ಕಾರ್ಕಳ : ಗೋ ಹತ್ಯೆಗೆ ಸಂಪೂರ್ಣ ನಿಷೇಧ ಹಾಗೂ ಗೋವಿಗೆ ರಾಷ್ಟ್ರಮಾತೆಯ ಸ್ಥಾನವನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಗೋ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಿದರು.
ಕಾರ್ಕಳ ತಾಲೂಕು ಕಚೇರಿಯಲ್ಲಿ ಸದಸ್ಯರು ಗೋಮಾತೆಯ ಗೌರವ ಅಭಿಯಾನದಡಿ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಗ್ರಹಿಸಿದರು.
ಗೋ ಸಂರಕ್ಷಣಾ ಸಮಿತಿಯ ರಾಜ್ಯ ಮಹಿಳಾ ಸಂಚಾಲಕಿ ಶ್ರೀಮತಿ ರಮಿತಾ ಸೂರ್ಯವಂಶಿ ಮಾತನಾಡಿ ದೇಶದಲ್ಲಿ ಮೊದಲ ಹಂತದ ಅಭಿಯಾನದ ಭಾಗವಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಮಣ್ಣಿನ ಫಲವತ್ತತೆಯನ್ನು ಉಳಿಸಬೇಕಾದರೆ ಗೋವಿನ ಸಂತತಿ ಇರಲೇಬೇಕು, ಆರೋಗ್ಯಕರ ಭಾರತಕ್ಕಾಗಿ ಗೋವಿನ ಸಂತತಿಯನ್ನು ಉಳಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕೆಂದು ಮನವಿ ಮಾಡಿದರು . ರಾಷ್ಟ್ರೀಯ ಪ್ರಾಣಿ ಮಾಡುವುದರ ಮುಖಾಂತರ ಗೋಹತ್ಯೆಯನ್ನು ತಡೆಯಬೇಕು ಪ್ರತ್ಯೇಕ ಸಚಿವಾಲಯ ತೆರೆದು ಬಜೆಟ್ ಹಣವನ್ನು ಮೀಸಲಿಡಬೇಕು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಶಾಲೆ ತೆರೆಯಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ನಂತರ ದಿನಗಳಲ್ಲಿ ಜಂಥರ್ ಮಂತರ್ ನಲ್ಲಿ ಸಾಧುಸಂತರ ನೇತೃತ್ವದಲ್ಲಿ ಹೋರಾಟ ನಡೆಯಲಾಗುತ್ತದೆ ಎಂದು ತಿಳಿಸಿದರು. ತಾಲೂಕು ಕಚೇರಿಯ ಸುರೇಶ್ ಗ್ರಾಮಸೆವಾಕ್ ಅವರಿಗೆ ಮನವಿ ಸಲ್ಲಿಸಿದರು, ಗೋ ಪ್ರೇಮಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಶಿರಡಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.






