Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಉಡುಪಿ: ಅಡುಗೆ ಅನಿಲ ಕೊರತೆ ಬೆಲೆಯೇರಿಕೆ ವಿರುದ್ದ ಮಹಿಳೆಯರ ಪ್ರತಿಭಟನೆ

Dhrishya News by Dhrishya News
25/03/2026
in ಮುಖಪುಟ
0
ಉಡುಪಿ: ಅಡುಗೆ ಅನಿಲ ಕೊರತೆ ಬೆಲೆಯೇರಿಕೆ ವಿರುದ್ದ ಮಹಿಳೆಯರ ಪ್ರತಿಭಟನೆ
0
SHARES
34
VIEWS
Share on FacebookShare on Twitter

ಉಡುಪಿ:ಮಾರ್ಚ್ 25:ಮೋದಿಯವರು ಅಧಿಕಾರಕ್ಕೆ ಬಂದ ತರುವಾಯ ದೇಶದ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಬರುವುದನ್ನು ತಪ್ಪಿಸಲು ಉಜ್ವಲ ಯೋಜನೆ ಮೂಲಕ ಸಬ್ಸಿಡಿ ಕಸಿದರು ಈಗ ಯುದ್ಧ ಕೋರ ಅಮೇರಿಕಾ ಬೆಂಬಲಿಸಿ ಮಹಿಳೆಯರ ಕಣ್ಣೀರು ಹಾಕುವಂತೆ ಮಾಡುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜಾ ಹೇಳಿದರು

ಕರೋನಾದಂತೆ 140 ಕೋಟಿ ಜನರನ್ನು ರಕ್ಷಿಸುತ್ತೇನೆ,ತೈಲ ಮತ್ತು ಅಡುಗೆ ಅನಿಲದ ಕೊರತೆ ಇಲ್ಲ ಎಂದು ಹೇಳಿದ ನಂತರ ಈಗಲೂ ಮನೆಗಳಲ್ಲಿ ಹೋಟೆಲ್ ಗಳಲ್ಲಿ ಅಡುಗೆ ಅನಿಲ ಸಿಗದೇ ಇರುವುದು ಅವರು ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ ಅಲ್ಲದೇ ಇಂತಹ ಸಂಕಷ್ಟ ಸಮಯದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜಾ ಅವರು ಹೇಳಿದರು.

ಅವರು ಉಡುಪಿ ಅಜ್ಜರಕಾಡು ವಿನಲ್ಲಿ ಮಾರ್ಚ್ 23ರಂದು ನಡೆದ ಗ್ಯಾಸ್ ಸಿಲಿಂಡರ್ ಕೊರತೆ ವಿರುದ್ಧ ಹಾಗೂ ಬೆಲೆಯೇರಿಕೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಅಮೇರಿಕಾ ಹಾಗೂ ಇಸ್ರೇಲ್ ಕೇವಲ ಇರಾನ್ ಮೇಲೆ ಹೂಡಿದ ಯುದ್ಧವಲ್ಲ ಬದಲಾಗಿ ಅದು ಜಗತ್ತಿನ ಜನರ ಮೇಲೆ ನಡೆಸುತ್ತಿರುವ ಪೈಶಾಚಿಕ ದಾಳಿಯಾಗಿದೆ.ಟ್ರಂಪ್ ಪುಂಡಾಟಿಕೆ ಇಂದು ಜಗತ್ತಿನ ಜನರು ಸಂಕಟ ಪಡುವಂತಾಗಿದೆ.

ಅಮೇರಿಕಾದೊಳಗೆ ಹಾಗೂ ಜಗತ್ತಿನಾದ್ಯಂತ ಇಂದು ಯುದ್ಧ ವಿರೋಧಿ ಪ್ರತಿಭಟನೆ ನಡೆಯುತ್ತಿದೆ.ಅಮೇರಿಕಾದ ಮಿತ್ರರು ನ್ಯಾಟೋ ದೇಶಗಳು ವಿರೋಧಿಸುತ್ತಿವೆ ಆದುದರಿಂದ ಟ್ರಂಪ್ ನನ್ನು ಜಗತ್ತಿನ ಭಯೋತ್ಪಾದಕ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಯುದ್ಧ ವಿರೋಧಿ ಮಾತುಗಳನ್ನಾಡಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಶಶಿಕಲಾ,ನಳಿನಿ, ಕೂಲಿಕಾರರ ಸಂಘಟನೆ ವೆಂಕಟೇಶ್ ಕೋಣಿ ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್,ರಾಮಕಾರ್ಕಡ ಇದ್ದರು.

ಒಲೆಯಲ್ಲಿ ಕಾಪಿ ಮಾಡಿ ಕುಡಿದು ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ : ಸಿಐಟಿಯು ಜಿಲ್ಲಾ  ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್

Previous Post

ಮಣಿಪಾಲದಲ್ಲಿ ಮ್ಯಾಗ್ಸ್‌ಕಾನ್–2026 ಸಮಾವೇಶಕ್ಕೆ ಚಾಲನೆ

Next Post

ಶಿರ್ವ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶಿರ್ವ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು..!!

ಶಿರ್ವ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
‘ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸೇವಾ ಪಯಣ ಅಂತ್ಯೋದಯದಿಂದ ಸರ್ವೋದಯದತ್ತ ಸಾಗಿದೆ’ : ಶಾಸಕ ಕಿರಣ್ ಕುಮಾರ್ ಕೊಡ್ಗಿ

‘ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸೇವಾ ಪಯಣ ಅಂತ್ಯೋದಯದಿಂದ ಸರ್ವೋದಯದತ್ತ ಸಾಗಿದೆ’ : ಶಾಸಕ ಕಿರಣ್ ಕುಮಾರ್ ಕೊಡ್ಗಿ

29/09/2026
ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

29/09/2026
ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

29/09/2026
ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

29/09/2026

Recent News

imunify-bot-check