಪಡಿಸಿದರೆ ಅದೇ ಆಶೀಋವಾದ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ,
ಗಮನಿಸಿ:-ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ,
ಪರಿಹಾರ:- ಗಾಯಿತ್ರಿ ಮಂತ್ರವನ್ನು ಪಠಿಸಿ,
*07,⚖️ತುಲಾ ರಾಶಿ⚖️*
📃,ಮರುಕ್ಷಣವೇ ಯಾವ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ.
ನೀವು ಯಾರನ್ನು ಪೂರ್ಣವಾಗಿ ನಂಬಲಾರಿರಿ. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ.ನಿಮ್ಮತುಮುಲವನ್ನು ಅರಿತುಕೊಳ್ಳಲಾರರು, ಗಮನಿಸಿ:- ಇಂದು ನಿಮ್ಮ ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ,
ಪರಿಹಾರ:- ಕಾಳಿಕಾ ದೇವಿಯ ಪ್ರಾರ್ಥನೆ ಮಾಡಿ,
*08,🦂ವೃಶ್ಚಿಕ ರಾಶಿ🦂*
📃,ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ನಕಾರಾತ್ಮ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಸುಳಿಯಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದುನಿಮ್ಮಪಾಲಿಗಿರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು,
ಗಮನಿಸಿ:- ಇಂದು ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು,
ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,
*09,🏹ಧನು ರಾಶಿ🏹*
📃,ಇಂದು ಕಲಾವಿದರಾಗುವ ಆಸೆ ಪೂರ್ಣವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದನೆಮ್ಮದಿಯು
ನಿಮ್ಮ ಮಾತಿನಿಂದ ವಿಚಲಿತವಾಗುವುದು. ಕೇಳಿದ್ದಕ್ಕಿಂತ ಹೆಚ್ಚಿನ ಹಣ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮ್ಮ ಬದುಕನ್ನು ಖುಷಿಯಾಗಿ ಇಡಲಿದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಅವಕಾಶ ಬಂದಾಗ ಅದನ್ನು ಅಲ್ಲಗಳೆಯಬೇಡಿ,
ಗಮನಿಸಿ:- ಇಂದು ನಿಮ್ಮ ಅಸೂಯೆಯಿಂದಾಗಿವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ,
ಪರಿಹಾರ:- ಮನೆ ದೇವರ ಪ್ರಾರ್ಥನೆ ಮಾಡಿ,
*10,🐊ಮಕರ ರಾಶಿ🐊*
📃,ಮನೆಯಲ್ಲಿ ಎಲ್ಲರ ಆಗಮನದಿಂದ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಸ್ಥಾನವನ್ನು ಪಡೆಯಲು ಹಣವನ್ನು ಖರ್ಚುಮಾಡುವಿರಿ. ಮಾತಿನಿಂದ ಯಾರನ್ನೂ ಟೀಕಿಸಲು ಹೋಗಬೇಡಿ. ನಿಮ್ಮನ್ನು ಟೀಕಿಸಲು ಜನರು ಕಾದುಕುಳಿತಿರುತ್ತಾರೆ,
ಗಮನಿಸಿ:- ನಿಮ್ಮತಂದೆಯ ಮಾತನ್ನು ಉಳಿಸಿಕೊಳ್ಳಲು ಶ್ರಮಬಳಕೆಯಾಗುವುದು.
ಪರಿಹಾರ:-ಗುರುದತ್ತಾತ್ರೇಯನ. ಪ್ರಾರ್ಥನೆ ಮಾಡಿ,
*11,⚱️ಕುಂಭ ರಾಶಿ:⚱️*
📃,ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಜೀವನ ನಿಮಗೆ ಬಹಳ ಸುಖವನ್ನು ನೀಡುತ್ತದೆಎಂದನ್ನಿಸುತ್ತಿರುತ್ತದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಲಿದೆ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ. ಏನಾದರೂ ಅವಘಡಗಳು ಸಂಭವಿಸಬಹುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ,
ಗಮನಿಸಿ:- ನಿಮ್ಮ ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ,
ಪರಿಹಾರ:- ಮಾತೇ ಮಹಾಲಕ್ಷ್ಮಿಯ ಪ್ರಾರ್ಥನೆ ಮಾಡಿ,
*12,🐋ಮೀನ ರಾಶಿ🐋*
📃,ನೀವು ಪ್ರಯತ್ನಿಸಿದ ಕಾರ್ಯಗಳು ಫಲವನ್ನು ಕೊಡಲಿವೆ. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ದೂರದ ಊರಿಗೆ ಅನಿವಾರ್ಯವಾಗಿ ಹೋಗಿ ಆರೋಗ್ಯವನ್ನುಕೆಡಿಸಿಕೊಳ್ಳುವಿರಿ.ಕಳ್ಳತನದ ಅಪವಾದಿಂದ ವಾಗ್ವಾದ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಳ್ಳುವ ನಿಮ್ಮ ಸ್ವಭಾವವು ಒಳ್ಳೆಯದಲ್ಲ. ಮನೆಯ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು,
ಗಮನಿಸಿ:- ನಿಮ್ಮ ಜೀವನ ಸಂಗಾತಿಯಿಂದಸಂಪೂರ್ಣ ಬೆಂಬಲ ದೊರೆಯುತ್ತದೆ,
ಪರಿಹಾರ:-ನಿಮ್ಮ ಕುಲ ದೇವರಿಗೆ ಕಾಣಿಕೆ ನೀಡಿ,
ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್ ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟
ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ








