Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ

Dhrishya News by Dhrishya News
03/08/2026
in ಸುದ್ದಿಗಳು
0
ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ
0
SHARES
19
VIEWS
Share on FacebookShare on Twitter

ಮಣಿಪಾಲ, ಆಗಸ್ಟ್ 3, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯವಾಗಿ ಪರಿಗಣಿತ ಉತ್ಕೃಷ್ಟ ಸಂಸ್ಥೆ, ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ “ಮೇಘ ಮಲ್ಹಾರ್” ಎರಡನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯು ದೇಶಾದ್ಯಂತ ಛಾಯಾಗ್ರಾಹಕರು, ವಿದ್ಯಾರ್ಥಿಗಳು ಮತ್ತು ಸೃಜನಶೀಲ ಆಸಕ್ತರನ್ನು ಮಳೆಗಾಲದ ಸೌಂದರ್ಯ, ಭಾವನೆ ಮತ್ತು ಪರಿಸರದ ಮಹತ್ವವನ್ನು ಛಾಯಾಚಿತ್ರಗಳ ಮೂಲಕ ಅಭಿವ್ಯಕ್ತಿಸುವ ಅವಕಾಶವಾಗಿದೆ. ಜೊತೆಗೆ, ಛಾಯಾಗ್ರಹಣವನ್ನು ಕಥನ ಹೇಳುವ ಪ್ರಬಲ ಮಾಧ್ಯಮವಾಗಿ ಭಾವಿಸುವ, ಭಾರತದ ಶ್ರೀಮಂತ ಮಳೆಗಾಲದ ಪರಂಪರೆಯನ್ನು ಸಂಭ್ರಮಿಸುವ ಮತ್ತು ಪರಿಸರ ಸುಸ್ಥಿರತೆಯ ಕುರಿತು ಅರ್ಥಪೂರ್ಣ ಸಂವಾದಗಳನ್ನು ಉತ್ತೇಜಿಸುವ ಗುರಿಗಳನ್ನು ಈ ಸ್ಪರ್ಧೆ ಹೊಂದಿದೆ.

ಸ್ಪರ್ಧೆಯು ಎರಡು ವಿಭಿನ್ನ ವಿಭಾಗಗಳನ್ನು ಒಳಗೊಂಡಿದೆ. ಪ್ರಮುಖ “ಮೇಘ ಮಲ್ಹಾರ್” ವಿಭಾಗವು ಫನ್ ಆ್ಯಂಡ್ ಫ್ಯೂರಿ ಆಫ್ ರೈನ್ ಪರಿಕಲ್ಪನೆಯಡಿ ಮಳೆಗಾಲದ ವೈವಿಧ್ಯಮಯ ಭಾವಗಳನ್ನು, ಅದರ ಅದ್ಭುತ ಸೌಂದರ್ಯ ಮತ್ತು ಜೀವದಾಯಿ ಸ್ವರೂಪದಿಂದ ಹಿಡಿದು ಅದರ ರೌದ್ರ ತೀವ್ರತೆ ಮತ್ತು ಪ್ರಕೃತಿ-ಸಮಾಜದ ಮೇಲಿನ ಉತ್ಕಟ ಪರಿಣಾಮಗಳವರೆಗೆ, ಕೆಮರಾದಲ್ಲಿ ಸೆರೆಹಿಡಿಯುವ ಅವಕಾಶವಿದೆ. ದೇಶಾದ್ಯಂತ ವಿದ್ಯಾರ್ಥಿ ಛಾಯಾಗ್ರಾಹಕರನ್ನು ಸಹ ಈ ವಿಭಾಗದಲ್ಲಿ ಸ್ಪರ್ಧಿಸಲು ಆತ್ಮೀಯವಾಗಿ ಆಹ್ವಾನಿಸಲಾಗಿದ್ದು, ಅವರಿಗಾಗಿಯೇ ವಿಶೇಷ ಬಹುಮಾನಗಳನ್ನು ಮೀಸಲಿಡಲಾಗಿದೆ.

ಮಾಹೆಯ ಎಲ್ಲ ಕ್ಯಾಂಪಸ್‌ಗಳ ವಿದ್ಯಾರ್ಥಿಗಳು, ಬೋಧಕ ಹಾಗೂ, ಬೋಧಕೇತರ ಸಿಬ್ದಂದಿ “My MAHE, My Campus” ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ರೋಮಾಂಚಕ ಕ್ಯಾಂಪಸ್ ಜೀವನ, ವಿಶಿಷ್ಟ ಅನುಭವಗಳು, ವಾಸ್ತುಶಿಲ್ಪದ ಸೌಂದರ್ಯ, ಸಾಂಸ್ಕೃತಿಕ ವೈವಿಧ್ಯ ಮತ್ತು ಮಾಹೆ ಪರಿಸರವನ್ನು ಚಿತ್ರಿಸುವ ಮಳೆಗಾಲದ ಕ್ಷಣಗಳನ್ನು ಚಿತ್ರಗಳಲ್ಲಿ ದಾಖಲಿಸಬಹುದಾಗಿದೆ.
ಎರಡೂ ವಿಭಾಗಗಳಲ್ಲಿ ಆಕರ್ಷಕ ನಗದು ಬಹುಮಾನಗಳಿವೆ.
ಮೇಘ ಮಲ್ಹಾರ್ (ಎಲ್ಲರಿಗೂ ಮುಕ್ತ)
• ಪ್ರಥಮ ಬಹುಮಾನ: ₹25,000
• ದ್ವಿತೀಯ ಬಹುಮಾನ: ₹15,000
• ತೃತೀಯ ಬಹುಮಾನ: ₹10,000 •
ಐದು ಮೆರಿಟ್ ಪ್ರಮಾಣಪತ್ರಗಳು: ತಲಾ ₹2,000
ವಿಶೇಷ ವಿದ್ಯಾರ್ಥಿ ಪುರಸ್ಕಾರಗಳು (ಮೇಘ ಮಲ್ಹಾರ್ ವಿಭಾಗ)
• ಪ್ರಥಮ ಬಹುಮಾನ: ₹5,000
• ದ್ವಿತೀಯ ಬಹುಮಾನ: ₹3,000
• ತೃತೀಯ ಬಹುಮಾನ: ₹2,000
• ಐದು ಮೆರಿಟ್ ಪ್ರಮಾಣಪತ್ರಗಳು: ತಲಾ ₹1,000

