Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!

Dhrishya News by Dhrishya News
01/05/2026
in ಮುಖಪುಟ
0
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!
0
SHARES
7
VIEWS
Share on FacebookShare on Twitter

• ಅಮೆಜಾನ್ ಕಡಿಮೆ ಆದಾಯದ ಕುಟುಂಬದ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ನಾಲ್ಕು ವರ್ಷಗಳಿಗೆ ₹2 ಲಕ್ಷ ಹಣಕಾಸು ನೆರವನ್ನು ನೀಡುತ್ತದೆ

• ಅಮೆಜಾನ್ ಈ ಕಾರ್ಯಕ್ರಮದಲ್ಲಿ 2022ರಿಂದ ~₹50 ಕೋಟಿ (ಸುಮಾರು 6 ಮಿಲಿಯನ್ ಡಾಲರ್) ಹೂಡಿಕೆ ಮಾಡಿದೆ; ಕಂಪ್ಯೂಟರ್ ಸೈನ್ಸ್ ಶಿಕ್ಷಣ ಉಪಕ್ರಮಗಳು 50,000+ ಸರ್ಕಾರಿ ಶಾಲೆಗಳ 4.8 ಮಿಲಿಯನ್ ವಿದ್ಯಾರ್ಥಿಗಳಿಗೆ ತಲುಪಿವೆ 

• 2025ರಲ್ಲಿ ಪದವಿ ಪಡೆದ ಮೊದಲ ಸಮೂಹವು ಅಮೆಜಾನ್ ಮತ್ತು ಇತರೆ ಮುಂಚೂಣಿಯ ಕಂಪನಿಗಳಲ್ಲಿ ಶೇ.89 ನೇಮಕಾತಿ ಪ್ರಮಾಣ ಹೊಂದಿದೆ 

 

 

*ಬೆಂಗಳೂರು, ಮೇ 01, 2026:* ಅಮೆಜಾನ್ ಏಪ್ರಿಲ್ 29ರಂದು ತನ್ನ ಅಮೆಜಾನ್ ಫ್ಯೂಚರ್ ಎಂಜಿನಿಯರ್ (ಎ.ಎಫ್.ಇ.) ಕಾರ್ಯಕ್ರಮದ ಅಡಿಯಲ್ಲಿ 2026ರ 500 ಶಿಷ್ಯವೇತನಗಳನ್ನು ಪ್ರಕಟಿಸಿದ್ದು ಇದು ಕಡಿಮೆ ಆದಾಯದ ಕುಟುಂಬಗಳ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ಹಣಕಾಸು ಬೆಂಬಲ, ಮಾರ್ಗದರ್ಶನ ಮತ್ತು ತಂತ್ರಜ್ಞಾನದಲ್ಲಿ ವೃತ್ತಿಯ ಅವಕಾಶಗಳನ್ನು ನೀಡುತ್ತದೆ. ಅಮೆಜಾನ್ ಫ್ಯೂಚರ್ ಎಂಜಿನಿಯರ್ (ಎ.ಎಫ್.ಇ.) ತಂತ್ರಜ್ಞಾನ ಶಿಕ್ಷಣ ಮತ್ತು ವೃತ್ತಿಯ ಅವಕಾಶಗಳ ಲಭ್ಯತೆ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಅಮೆಜಾನ್ ನ ಜಾಗತಿಕ ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವಾಗಿದೆ. ಈ ವಿಸ್ತರಣೆಯಿಂದ ಈ ಕಾರ್ಯಕ್ರಮವು 2,000 ಸಕ್ರಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಬೆಂಬಲಿಸುತ್ತಿದೆ. 

 

ಎ.ಎಫ್.ಒ. ಸ್ಕಾಲರ್ ಶಿಪ್ ₹2 ಲಕ್ಷ ಹಣಕಾಸು ನೆರವನ್ನು ಕಡಿಮೆ ಆದಾಯದ ಕುಟುಂಬಗಳ ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ವಿಭಾಗಗಳಲ್ಲಿ ಬಿ.ಇ. ಅಥವಾ ಬಿ.ಟೆಕ್. ಪದವಿಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ನೀಡುತ್ತದೆ. ಹಣಕಾಸು ಬೆಂಬಲ ಮಾತ್ರವಲ್ಲದೆ ಈ ವಿದ್ಯಾರ್ಥಿನಿಯರು ಲ್ಯಾಪ್ ಟಾಪ್, ಬೂಟ್ ಕ್ಯಾಂಪ್ ಗಳ ಮೂಲಕ ತಾಂತ್ರಿಕ ತರಬೇತಿ, ಅಮೆಜಾನ್ ವಿಮೆನ್ ಆಫ್ ದಿ ವರ್ಲ್ಡ್ (ಡಬ್ಲ್ಯೂಒಡಬ್ಲ್ಯೂ) ಮೂಲಕ ವೆಬಿನಾರ್ ಗಳು, ಅಮೆಜಾನ್ ಎಂಜಿನಿಯರ್ ಗಳಿಂದ ಒನ್-ಆನ್-ಒನ್ ಮೆಂಟರ್ ಶಿಪ್ ಪಡೆಯುತ್ತಾರೆ ಮತ್ತು ಅವರ ಎರಡನೇ ವರ್ಷದ ನಂತರ ಎಂಟು ವಾರ ಪಾವತಿಸಿದ ಇಂಟರ್ನ್ ಶಿಪ್ ಅವಕಾಶಗಳನ್ನು ಪಡೆಯುತ್ತಾರೆ. 

 

“ಪ್ರತಿ ವಿದ್ಯಾರ್ಥಿಗೂ ಅವರ ಸಾಮರ್ಥ್ಯ ಕಂಡುಕೊಳ್ಳುವ ಅವಕಾಶವಿರಬೇಕು. ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ ಶಿಪ್ ಗಳ ಮೂಲಕ ನಾವು ಭಾರತದಾದ್ಯಂತ ಸಮುದಾಯಗಳಲ್ಲಿ ಪ್ರತಿಭಾವಂತ, ಪರಿಶ್ರಮ ಪಡುವ ವಿದ್ಯಾರ್ಥಿಗಳ ಮೂಲಕ ಉದ್ಯೋಗದ ಭವಿಷ್ಯವನ್ನು ರೂಪಿಸುವ ನಾಯಕರ ಮೇಲೆ ಹೂಡಿಕೆ ಮಾಡುತ್ತಿದ್ದೇವೆ” ಎಂದು *ಅಮೆಜಾನ್ ಎಕ್ಸ್ ಪೀರಿಯೆನ್ಸಸ್ ಅಂಡ್ ಅಪ್ ಸ್ಕಿಲ್ಲಿಂಗ್ ಉಪಾಧ್ಯಕ್ಷೆ ಕ್ಯಾಂಡಿ ಕ್ಯಾಸಲ್ ಬೆರ್ರಿ ಹೇಳಿದರು* . “2026ರ ಸ್ಕಾಲರ್ ಶಿಪ್ ಪಡೆದವರು ನಾವು ಒಟ್ಟಿಗೆ ಅಪ್ ಸ್ಕಿಲ್ಲಿಂಗ್ ಮಾರ್ಗಗಳನ್ನು ಸೃಷ್ಟಿಸಿದಾಗ ಮತ್ತು ಯುವಜನರು ಹಾಗೂ ಅವರ ಕನಸುಗಳ ನಡುವೆ ಇರುವ ಅಡೆತಡೆಗಳನ್ನು ನಿವಾರಿಸಿದಾಗ ಏನು ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ” ಎಂದರು. 

 

ಟುಗೆದರ್ ಇಂಡಿಯಾ ಸಮಿಟ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಕಟಿಸಲಾದ ವಿಸ್ತರಣೆಯು ಕಲಿಯಲು ಮತ್ತು ತಂತ್ರಜ್ಞಾನದಲ್ಲಿ ವೃತ್ತಿಗಳನ್ನು ನಿರ್ಮಿಸಿಕೊಳ್ಳಲು ಮಾರ್ಗಗಳನ್ನು ಸೃಷ್ಟಿಸಲು ಅಮೆಜಾನ್ ನ ಮುಂದುವರಿದ ಆದ್ಯತೆ ತೋರುತ್ತಿದ್ದು ಅದರಿಂದ ನಾವು ಭವಿಷ್ಯ ಸನ್ನದ್ಧವಾಗಬಹುದು. ಆಂತರಿತ ಸಮ್ಮೇಳನ ಟುಗೆದರ್ ಅಟ್ ಅಮೆಜಾನ್ ಭಾಗವಾಗಿ ಉದ್ಯೋಗಿಗಳಿಗೆ ಬೆಳೆಯಲು, ವರ್ಧಿಸಲು ಮತ್ತು ಕೌಶಲ್ಯಾಭಿವೃದ್ಧಿ, ಉದ್ಯೋಗದ ಸ್ಥಳದ ಬೆಂಬಲ ಮತ್ತು ಸಮುದಾಯ ಸಕ್ರಿಯತೆಯ ಮೂಲಕ ಸಂಪರ್ಕದಲ್ಲಿರಲು ನೆರವಾಗುವ ಉಪಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿನ ಇನ್ ದಿಸ್ ಟುಗೆದರ್ ಉಪಕ್ರಮವು ವಿದ್ಯಾರ್ಥಿಗಳು, ಗ್ರಾಹಕರು, ಸಮುದಾಯಗಳು, ಪಾಲುದಾರರು ಮತ್ತು ಉದ್ಯಮ ಮಾಲೀಕರಿಗೆ ಅಮೆಜಾನ್ ನಲ್ಲಿ ಮಾರ್ಗಗಳನ್ನು ಅನ್ವೇಷಿಸಿಕೊಳ್ಳಲು ನೆರವಾಗುತ್ತದೆ. 

 

*ಮೊದಲ ಪದವೀಧರರ ಸಮೂಹದಲ್ಲಿ ಶೇ.89ರಷ್ಟು ನೇಮಕಾತಿ*

2022ರಲ್ಲಿ 200 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಗನಾರ್ಹವಾಗಿ ವಿಸ್ತಾರಗೊಳ್ಳುತ್ತಿದ್ದು 2023ರ ನಂತರ 500 ವಾರ್ಷಿಕ ಶಿಷ್ಯವೇತನಗಳಿಗೆ ಹೆಚ್ಚಿಸಿದೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆ, ಹಣಕಾಸಿನ ಅಗತ್ಯ ಮತ್ತು ನಾಯಕತ್ವ ಸಾಮರ್ಥ್ಯ ಆಧರಿಸಿ ಕಠಿಣ ಮೌಲ್ಯಮಾಪನ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಮೊದಲ ಪದವೀಧರರಾದ ಸಮೂಹವು 2025ರಲ್ಲಿ ಶೇ.89ರಷ್ಟು ನೇಮಕಾತಿ ಪಡೆದಿದ್ದು ಅಮೆಜಾನ್ ಒಳಗೊಂಡು ಫಾರ್ಚೂನ್ 500 ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇಲ್ಲಿಯವರೆಗೆ 400 ವಿದ್ಯಾರ್ಥಿಗಳು ಅಮೆಜಾನ್ ನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಲ್ಲಿ ಇಂಟರ್ನ್ಶಿಪ್ ಗನ್ನು ಪೂರೈಸಿದ್ದು ಹೊಸ ಸಮೂಹಗಳು ಅರ್ಹತೆ ಪಡೆಯುತ್ತಿದ್ದಂತೆ ನೂರಾರು ಮಂದಿ ಇತರೆ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. 

 

