Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ನಂದಿಕೂರು ಬಯೋ ಡೀಸೆಲ್ ಘಟಕಕ್ಕೆ ಮಾಲಿನ್ಯ ಮಂಡಳಿ ತಾತ್ಕಾಲಿಕ ಬೀಗ…!

Dhrishya News by Dhrishya News
05/03/2026
in ಕರಾವಳಿ, ಸುದ್ದಿಗಳು
0
ನಂದಿಕೂರು ಬಯೋ ಡೀಸೆಲ್ ಘಟಕಕ್ಕೆ ಮಾಲಿನ್ಯ ಮಂಡಳಿ ತಾತ್ಕಾಲಿಕ ಬೀಗ…!
0
SHARES
2
VIEWS
Share on FacebookShare on Twitter

ನಂದಿಕೂರು, ಮಾ.5: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕವಾದ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ.

ಕರ್ನಾಟಕ ವಾಟರ್ (ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಕಾಯ್ದೆಯ ಸೆಕ್ಷನ್ 34ರಡಿ ಈ ಕ್ರಮ ಕೈಗೊಳ್ಳಲಾಗಿದೆ. ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169ರಲ್ಲಿ ಕಾರ್ಯಾಚರಿಸುತ್ತಿದ್ದ ಈ ಘಟಕವು ಕಾಯ್ದೆಯಲ್ಲಿರುವ ಹಲವು ನಿಯಮಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮಂಡಳಿ ಆದೇಶಿಸಿದೆ ಎಂದು ತಿಳಿದುಬಂದಿದೆ.

ಘಟಕದಿಂದ ಹೊರಬರುತ್ತಿರುವ ದುರ್ವಾಸನೆ ಹಾಗೂ ವಿವಿಧ ರೀತಿಯ ಮಾಲಿನ್ಯದಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪದೊಂದಿಗೆ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ನಡೆದ ಪಲಿಮಾರು ಗ್ರಾಮಸಭೆಯಲ್ಲೂ ಕಂಪೆನಿಯ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು.

ಈ ಸಂಬಂಧ ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿಯ ಪರಿಸರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸ್ಥಳೀಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಘಟಕಕ್ಕೆ ಹಲವು ಬಾರಿ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.

ತಜ್ಞರ ವರದಿ ಆಧಾರದಲ್ಲಿ ಘಟಕದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಂಡಳಿ ಫೆ.18ರಂದು ಆದೇಶ ಹೊರಡಿಸಿದೆ. ಇದರಂತೆ ಕಂಪೆನಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಕೂಡ ಘಟಕದಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದ್ದು, ವಿದ್ಯುತ್ ಸಂಪರ್ಕವನ್ನು ತಕ್ಷಣ ಕಡಿತಗೊಳಿಸಲು ಮೆಸ್ಕಾಂ ಆಡಳಿತ ನಿರ್ದೇಶಕರಿಗೂ ನಿರ್ದೇಶನ ನೀಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಸೂಚನೆಗಳನ್ನು ಸಂಸ್ಥೆ ಪದೇಪದೇ ಉಲ್ಲಂಘಿಸಿರುವುದಾಗಿ ಹೇಳಲಾಗಿದೆ. ಮಾಲಿನ್ಯಕಾರಕ ತ್ಯಾಜ್ಯ ನೀರನ್ನು ಆವರಣದ ಹೊರಗೆ ಬಿಡದಂತೆ ಸೂಚನೆ ನೀಡಿದ್ದರೂ ಅದನ್ನು ಪಾಲಿಸದೆ ಹೊರಗೆ ಹರಿಸಲಾಗುತ್ತಿತ್ತು. ಅಲ್ಲದೆ ತ್ಯಾಜ್ಯ ನೀರನ್ನು ಆವರಣದೊಳಗೆ ಮುಕ್ತವಾಗಿ ಸಂಗ್ರಹಿಸಿರುವುದು ಮಂಡಳಿಯ ಸ್ಥಳೀಯ ಅಧಿಕಾರಿಗಳು ಪರಿಶೀಲನೆಗೆ ಬಂದ ವೇಳೆ ಪತ್ತೆಯಾಗಿದೆ ಎಂದು ಮಂಡಳಿ ತಿಳಿಸಿದೆ.

Previous Post

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

Next Post

ನೇತ್ರಾವತಿ ನದಿಯಲ್ಲಿ ಆಧಾರ್‌ ಕಾರ್ಡ್‌ಗಳ ರಾಶಿ ಪತ್ತೆ; ಗ್ರಾಮಸ್ಥರಲ್ಲಿ ಅನುಮಾನ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನೇತ್ರಾವತಿ ನದಿಯಲ್ಲಿ ಆಧಾರ್‌ ಕಾರ್ಡ್‌ಗಳ ರಾಶಿ ಪತ್ತೆ; ಗ್ರಾಮಸ್ಥರಲ್ಲಿ ಅನುಮಾನ..!

ನೇತ್ರಾವತಿ ನದಿಯಲ್ಲಿ ಆಧಾರ್‌ ಕಾರ್ಡ್‌ಗಳ ರಾಶಿ ಪತ್ತೆ; ಗ್ರಾಮಸ್ಥರಲ್ಲಿ ಅನುಮಾನ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026
ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

02/05/2026
ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

02/05/2026
ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

02/05/2026

Recent News

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026
ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

02/05/2026
ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

02/05/2026
ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

02/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved