Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಗ್ಯಾಸ್‌ ಕೊರತೆ: 150ಕ್ಕೂ ಹೆಚ್ಚು ಹೊಟೇಲ್‌ ಬಂದ್…!

Dhrishya News by Dhrishya News
18/03/2026
in ಕರಾವಳಿ, ಸುದ್ದಿಗಳು
0
ಗ್ಯಾಸ್‌ ಕೊರತೆ: 150ಕ್ಕೂ ಹೆಚ್ಚು ಹೊಟೇಲ್‌ ಬಂದ್…!
0
SHARES
16
VIEWS
Share on FacebookShare on Twitter

ಉಡುಪಿ, ಮಾ. 18: ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಹೊಟೇಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ಜಿಲ್ಲಾ ಹೊಟೇಲ್‌ ಮಾಲಕರ ಸಂಘ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಗ್ಯಾಸ್‌ ಅಭಾವದ ನಡುವೆ ಅನೇಕ ಹೊಟೇಲ್‌ಗಳು ಕುಚ್ಚಲಕ್ಕಿ ಅನ್ನ, ದೋಸೆ ಸೇರಿದಂತೆ ಹಲವು ತಿಂಡಿಗಳನ್ನು ಕಡಿತಗೊಳಿಸಿ ಸೀಮಿತ ಸೇವೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ಇದೀಗ ಅನೇಕ ಹೊಟೇಲ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಗ್ಯಾಸ್‌ ಪೂರೈಕೆ ಕೊರತೆಯಿಂದ ಅನಿವಾರ್ಯವಾಗಿ ಹೊಟೇಲ್‌ ಬಂದ್‌ ಮಾಡಲಾಗಿದೆ ಎಂಬ ಸೂಚನಾ ಫಲಕಗಳನ್ನು ಮಾಲಕರು ಅಳವಡಿಸಿದ್ದು, ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್‌ ಲಭ್ಯವಾದ ಬಳಿಕವೇ ಪುನಃ ಕಾರ್ಯಾರಂಭ ಸಾಧ್ಯವೆಂದು ತಿಳಿಸಿದ್ದಾರೆ.

ಕೆಲವು ಹೊಟೇಲ್‌ಗಳು ಪರ್ಯಾಯವಾಗಿ ಕಟ್ಟಿಗೆ ಬಳಸಿ ಅಡುಗೆ ಮಾಡಲು ಯತ್ನಿಸುತ್ತಿದ್ದರೂ, ಕಾರ್ಮಿಕರ ಕೊರತೆ ಹಾಗೂ ಕಟ್ಟಿಗೆ ಲಭ್ಯತೆಯ ಸಮಸ್ಯೆ ಅಡ್ಡಿಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಟ್ಟಿಗೆ ಮಾರಾಟಗಾರರ ಸಂಖ್ಯೆ ಕಡಿಮೆಯಾಗಿರುವುದರಿಂದ ಪೂರೈಕೆ ತೀರಾ ಅಪರ್ಯಾಪ್ತವಾಗಿದೆ.

ಇನ್ನೊಂದೆಡೆ, ಕಟ್ಟಿಗೆಗೆ ಬೇಡಿಕೆ ಭಾರೀ ಏರಿಕೆಯಾಗಿದ್ದು, ಕೆಲವು ವಾರಗಳ ಹಿಂದೆ ದಿನಕ್ಕೆ 2ರಿಂದ 3 ಸಾವಿರ ರೂಪಾಯಿ ಮೌಲ್ಯದ ಕಟ್ಟಿಗೆ ಮಾತ್ರ ಮಾರಾಟವಾಗುತ್ತಿದ್ದರೆ, ಇದೀಗ 10 ಸಾವಿರ ರೂಪಾಯಿಗೂ ಮೀರಿದ ವ್ಯವಹಾರ ನಡೆಯುತ್ತಿದೆ ಎಂದು ತೆಂಕಪೇಟೆಯ ವ್ಯಾಪಾರಿ ಮನೋಜ್‌ ತಿಳಿಸಿದ್ದಾರೆ. ಹಲವರು ಟನ್‌ಗಟ್ಟಲೆ ಕಟ್ಟಿಗೆಗೆ ಮುಂಗಡ ಬುಕ್ಕಿಂಗ್‌ ಮಾಡಿದ್ದರೂ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವೆಂದೂ ಅವರು ತಿಳಿಸಿದ್ದಾರೆ.

Previous Post

ಉಡುಪಿ :ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್ ಹೆಸರಿನಲ್ಲಿ ಸೈಬರ್‌ ವಂಚನೆ: ಒಟಿಪಿ ಕೇಳುವ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸ್ ಸೂಚನೆ..!

Next Post

ಎಸೆಸೆಲ್ಸಿ ಪರೀಕ್ಷೆ ಆರಂಭ: ದ.ಕ., ಉಡುಪಿ ಜಿಲ್ಲೆಗಳು ಸಜ್ಜು…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಎಸೆಸೆಲ್ಸಿ ಪರೀಕ್ಷೆ ಆರಂಭ: ದ.ಕ., ಉಡುಪಿ ಜಿಲ್ಲೆಗಳು ಸಜ್ಜು…!

ಎಸೆಸೆಲ್ಸಿ ಪರೀಕ್ಷೆ ಆರಂಭ: ದ.ಕ., ಉಡುಪಿ ಜಿಲ್ಲೆಗಳು ಸಜ್ಜು...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

02/10/2026
ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

02/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026

Recent News

imunify-bot-check