ಹಲವು ವಿದ್ಯಾರ್ಥಿಗಳು ಟೈಯರ್-2 ಮತ್ತು ಟೈಯರ್-4 ನಗರಗಳ ಮೊದಲ ತಲೆಮಾರಿನ ಕಾಲೇಜು ಪದವೀಧರರಾಗಿದ್ದು ಈ ಕಾರ್ಯಕ್ರಮವು ಭಾರತದಲ್ಲಿ ಅತ್ಯಂತ ಅಗತ್ಯವಿರುವ ಪ್ರದೇಶಗಳಿಗೆ ತಲುಪಿರುವುದನ್ನು ಬಿಂಬಿಸುತ್ತದೆ. ತೆಲಂಗಾಣದ ಶ್ರೇಯ ಮೂಲ ಈಗ ಸಾಫ್ಟ್ ವೇರ್ ಡೆವಲಪ್ಮೆಂಟ್ ಎಂಜಿನಿಯರ್, ಆಂಧ್ರ ಪ್ರದೇಶದ ಕೀರ್ತಿ ಶಂಕರ ಈಗ ಕ್ಲೌಡ್ ಸಪೋರ್ಟ್ ಅಸೋಸಿಯೇಟ್ ಮತ್ತು ಮಹಾರಾಷ್ಟ್ರದ ನಾಗಪುರದ ಅಂಜಲಿ ಅಷ್ಟಕೆ ಈಗ ಡ್ಯೂಷ್ ಬ್ಯಾಂಕ್ ನಲ್ಲಿ ಗ್ರಾಜುಯೇಟ್ ಅನಲಿಸ್ಟ್ ಎನ್ನುವುದು ತಂತ್ರಜ್ಞಾನದಲ್ಲಿ ತಮ್ಮ ವೃತ್ತಿಗಳನ್ನು ರೂಪಿಸಿಕೊಂಡವರನ್ನು ತೋರಿಸುತ್ತಿದ್ದು ಇದು ದೀರ್ಘಾವಧಿ ಅವಕಾಶಗಳಿಗೆ ಕಾರ್ಯಕ್ರಮದ ಪರಿಣಾಮವನ್ನು ತೋರುತ್ತದೆ. 

 

*ಸರ್ಕಾರಿ ಶಾಲೆಗಳಲ್ಲಿ 4.8 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಿದೆ*

ಅಮೆಜಾನ್ 2022ರಿಂದ ಎ.ಎಫ್.ಇ. ಕಾರ್ಯಕ್ರಮದಲ್ಲಿ ₹ 50 ಕೋಟಿ (ಸುಮಾರು 6 ಮಿಲಿಯನ್ ಡಾಲರ್) ಮೀರಿ ಹೂಡಿಕೆ ತಂತ್ರಜ್ಞಾನದಲ್ಲಿ ಬಾಲಕಿಯರಿಗೆ ವೃತ್ತಿ ರೂಪಿಸಿಕೊಳ್ಳಲು ರಚನಾತ್ಮಕ ಮಾರ್ಗವನ್ನು ಶಿಷ್ಯವೇತನದ ಮೂಲಕ ರೂಪಿಸಿದೆ. ಈ ಶಿಷ್ಯವೇತನ ಕಾರ್ಯಕ್ರಮವನ್ನು ಫೌಂಡೇಷನ್ ಫಾರ್ ಎಕ್ಸೆಲೆನ್ಸ್ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು ನವ್ ಗುರುಕುಲ್ ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ನಿರ್ಮಿಸಿಕೊಳ್ಳಲು ಮತ್ತು ಇಂಟರ್ನ್ಶಿಪ್ ಗಳಿಗೆ ಸಿದ್ಧರಾಗಲು ತಾಂತ್ರಿಕ ತರಬೇತಿ ನೀಡುತ್ತದೆ. ಶಿಷ್ಯವೇತನಗಳ ಆಚೆಗೂ ಈ ಕಾರ್ಯ‍ಕ್ರಮವು ಭಾರತದಾದ್ಯಂತ 2021 ಮತ್ತು 2025ರ ನಡುವೆ 50,000 ಸರ್ಕಾರಿ ಶಾಲೆಗಳನ್ನು ತಲುಪಿದ್ದು ಕಂಪ್ಯೂಟರ್ ಸೈನ್ಸ್ ಮತ್ತು ಎಐ ಶಿಕ್ಷಣ ನೀಡುತ್ತಿದೆ.

Previous Post

ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವದ ಸಂಭ್ರಮ

Next Post

ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026
ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

24/06/2026

Recent News

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026
ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

ಉಡುಪಿ : ಜುಲೈ 5ರಂದು ಮೆಹೆಂದಿ ಸ್ಪರ್ಧೆ..!

24/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved