Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

Dhrishya News by Dhrishya News
11/02/2026
in ಕರಾವಳಿ, ಸುದ್ದಿಗಳು
0
ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!
0
SHARES
18
VIEWS
Share on FacebookShare on Twitter

ಉಡುಪಿ, ಫೆ. 11:ರಾಜ್ಯ ಸರಕಾರ ಅಥವಾ ಖಾಸಗಿ ಏರ್‌ಪೋರ್ಟ್ ಡೆವಲಪರ್‌ರಿಂದ ಸಮರ್ಪಕ ಪ್ರಸ್ತಾವನೆ ಬಂದಲ್ಲಿ, ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್‌ಪೋರ್ಟ್ ನಿರ್ಮಾಣಕ್ಕೆ ಅನುಮೋದನೆ ನೀಡುವ ವಿಚಾರವನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ತಿಳಿಸಿದ್ದಾರೆ.

ನಂದಿಕೂರಿನಲ್ಲಿ ವಿಮಾನನಿಲ್ದಾಣ ಸ್ಥಾಪನೆಯ ಕುರಿತಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಅ.14ರಂದು ಇಲಾಖೆಗೆ ಬರೆದ ಪತ್ರಕ್ಕೆ ಜ.31ರಂದು ನೀಡಿದ ಉತ್ತರದಲ್ಲಿ ರಾಮ್‌ಮೋಹನ್ ನಾಯ್ಡು ಈ ವಿಷಯ ತಿಳಿಸಿದ್ದಾರೆ.

ಭಾರತ ಸರಕಾರ 2008ರಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌(ಜಿಎಫ್‌ಎ) ಪಾಲಿಸಿಯನ್ನು ರೂಪಿಸಿದ್ದು, ಇದರ ಮಾರ್ಗ ಸೂಚಿಗಳು, ಕಾರ್ಯವಿಧಾನ ಹಾಗೂ ನಿಬಂಧನೆಗಳಂತೆ ದೇಶದಲ್ಲಿ ನೂತನ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ನೀಡುತ್ತದೆ ಎಂದವರು ಹೇಳಿದ್ದಾರೆ.

ಯೋಜನೆಯಂತೆ ರಾಜ್ಯ ಸರಕಾರವೂ ಸೇರಿದಂತೆ, ಯಾವುದೇ ಏರ್‌ಪೋರ್ಟ್ ಡೆವಲಪರ್‌ಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಯಸಿದರೆ, ಸೂಕ್ತವಾದ ಜಾಗವನ್ನು ಗುರುತಿಸಿ, ಆ ಜಾಗದಲ್ಲಿ ನಿಲ್ದಾಣ ಸ್ಥಾಪನೆಗೆ ಸಾಧ್ಯತಾ ಅಧ್ಯಯನ ನಡೆಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ‘ಜಾಗದ ಕ್ಲಿಯರೆನ್ಸ್‌’ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆಗ ಸರಕಾರ ಅದನ್ನು ಪರಿಶೀಲಿಸಿ ಇನ್‌ಪ್ರಿನ್ಸಿಪಲ್ ಅನುಮೋದನೆ ನೀಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಕರ್ನಾಟಕದ ನಂದಿಕೂರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಗ್ರೀನ್‌‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಮುಂದೆ ರಾಜ್ಯ ಸರಕಾರ ಅಥವಾ ಏರ್‌ಪೋರ್ಟ್ ಡೆವಲಪರ್‌ರಿಂದ ಇದಕ್ಕೆ ಪ್ರಸ್ತಾಪ ಸಲ್ಲಿಕೆಯಾದರೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಪಾಲಿಸಿ 2008ರ ನಿಬಂಧನೆಗಳಂತೆ ಅನುಮೋದನೆಗೆ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

ಸದ್ಯ ದೇಶದಲ್ಲಿ 1 ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಳಿದ್ದು, ಇವುಗಳಲ್ಲಿ ಕರ್ನಾಟಕದ ಕಲಬುರ್ಗಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳೂ ಸೇರಿವೆ. ಅಭಿವೃದ್ಧಿಯಾಗದ ಜಾಗದಲ್ಲಿ ಸಂಪೂರ್ಣ ಹೊಸದಾಗಿ ವಿಮಾನನಿಲ್ದಾಣವನ್ನು ನಿರ್ಮಿಸಿದರೆ ಅದನ್ನು ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌ ಎಂದು ಕರೆಯಲಾಗುತ್ತದೆ. ನವಿಮುಂಬಯಿ ಇಂಟರ್‌ನೇಷನಲ್ ಏರ್‌ಪೋರ್ಟ್ ದೇಶದ ಅತ್ಯಂತ ವಿಶಾಲವಾದ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎನಿಸಿಕೊಂಡಿದೆ.

Previous Post

ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

Next Post

ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!

ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

30/09/2026
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಮಲ್ಪೆಯಲ್ಲಿ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಐವರು ವಶಕ್ಕೆ

30/09/2026

Recent News

imunify-bot-check