Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾಪು ಭೀಕರ ಅಪಘಾತ: ಸ್ಕೂಟಿಗೆ ಬಸ್ ಡಿಕ್ಕಿ – 8 ವರ್ಷದ ಬಾಲಕಿ ಸಾವು..!

Dhrishya News by Dhrishya News
22/04/2026
in ಸುದ್ದಿಗಳು
0
ಮಾಬುಕಳ ಸೇತುವೆ ಬಳಿ ಭೀಕರ ಅಪಘಾತ: ಸ್ಕೂಟಿಗೆ ಲಾರಿ ಡಿಕ್ಕಿಯಾಗಿ ಮಹಿಳೆ ಸಾವು..!
0
SHARES
94
VIEWS
Share on FacebookShare on Twitter

ಕಾಪು: ಮನೆಗೆ ಕೇವಲ ಅರ್ಧ ಕಿಲೋಮೀಟರ್ ದೂರ ಉಳಿದಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ವರ್ಷದ ಬಾಲಕಿ ಸಾವನ್ನಪ್ಪಿದ ದುಃಖದ ಘಟನೆ ಕಾಪುವಿನಲ್ಲಿ ನಡೆದಿದೆ.

ಸಾತ್ವಿ ಶೆಟ್ಟಿ (8) ಮೃತಪಟ್ಟ ಬಾಲಕಿಯಾಗಿದ್ದು, ತಂದೆ ನಿತ್ಯಾನಂದ ಶೆಟ್ಟಿ ಅವರೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್, ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಸ್ಕೂಟಿ ಸವಾರ ನಿತ್ಯಾನಂದ ಶೆಟ್ಟಿ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ದುಬೈನಲ್ಲಿ ವಾಸವಾಗಿದ್ದ ಈ ಕುಟುಂಬವು ಶೀಘ್ರದಲ್ಲೇ ಊರಿನಲ್ಲಿ ನೆಲೆಸುವ ಯೋಜನೆ ಮಾಡಿಕೊಂಡಿತ್ತು. ಸಾತ್ವಿಗಾಗಿ ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು. ವಿಶೇಷವೆಂದರೆ, ನಾಳೆ ನಿತ್ಯಾನಂದ ಶೆಟ್ಟಿ ಅವರು ದುಬೈಗೆ ತೆರಳಬೇಕಾಗಿದ್ದು, ಅದಕ್ಕೂ ಮುನ್ನ ಕಾಪು ಪೇಟೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಅಪಘಾತ ನಡೆದ ಸ್ಥಳಕ್ಕೂ ಅವರ ಪೂವಣಿಗುತ್ತು ನಿವಾಸಕ್ಕೂ ಕೇವಲ ಅರ್ಧ ಕಿಲೋಮೀಟರ್ ದೂರವಿತ್ತು ಎಂಬುದು ಕುಟುಂಬದ ದುಃಖವನ್ನು ಮತ್ತಷ್ಟು ಗಾಢಗೊಳಿಸಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Previous Post

ಕಾರ್ಕಳ:ಶಂಕರ ಸೇವಾ ಸಮಿತಿಯ ವತಿಯಿಂದ ಶಂಕರ ಜಯಂತಿ ಆಚರಣೆ

Next Post

ಕಾರ್ಕಳದಲ್ಲಿ ಏಪ್ರಿಲ್ 24,25,26 ರಂದು ಬೃಹತ್ ಹಲಸಿನ ಮೇಳ. ಬೃಹತ್ ಹಲಸು ಮೇಳ: 70ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳದಲ್ಲಿ ಏಪ್ರಿಲ್ 24,25,26 ರಂದು ಬೃಹತ್ ಹಲಸಿನ ಮೇಳ. ಬೃಹತ್ ಹಲಸು ಮೇಳ: 70ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನ..!

ಕಾರ್ಕಳದಲ್ಲಿ ಏಪ್ರಿಲ್ 24,25,26 ರಂದು ಬೃಹತ್ ಹಲಸಿನ ಮೇಳ. ಬೃಹತ್ ಹಲಸು ಮೇಳ: 70ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

23/06/2026
ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

23/06/2026
ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

23/06/2026
ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

23/06/2026

Recent News

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

23/06/2026
ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

23/06/2026
ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

23/06/2026
ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

ಮಹಿಳೆಯರ ಸ್ವಾವಲಂಬನೆಗೆ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

23/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved