Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ….!

Dhrishya News by Dhrishya News
24/02/2026
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ….!
0
SHARES
3
VIEWS
Share on FacebookShare on Twitter

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರಿಂದ ಕ್ಯಾಂಪಸ್ ಅಧಿಕೃತ ಉದ್ಘಾಟನೆ.

ಈ ಕ್ಯಾಂಪಸ್ ಜಾಗತಿಕವಾಗಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಏಕ-ಕಟ್ಟಡ ಕಾರ್ಪೊರೇಟ್ ಕಚೇರಿಯಾಗಿದ್ದು, ವಿವಿಧ ವಿಭಾಗಗಳ 7,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಾವಕಾಶ ಹೊಂದಿದೆ.

ಬೆಂಗಳೂರು, ಫೆ. 24:ಅಮೆಜಾನ್ ಇಂದು ಏಷ್ಯಾದಲ್ಲಿ ತನ್ನ ಎರಡನೇ ಅತಿ ದೊಡ್ಡ ಕಚೇರಿಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ್ ಅವರು ಅಧಿಕೃತವಾಗಿ ಉದ್ಘಾಟಿಸಿದರು.

1.1 ಮಿಲಿಯನ್ ಚದರ ಅಡಿ ವಿಸ್ತೀರ್ಣದ, 12 ಅಂತಸ್ತುಗಳ ಈ ಕ್ಯಾಂಪಸ್ ಭಾರತದಲ್ಲಿ ಇ-ಕಾಮರ್ಸ್, ಕಾರ್ಯಾಚರಣೆ, ಪಾವತಿಗಳು, ತಂತ್ರಜ್ಞಾನ ಮತ್ತು ಮಾರಾಟಗಾರರ ಸೇವೆಗಳಲ್ಲಿ ತೊಡಗಿರುವ 7,000 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಾವಕಾಶ ಹೊಂದಿದೆ. ತಂಡಗಳನ್ನು ಒಗ್ಗೂಡಿಸಲು ಮತ್ತು ಸಹಯೋಗ ಮಾಡಿಕೊಳ್ಳಲು ಹಾಗೂ ಉದ್ಯೋಗಿಗಳ ಯೋಗಕ್ಷೇಮಕ್ಕೆ ಪೂರಕವಾಗುವಂತೆ ಈ ಹೊಸ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಅಮೆಜಾನ್‌ ನ ನಿರಂತರ ಹೂಡಿಕೆಯ ಭಾಗವಾಗಿ ಈ ಹೊಸ ಕ್ಯಾಂಪಸ್‌ ನ ಉದ್ಘಾಟನೆಗೊಂಡಿದೆ. ಕಂಪನಿಯು ಈಗಾಗಲೇ ಭಾರತದಲ್ಲಿ 40 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚು ಹೂಡಿಕೆ ಮಾಡಿದ್ದು, 2030ರ ವೇಳೆಗೆ ಹೆಚ್ಚುವರಿಯಾಗಿ 35 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಬದ್ಧವಾಗಿದೆ.

ಕರ್ನಾಟಕ ಸರ್ಕಾರದ ಸಚಿವ ಡಾ. ಎಂ.ಬಿ. ಪಾಟೀಲ್ ಮಾತನಾಡಿ*, “ಬೆಂಗಳೂರಿನಲ್ಲಿ ಅಮೆಜಾನ್‌ ನಿರಂತರ ಹೂಡಿಕೆ ಮಾಡುತ್ತಿದ್ದು, ಈ ಹೂಡಿಕೆಗಳು ಜಾಗತಿಕ ತಂತ್ರಜ್ಞಾನ ಮತ್ತು ಆವಿಷ್ಕಾರ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ತೋರಿಸುತ್ತದೆ. ಅಮೆಜಾನ್‌ ನಂತಹ ಬೃಹತ್ ಕ್ಯಾಂಪಸ್‌ ಗಳು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸುತ್ತವೆ. ನಾವು ಉದ್ಯೋಗಾವಕಾಶ ಹೆಚ್ಚಿಸುವ ಮತ್ತು ದೀರ್ಘಕಾಲೀನ ಸಂಬಂಧ ಬೆಳೆಸುವ ಹೂಡಿಕೆಗಳಿಗೆ ಮುಕ್ತವಾಗಿ ಸ್ವಾಗತಿಸುತ್ತೇವೆ” ಎಂದರು.

ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮಾತನಾಡಿ,* “ಅಮೆಜಾನ್‌ ಗೆ ಭಾರತವು ಆದ್ಯತೆಯ ಕೇಂದ್ರವಾಗಿದ್ದು, ಬೆಂಗಳೂರು ನಮ್ಮ ಪ್ರಯಾಣದಲ್ಲಿ ಕೇಂದ್ರ ಪಾತ್ರ ವಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ನಮ್ಮ ಕೆಲವು ಹೊಸ ತಂತ್ರಜ್ಞಾನಗಳು ಮತ್ತು ಬಿಸಿನೆಸ್ ತಂಡಗಳು ಇಲ್ಲೇ ರೂಪುಗೊಂಡಿವೆ ಮತ್ತು ಇದು ಆವಿಷ್ಕಾರ ಮತ್ತು ಪ್ರತಿಭಾ ಸಂಪನ್ಮೂಲಗಳ ವಿಚಾರದಲ್ಲಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಈ ಕೇಂದ್ರ ಉದ್ಘಾಟನೆಗೆ ಆಗಮಿಸಿರುವ ಎಂ.ಬಿ. ಪಾಟೀಲ್ ಅವರಿಗೆ ಮತ್ತು ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ. ನಾವು ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದುತ್ತಿರುವಂತೆ, ಇಲ್ಲಿ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಪ್ರತಿಭೆಗಳಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದರು.

ಕ್ಯಾಂಪಸ್‌ ವಿಶಿಷ್ಟವಾಗಿ ಮೂಡಿಬಂದಿದ್ದು, ಈ ಕ್ಯಾಂಪಸ್‌ ನಲ್ಲಿ ಅತ್ಯುತ್ತಮ ವರ್ಕ್ ಪ್ಲೇಸ್ ಗಳು, ಸಹಯೋಗ ಕೊಠಡಿಗಳು ವಿನ್ಯಾಸಗೊಂಡಿವೆ. ಮೀಟಿಂಗ್ ರೂಮ್‌ಗಳು, ಹಡಲ್ ಸ್ಪೇಸ್‌ಗಳು ಮತ್ತು 200ಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡುವ ಈವೆಂಟ್ ಸ್ಪೇಸ್‌ ಗಳಿವೆ. ಉದ್ಯೋಗಿಗಳಿಗಾಗಿ ಬಾಸ್ಕೆಟ್‌ ಬಾಲ್ ಮತ್ತು ಪಿಕಲ್‌ ಬಾಲ್ ಕೋರ್ಟ್‌ ಗಳು, ಆಂಫಿಥಿಯೇಟರ್ ಮತ್ತು ಹೊರಾಂಗಣ ಸಭಾ ಸ್ಥಳಗಳಿವೆ.

ಅಮೆಜಾನ್ ನ ಈ ಹೊಸ ಕ್ಯಾಂಪಸ್ 2040 ರ ವೇಳೆಗೆ ‘ನೆಟ್-ಝೀರೋ ಕಾರ್ಬನ್’ ತಲುಪುವ ಅಮೆಜಾನ್ ಗುರಿಗೆ ಅನುಗುಣವಾಗಿ, ಮರುಬಳಕೆಯ ವಸ್ತುಗಳು ಮತ್ತು ಪರಿಸರ ಸ್ನೇಹಿ ವ್ಯವಸ್ಥೆಗಳ ಮೂಲಕ ವಿನ್ಯಾಸಗೊಂಡಿದೆ. ಅತ್ಯುತ್ತಮ ಕಾರ್ಯಕ್ಷಮತೆಯ ವಸ್ತುಗಳನ್ನು ಬಳಸಿ ಈ ಕೇಂದ್ರ ರೂಪಿಸಲಾಗಿದೆ.

ಕರ್ನಾಟಕದಲ್ಲಿ ಅಮೆಜಾನ್:

ಕರ್ನಾಟಕದಲ್ಲಿ ಅಮೆಜಾನ್ ಬಲವಾದ ಅಸ್ತಿತ್ವವನ್ನು ಹೊಂದಿದೆ. ರಾಜ್ಯದಲ್ಲಿ 10 ಕಾರ್ಪೊರೇಟ್ ಕಚೇರಿಗಳು, 7 ಫುಲ್‌ ಫಿಲ್‌ಮೆಂಟ್ ಸೆಂಟರ್‌ ಗಳು, 3 ಸಾರ್ಟ್ ಸೆಂಟರ್‌ ಗಳು ಮತ್ತು 130ಕ್ಕೂ ಹೆಚ್ಚು ಡೆಲಿವರಿ ಕೇಂದ್ರಗಳಿವೆ. ಅಲ್ಲದೆ, ಕರ್ನಾಟಕದ 80,000 ಕ್ಕೂ ಹೆಚ್ಚು ಮಾರಾಟಗಾರರು Amazon.in ಮೂಲಕ ತಮ್ಮ ವ್ಯಾಪಾರ ಮಾಡುತ್ತಿದ್ದಾರೆ.

Previous Post

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ: ಮಾಹಿತಿ ನೀಡುವಂತೆ ಪೊಲೀಸರ ಮನವಿ…!

Next Post

ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ಗೆ ಮಹಿಳಾ ಉದ್ಯಮಿಗಳ ನೋಂದಣಿ ಆಹ್ವಾನ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ಗೆ ಮಹಿಳಾ ಉದ್ಯಮಿಗಳ ನೋಂದಣಿ ಆಹ್ವಾನ…!

ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ಗೆ ಮಹಿಳಾ ಉದ್ಯಮಿಗಳ ನೋಂದಣಿ ಆಹ್ವಾನ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

04/08/2026
ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

04/08/2026

Recent News