Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ವಿರೋಧ: ಕಪ್ಪು ವಸ್ತ್ರದಲ್ಲಿ ಪತ್ರಕರ್ತರ ಸಾಂಕೇತಿಕ ಪ್ರತಿಭಟನೆ….!

Dhrishya News by Dhrishya News
21/02/2026
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ವಿರೋಧ: ಕಪ್ಪು ವಸ್ತ್ರದಲ್ಲಿ ಪತ್ರಕರ್ತರ ಸಾಂಕೇತಿಕ ಪ್ರತಿಭಟನೆ….!
0
SHARES
11
VIEWS
Share on FacebookShare on Twitter

ಬೆಂಗಳೂರು, ಫೆ. 21: ವಿಧಾನಸೌಧದಲ್ಲಿ ಮಾಧ್ಯಮಗಳ ಸಂಚಾರ ಮತ್ತು ವರದಿಗಾರಿಕೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಪತ್ರಕರ್ತರು ಶುಕ್ರವಾರ ಗಾಂಧಿ ಪ್ರತಿಮೆ ಎದುರು ಕಪ್ಪು ಬಟ್ಟೆ ಹಾಗೂ ಕಪ್ಪು ಮಾಸ್ಕ್ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು.

ಡಿಪಿಎಆರ್‌ನಿಂದ ವಾರ್ತಾ ಇಲಾಖೆಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ, ವಿಧಾನಸೌಧದ 313 ಮತ್ತು 334 ಕೊಠಡಿಗಳು ಸೇರಿದಂತೆ ಕಾರಿಡಾರ್‌ಗಳಲ್ಲಿ ಮಾಧ್ಯಮಗಳ ಓಡಾಟದಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಇತರ ಗಣ್ಯರು ಮತ್ತು ಶಾಸಕರ ಭದ್ರತೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೆಂಗಲ್ ಗೇಟ್ ಪೋರ್ಟಿಕೋದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ.

ಈ ಕ್ರಮವನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹೇರಲಾಗಿರುವ ನಿರ್ಬಂಧವೆಂದು ಪರಿಗಣಿಸಿರುವ ಪತ್ರಕರ್ತರು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ವಲಯದ ಕಾರ್ಯಚಟುವಟಿಕೆಗಳಿಗೆ ಇದು ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಂತಹ ಕೇಂದ್ರ ಸ್ಥಳದಲ್ಲಿ ಮಾಧ್ಯಮಗಳ ಹಾಜರಾತಿ ಸರ್ಕಾರದ ಪಾರದರ್ಶಕತೆಯ ಪ್ರತೀಕವಾಗಿದ್ದು, ಇಂತಹ ನಿಯಂತ್ರಣಗಳು ಜನರಲ್ಲಿ ತಪ್ಪು ಸಂದೇಶವನ್ನು ಮೂಡಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವರದಿಗಾರರು ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸುವಲ್ಲಿ ಈ ನಿರ್ಬಂಧ ಅಡಚಣೆ ತರುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಚರ್ಚೆ ಮತ್ತು ಮಾಹಿತಿ ಪ್ರಸರಣದ ಗುಣಮಟ್ಟ ಕುಗ್ಗುವ ಭೀತಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಅರಿತಿರುವ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಮರುಪರಿಶೀಲಿಸಿ, ಹಿಂದಿನಂತೆ ಸುಗಮ ವರದಿಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಇದಾದ ಬಳಿಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಗಾಂಧಿ ಪ್ರತಿಮೆ ಬಳಿ ತೆರಳಿ ಮನವಿ ಪತ್ರ ಸ್ವೀಕರಿಸಿದರು. ನಂತರ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪತ್ರಕರ್ತರ ನಿಯೋಗ, ಆದೇಶ ಹಿಂಪಡೆಯುವಂತೆ ವಿನಂತಿಸಿತು.

ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ವಿಧಿಸಿದ ನಿರ್ಬಂಧ ತಮ್ಮ ಸೂಚನೆಯ ಮೇಲೇ ಜಾರಿಗೆ ಬಂದದ್ದು ಎಂದು ಸ್ಪಷ್ಟಪಡಿಸಿದರು. ಇದು ಸಂಪೂರ್ಣ ನಿರ್ಬಂಧವಲ್ಲ, ಸಮಂಜಸ ನಿಯಂತ್ರಣ ಮಾತ್ರ ಎಂದು ಹೇಳಿದರು. “ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ನಾವು ಕರೆದಾಗ ಬನ್ನಿ. ವಿಧಾನಸೌಧಕ್ಕೆ ಬಾರದಿರಲಿ ಎಂದು ಹೇಳಿಲ್ಲ. ಆದೇಶವನ್ನು ಹಿಂಪಡೆಯುವುದಿಲ್ಲ; ಆದರೆ ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ,” ಎಂದು ಮುಖ್ಯಮಂತ್ರಿ ತಿಳಿಸಿದರು.

Previous Post

ಫೋನ್‌ಪೇಯಿಂದ UPI ವಹಿವಾಟುಗಳಿಗೆ ಬಯೋಮೆಟ್ರಿಕ್ ದೃಢೀಕರಣ: ₹5,000 ವರೆಗೆ ಪಿನ್ ಬೇಡ…!

Next Post

ಸ್ನೇಹಮಯಿ ಕೃಷ್ಣ ಬಂಧನದ ಬೆನ್ನಲ್ಲೇ ಸಿಸಿಬಿ ಶೋಧ; ದಾಖಲೆಗಳ ವಶಪಡಿಕೆ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸ್ನೇಹಮಯಿ ಕೃಷ್ಣ ಬಂಧನದ ಬೆನ್ನಲ್ಲೇ ಸಿಸಿಬಿ ಶೋಧ; ದಾಖಲೆಗಳ ವಶಪಡಿಕೆ…..!

ಸ್ನೇಹಮಯಿ ಕೃಷ್ಣ ಬಂಧನದ ಬೆನ್ನಲ್ಲೇ ಸಿಸಿಬಿ ಶೋಧ; ದಾಖಲೆಗಳ ವಶಪಡಿಕೆ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

04/10/2026
ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

04/10/2026
ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

03/10/2026
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026

Recent News

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

04/10/2026
ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

04/10/2026
ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

03/10/2026
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
imunify-bot-check