Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿಜಯ್–ರಶ್ಮಿಕಾ ಮದುವೆ ಸಂಭ್ರಮ: ಅದ್ಧೂರಿ ವಿವಾಹದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿದ ಜೋಡಿ…!

Dhrishya News by Dhrishya News
03/03/2026
in ಸುದ್ದಿಗಳು
0
ವಿಜಯ್–ರಶ್ಮಿಕಾ ಮದುವೆ ಸಂಭ್ರಮ: ಅದ್ಧೂರಿ ವಿವಾಹದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿದ ಜೋಡಿ…!
0
SHARES
4
VIEWS
Share on FacebookShare on Twitter

ಮಾ. 3:ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಆಪ್ತ ಬಂಧು-ಮಿತ್ರರ ಸಮ್ಮುಖದಲ್ಲಿ ನೆರವೇರಿದ ಇವರ ವಿವಾಹ ಸಮಾರಂಭ ಅತ್ಯಂತ ವೈಭವೋಪೇತವಾಗಿತ್ತು ಎನ್ನಲಾಗಿದೆ. ಮದುವೆ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಿದ್ದು, ವಧೂ-ವರರು ಧರಿಸಿದ್ದ ಚಿನ್ನಾಭರಣಗಳ ಮೌಲ್ಯವೇ ಸುಮಾರು 6ರಿಂದ 7 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.

ವೈವಾಹಿಕ ಸಂಭ್ರಮದ ನಡುವೆಯೇ ಈ ದಂಪತಿ ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸಿರುವುದು ಗಮನಾರ್ಹ. ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ಮೆಚ್ಚುಗೆ ಪಡೆದಿದ್ದ ವಿಜಯ್ ಮತ್ತು ರಶ್ಮಿಕಾ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸಹಾಯ ಹಸ್ತ ಚಾಚಿದ್ದಾರೆ.

ವಿಜಯ್ ದೇವರಕೊಂಡ ಅವರ ‘ದೇವರಕೊಂಡ ಚಾರಿಟೇಬಲ್ ಟ್ರಸ್ಟ್’ ಮೂಲಕ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಲಾಗಿದೆ. ಮದುವೆಯ ಬಳಿಕ ತಮ್ಮ ಪೂರ್ವಜರ ಊರಾದ ತುಮ್ಮನಪೇಟೆಗೆ ಭೇಟಿ ನೀಡಿದ ವೇಳೆ ಈ ಘೋಷಣೆ ಮಾಡಲಾಗಿದೆ. ಈ ಸಂದರ್ಭ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಹಾಜರಿದ್ದರು.

ಇದಕ್ಕೂ ಮುನ್ನ ಈ ಜೋಡಿ ವಿವಿಧ ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯ ನಡೆಸಿ, ಅಭಿಮಾನಿಗಳಿಗಾಗಿ ಸಿಹಿ ವಿತರಣೆ ಮಾಡಿತ್ತು. ಇದೀಗ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಮೂಲಕ ಸಮಾಜಸೇವೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.

ಫೆಬ್ರವರಿ 26, 2024ರಂದು ನಡೆದ ಈ ವಿವಾಹ ಸಮಾರಂಭದ ಬಳಿಕ, ದಂಪತಿ ತಮ್ಮ ತೆಲಂಗಾಣದ ಹಳ್ಳಿಯ ಮನೆಯಲ್ಲಿ ಗೃಹಪ್ರವೇಶ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಿದರು. ಮಾರ್ಚ್ 4ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ.

ವೈಯಕ್ತಿಕ ಸಂಭ್ರಮದ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕವೂ ಈ ಜೋಡಿ ಗಮನ ಸೆಳೆಯುತ್ತಿದೆ.

Previous Post

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಮೃತ್ಯು…!

Next Post

ರಾಜ್ಯ ಕರಡು ಕಾರ್ಮಿಕ ನಿಯಮಗಳ ವಿರೋಧ: ಉಡುಪಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ, ಆಕ್ಷೇಪಣೆ ಪತ್ರ ಸಲ್ಲಿಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ರಾಜ್ಯ ಕರಡು ಕಾರ್ಮಿಕ ನಿಯಮಗಳ ವಿರೋಧ: ಉಡುಪಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ, ಆಕ್ಷೇಪಣೆ ಪತ್ರ ಸಲ್ಲಿಕೆ..!!

ರಾಜ್ಯ ಕರಡು ಕಾರ್ಮಿಕ ನಿಯಮಗಳ ವಿರೋಧ: ಉಡುಪಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ, ಆಕ್ಷೇಪಣೆ ಪತ್ರ ಸಲ್ಲಿಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026
ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

02/05/2026
ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

02/05/2026
ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

02/05/2026

Recent News

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026
ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಗೆ 5.29 ಕೋಟಿ ರೂ ಲಾಭ, 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ.

02/05/2026
ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

ಬ್ರಹ್ಮಾವರ: ಚಂದ್ರಶೇಖರ್ ಶೆಟ್ಟಿಗಾರ್‌ಗೆ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸನ್ಮಾನ

02/05/2026
ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

ರಂಗಭೂಮಿಯಿoದ ಜೀವನ ಸಂಸ್ಕಾರ : ರಂಗಭೂಮಿ ಆನಂದೋತ್ಸವ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ

02/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved