Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home Corporate

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

Dhrishya News by Dhrishya News
08/02/2026
in Corporate
0
ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ
0
SHARES
1
VIEWS
Share on FacebookShare on Twitter

ಮಣಿಪಾಲ್‌, ಫೆ. 08, 2026: ಪ್ರಥಮ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಭಾರತದ ಅಂಧ ಮಹಿಳಾ ತಂಡವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ವತಿಯಿಂದ ಫೆಬ್ರವರಿ 7, 2026 ಶನಿವಾರದಂದು ಮಣಿಪಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ವಿಶೇಷ ಸನ್ಮಾನ ಸಮಾರಂಭವು ಭಾರತೀಯ ಅಂಧ ಮಹಿಳೆಯರ ತಂಡದ ಅದಮ್ಯ ಚೇತನ, ಶಿಸ್ತು ಮತ್ತು ಶ್ರೇಷ್ಠತೆಯತ್ತ ಅವರಿಗಿರುವ ಬದ್ಧತೆಯನ್ನು ಶ್ಲಾಘಿಸುವ ಮತ್ತು ಅಂಧ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿಯದೆ, ಮಹಿಳಾ ಸಬಲೀಕರಣದ ಮತ್ತು ರಾಷ್ಟ್ರೀಯ ಹೆಮ್ಮೆಯ ಶಕ್ತಿಯುತ ವೇದಿಕೆಯಾಗಿ ಬೆಳೆಸುವ ಕಾರ್ಯಕ್ರಮವಾಗಿ ಮೂಡಿ ಬಂದಿತು.  

ಸಮಾರಂಭದಲ್ಲಿ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಮಾತನಾಡಿ, ‘ಅಂಧ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಕ್ರೀಡಾ ಮನೋಭಾವ ಮತ್ತು ದೃಢಸಂಕಲ್ಪಕ್ಕೆ ಸಂದ ಗೌರವವಿದು. ಕ್ರೀಡಾ ಸಾಧನೆಯು ದೈಹಿಕ ಮಿತಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದು ಅವಕಾಶ ಮತ್ತು ಅಂತರ್ಗತವಾದ ದೃಢಸಂಕಲ್ಪವನ್ನು ಅವಲಂಬಿಸಿದೆ ಎಂಬುದನ್ನು ಈ ಆಟಗಾರರು ಸಾಬೀತುಪಡಿಸಿದ್ದಾರೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಮಾತನಾಡಿ, ʼವ್ಯವಸ್ಥಿತ ತರಬೇತಿಯಿಂದಾಗಿ ಇಂದು ಅಂಧ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರು ಸಮಾಜದ ಸಾಂಪ್ರದಾಯಿಕ ಗ್ರಹಿಕೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆʼ ಎಂದು ಶ್ಲಾಘಿಸಿದರು.

ಶ್ರೀಮತಿ ವಸಂತಿ ಆರ್. ಪೈ, ಟ್ರಸ್ಟಿ, ಮಾಹೆ ಟ್ರಸ್ಟ್; ಡಾ. ನರಾಯಣ ಸಭಾಹಿತ್, ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ); ಡಾ. ಶರತ್ ಕೆ. ರಾವ್, ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನಗಳು); ಡಾ. ಪಿ. ಗಿರಿಧರ್ ಕಿಣಿ, ರಿಜಿಸ್ಟ್ರಾರ್; ಡಾ. ಆನಂದ್ ವೆಂಕುಗರೋಪಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಚೀಫ್ ಆಪರೇಟಿಂಗ್ ಆಫೀಸರ್) ಹಾಗೂ ಮಣಿಪಾಲ್‌ನ ಮಾಹೆ (MAHE)ಯ ಅಂಗ ಸಂಸ್ಥೆಗಳ ಮುಖ್ಯಸ್ಥರು ತಂಡವನ್ನು ಗೌರವಿಸಿದರು / ಸನ್ಮಾನಿಸಿದರು.

ಇದೇ ವೇದಿಕೆಯಲ್ಲಿ ಅಂಧರ ಆರ್ಥಿಕ ಸಬಲೀಕರಣದ ಉದ್ದೇಶವಾಗಿ ಬ್ಯಾಂಕ್ ಆಫ್ ಬರೋಡಾದ ‘ಬ್ರೈಲ್ ಲಿಪಿ ಆಧಾರಿತ ಕ್ರೆಡಿಟ್ ಕಾರ್ಡ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಬಾಬ್‌ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವೀಂದ್ರ ರೈ ಎಂ., ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕರು xxxxxx ಹಾಗೂ ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಅವರು ಜಂಟಿಯಾಗಿ ಈ ಕಾರ್ಡ್‌ ಅನ್ನು ಬಿಡುಗಡೆ ಮಾಡಿದರು. ವಿತ್ತ ಕ್ಷೇತ್ರದಲ್ಲಿ ಎಲ್ಲರ ಒಳಗೊಳ್ಳುವಿಕೆ ಮತ್ತು ಅಂಧರ ಸ್ವಾವಲಂಬನೆಯ ದೃಷ್ಟಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

‘ಸಮರ್ಥನಂ’ ಅಂಗವಿಕಲರ ಸಂಸ್ಥೆ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಜಿ. ಕಿವಡಸಣ್ಣವರ್ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಖ್ಯಾತ ಸಮಾಜ ಸೇವಕ ಶ್ರೀ ರಾಯನ್ ಅವರು ಉಪಸ್ಥಿತರಿದ್ದರು. ಅಂಗವಿಕಲ ಶಿಕ್ಷಣ, ಜೀವನೋಪಾಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಶ್ರೀ ರಾಯನ್ ಅವರ ಸುದೀರ್ಘ ಸೇವೆ ಹಾಗೂ ಮಾಹೆ ಸಂಸ್ಥೆಯೊಂದಿಗಿನ ಅವರ ಒಡನಾಟವು ಸಮಾನತೆ ಮತ್ತು ಸುಸ್ಥಿರ ಸಮಾಜದ ದೃಷ್ಟಿಕೋನವನ್ನು ಪ್ರತಿನಿಧಿಸಿತು.

ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಅವರು ಸ್ವಾಗತಿಸಿದರು, ಮಾಹೆ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ವಂದಿಸಿದರು.

Previous Post

ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

Next Post

ಹೂಡಿಕೆ ಲಾಭದ ಆಸೆ ತೋರಿಸಿ ಲಕ್ಷಾಂತರ ರೂ. ಆನ್‌ಲೈನ್ ಮೋಸ…..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹೂಡಿಕೆ ಲಾಭದ ಆಸೆ ತೋರಿಸಿ ಲಕ್ಷಾಂತರ ರೂ. ಆನ್‌ಲೈನ್ ಮೋಸ…..!!

ಹೂಡಿಕೆ ಲಾಭದ ಆಸೆ ತೋರಿಸಿ ಲಕ್ಷಾಂತರ ರೂ. ಆನ್‌ಲೈನ್ ಮೋಸ.....!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

26/03/2026
ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

26/03/2026
ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

26/03/2026
ಡಿ.ಸಿ ಉಪಸ್ಥಿತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉಡುಪಿಯಲ್ಲಿ ಮಹತ್ವದ ಸಭೆ….!

ಡಿ.ಸಿ ಉಪಸ್ಥಿತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉಡುಪಿಯಲ್ಲಿ ಮಹತ್ವದ ಸಭೆ….!

26/03/2026

Recent News

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

26/03/2026
ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

26/03/2026
ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

26/03/2026
ಡಿ.ಸಿ ಉಪಸ್ಥಿತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉಡುಪಿಯಲ್ಲಿ ಮಹತ್ವದ ಸಭೆ….!

ಡಿ.ಸಿ ಉಪಸ್ಥಿತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉಡುಪಿಯಲ್ಲಿ ಮಹತ್ವದ ಸಭೆ….!

26/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved