ಉಡುಪಿ: ಶ್ರೀ ಹೇರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 1 ರಂದು ನಡೆಯಲಿರುವ ಶತಚಂಡಿಕಾಯಾಗದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಶೀರೂರು ಮಠದ ವೇದವರ್ದನ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅರ್ಚಕ ಆನಂದ ಭಟ್, ಕಡೆಕಾರು ಶ್ರೀಶ ಭಟ್, ಸುನಿಲ್ ಸೂಡ, ಕರುಣಾಕರ ಶೆಟ್ಟಿ, ರವಿ ಸುವರ್ಣ, ಗಣೇಶ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.