My MAHE, My Campus (ಮಾಹೆ ವಿದ್ಯಾರ್ಥಿಗಳು, ಬೋಧಕ ಮತ್ತು ಸಿಬ್ಬಂದಿ)
• ಪ್ರಥಮ ಬಹುಮಾನ: ₹5,000
• ದ್ವಿತೀಯ ಬಹುಮಾನ: ₹3,000
• ತೃತೀಯ ಬಹುಮಾನ: ₹2,000
• ಐದು ಮೆರಿಟ್ ಪ್ರಮಾಣಪತ್ರಗಳು: ತಲಾ ₹1,000

ಪ್ರವೇಶಗಳನ್ನು ಸಲ್ಲಿಸುವ ಅವಧಿಯು ಆಗಸ್ಟ್ 31, 2026ರ ವರೆಗೆ ತೆರೆದಿರುತ್ತದೆ. ಖ್ಯಾತ ಛಾಯಾಗ್ರಾಹಕರು ಮತ್ತು ಮಾಧ್ಯಮ ವೃತ್ತಿಪರರನ್ನೊಳಗೊಂಡ ಆಯ್ಕೆ ಸಮಿತಿಯು ಎಲ್ಲಾ ಪ್ರವೇಶಗಳನ್ನು ಪರಿಶೀಲಿಸಲಿದೆ. ಆಯ್ಕೆಯಾದ ಚಿತ್ರಗಳನ್ನು ಸೆಪ್ಟೆಂಬರ್ 17ರಂದು ಮಣಿಪಾಲದಲ್ಲಿ ನಡೆಯುವ ಛಾಯಾಗ್ರಹಣ ಪ್ರದರ್ಶನ 2026ರಲ್ಲಿ ಪ್ರದರ್ಶಿಸಲಾಗುವುದು.
ನೋಂದಣಿ ವಿವರಗಳು, ಅರ್ಹತಾ ಮಾನದಂಡಗಳು, ನಮೂದು ಮಾರ್ಗಸೂಚಿಗಳು, ಸ್ಪರ್ಧೆಯ ನಿಯಮಗಳು ಮತ್ತು ಪ್ರದರ್ಶನದ ಮಾಹಿತಿ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಈ ಕಾರ್ಯಕ್ರಮವನ್ನು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಮತ್ತು ಪ್ರಮುಖ ಕನ್ನಡ ದಿನಪತ್ರಿಕೆವಾದ ಉದಯವಾಣಿಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.

ನೋಂದಣಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://mahe.fotosalons.in/ ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ಇಮೇಲನ್ನು meghmalhar2026.mahe@manipal.edu ಸಂಪರ್ಕಿಸಿ.

Previous Post

ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಚಿನ್ನದ, ಸಾಂಪ್ರದಾಯಿಕ ಹಾಗೂ ದೇವಾಲಯ ಶೈಲಿಯ ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿಸಿರುವ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

Next Post

ನಾಳೆ (ಆಗಸ್ಟ್ 4) ಉಡುಪಿ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ನಾಳೆ (ಜು,25) ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ನಾಳೆ (ಆಗಸ್ಟ್ 4) ಉಡುಪಿ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ನಾಳೆ (ಜು,25) ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ನಾಳೆ (ಆಗಸ್ಟ್ 4) ಉಡುಪಿ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

03/08/2026
ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ

ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ

03/08/2026
ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಚಿನ್ನದ, ಸಾಂಪ್ರದಾಯಿಕ ಹಾಗೂ ದೇವಾಲಯ ಶೈಲಿಯ ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿಸಿರುವ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಚಿನ್ನದ, ಸಾಂಪ್ರದಾಯಿಕ ಹಾಗೂ ದೇವಾಲಯ ಶೈಲಿಯ ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿಸಿರುವ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

03/08/2026
ಜನ್ಮಾಷ್ಟಮಿ ವಿಶೇಷ: ಶ್ರೀಕೃಷ್ಣ ಮಠದಲ್ಲಿ ಯಶಸ್ವಿಯಾಗಿ ನಡೆದ ಚಿತ್ರಕಲಾ ಸ್ಪರ್ಧೆ

ಜನ್ಮಾಷ್ಟಮಿ ವಿಶೇಷ: ಶ್ರೀಕೃಷ್ಣ ಮಠದಲ್ಲಿ ಯಶಸ್ವಿಯಾಗಿ ನಡೆದ ಚಿತ್ರಕಲಾ ಸ್ಪರ್ಧೆ

03/08/2026

Recent News