ಕಾರ್ಕಳ: ಶಂಕರ ಸೇವಾ ಸಮಿತಿಯ ವತಿಯಿಂದ ಕಾರ್ಕಳದ ಶ್ರೀ ವಿಶ್ವೇಶ್ವರ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಕೆ. ಮುರಳೀಧರ ಶರ್ಮ ನಿಟ್ಟೆ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕರಾಗಿ ಗಣೇಶ್ ಜಾಲ್ಸೂರು ಅವರು ಶ್ರೀ ಶಂಕರಾಚಾರ್ಯರ ಜೀವನ ಸಾಧನೆ ಹಾಗೂ ಅವರ ತತ್ವಜ್ಞಾನ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಅಧ್ಯಾಪಕರು, ಕಾರ್ಯದರ್ಶಿ ಸತೀಶ್ ಆಚಾರ್ಯ ಸೇರಿದಂತೆ ಅನೇಕ ಭಕ್ತರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.








