Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!

Dhrishya News by Dhrishya News
11/02/2026
in ಸುದ್ದಿಗಳು
0
ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!
0
SHARES
3
VIEWS
Share on FacebookShare on Twitter

ಮಂಗಳೂರು, ಫೆ. 11:ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 13.72 ಲಕ್ಷ ರೂ. ವಂಚಿಸಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು 2025ರ ಸೆಪ್ಟೆಂಬರ್ 2ರಂದು ಆನ್‌ಲೈನ್ ಟ್ರೇಡಿಂಗ್ ನಡೆಸುತ್ತಿದ್ದ ವೇಳೆ ‘ಬಿ-53 ವೆಲ್ತ್ ಅಕಾಡೆಮಿ’ ಎಂಬ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಪ್ರವೀಣ್ ಪಟೇಲ್ ಎಂಬಾತ ಸಂಪರ್ಕ ಸಾಧಿಸಿದ್ದ. ಬಳಿಕ ಟ್ರೇಡಿಂಗ್ ಸಲಹೆ ನೀಡುವುದಾಗಿ ಹೇಳಿ ಪ್ರತಿದಿನ ಷೇರು ಮಾರುಕಟ್ಟೆ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೆ.17ರಂದು ಶೇರು ಮಾರುಕಟ್ಟೆಯಲ್ಲಿಕ್ಯೂಐಬಿ ಮೂಲಕ ಹೂಡಿಕೆ ಮಾಡಲು ಟೆನ್ ಕೋರ್ ಎಂಬ ಸಂಸ್ಥೆಯ ಮೂಲಕ ಖಾತೆ ತೆರೆಯಬೇಕಾಗುವುದು. ಅದಕ್ಕೆ ಸಹಕರಿಸಲು ಕ್ರಿಸ್ ಹಾರ್ಪರ್ ಎನ್ನುವ ವ್ಯಕ್ತಿಯನ್ನು ಸಂಪರ್ಕಿಸಲು ಆತನ ಮೊಬೈಲ್ ನಂಬರ್ ನೀಡಿದ್ದ. 50 ಸಾವಿರ ರೂ. ಹೂಡಿಕೆಯಿಂದ ಆರಂಭಿಸುವಂತೆ ಹೇಳಿದ್ದಾನೆ. ಅದರಂತೆ ಅ.6ರಂದು 50 ಸಾವಿರ ರೂ. ವರ್ಗಾಯಿಸಿದ್ದಾರೆ. ಬಳಿಕ ಎರಡು ದಿನದಲ್ಲಿ 6,500 ರೂ. ಲಾಭ ಬಂದಿದ್ದು, ಅದರಲ್ಲಿ 1,500 ರೂ. ಒಂದು ಗಂಟೆಯಲ್ಲಿ ಖಾತೆಗೆ ಹಣ ಬಂದಿದೆ.

ಅ.19ರಂದು ಕ್ರಿಸ್ ಹಾರ್ಪರ್ ನನ್ನು ಸಂಪರ್ಕಿಸಿದ್ದು, ಆತ ಸೂಚಿಸಿದ ಖಾತೆಗೆ 1 ಲಕ್ಷ ರೂ. ವರ್ಗಾಯಿಸಿದ್ದಾರೆ. ಹೀಗೆ ಹಂತ ಹಂತವಾಗಿ ಅ.27ರ ವರೆಗೆ ಒಟ್ಟು 13,72,586 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿದ್ದಾರೆ. ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಬೇಡಿಕೆ ಇಟ್ಟಾಗ, ಶೇ.38 ತೆರಿಗೆ ಹಣ ಪಾವತಿ ಮಾಡಬೇಕು ಇಲ್ಲದಿದ್ದಲ್ಲಿ ಹಣ ವಾಪಾಸು ಪಡೆಯಲು ಆಗುವುದಿಲ್ಲಎಂದು ಕಾರಣ ನೀಡಿದ್ದಾರೆ. ಅನುಮಾನ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.

ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Previous Post

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

Next Post

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಹೊಸಂಗಡಿಯಿಂದ ಯುವಕ ನಾಪತ್ತೆ: ಪ್ರಕರಣ ಧಾಖಲು..!

05/10/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಮಲ್ಪೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಳವು..!

05/10/2026
ಕಾರ್ಕಳ: ಕಾರು ಡಿಕ್ಕಿ – ಪಾದಚಾರಿ ಸ್ಥಳದಲ್ಲೇ ಮೃತ್ಯು

ಕಾರ್ಕಳ: ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

05/10/2026
ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅ.6ರಿಂದ 8ರವರೆಗೆ ಗುರುಗಳ ವಾಸ್ತವ್ಯ..!

ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅ.6ರಿಂದ 8ರವರೆಗೆ ಗುರುಗಳ ವಾಸ್ತವ್ಯ..!

05/10/2026

Recent News

imunify-bot-check