Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಭಾರತ ಯಾವ ದೇಶದಿಂದ ಬೇಕಾದರೂ ಕಚ್ಚಾ ತೈಲ ಖರೀದಿಸುವ ಪೂರ್ಣ ಸ್ವತಂತ್ರ್ಯ ಹೊಂದಿದೆ :ರಷ್ಯಾ ಸ್ಪಷ್ಟನೆ….!!

Dhrishya News by Dhrishya News
05/02/2026
in ರಾಜ್ಯ/ ರಾಷ್ಟ್ರೀಯ
0
ಭಾರತ ಯಾವ ದೇಶದಿಂದ ಬೇಕಾದರೂ ಕಚ್ಚಾ ತೈಲ ಖರೀದಿಸುವ ಪೂರ್ಣ ಸ್ವತಂತ್ರ್ಯ ಹೊಂದಿದೆ :ರಷ್ಯಾ ಸ್ಪಷ್ಟನೆ….!!
0
SHARES
46
VIEWS
Share on FacebookShare on Twitter

ಮಾಸ್ಕೋ, ಫೆ. 05: ಭಾರತವು ಯಾವ ದೇಶದಿಂದ ಬೇಕಾದರೂ ಕಚ್ಚಾ ತೈಲ ಖರೀದಿಸುವ ಪೂರ್ಣ ಸ್ವಾತಂತ್ರ್ಯ ಹೊಂದಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಭಾರತಕ್ಕೆ ರಷ್ಯಾ ಎಂದಿಗೂ ಏಕೈಕ ಇಂಧನ ಪಾಲುದಾರವಾಗಿರಲಿಲ್ಲ ಹಾಗೂ ತೈಲ ಖರೀದಿ ಮೂಲಗಳಲ್ಲಿ ಆಗುವ ಬದಲಾವಣೆಯನ್ನು ಅಸಾಮಾನ್ಯವೆಂದು ಕಾಣುವುದು ಸರಿಯಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಅವರು ಮಾತನಾಡಿ, ಅಂತಾರಾಷ್ಟ್ರೀಯ ಇಂಧನ ತಜ್ಞರಿಗೆ ತಿಳಿದಿರುವಂತೆ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಒಂದಷ್ಟೇ; ಭಾರತ ಸದಾ ವಿವಿಧ ರಾಷ್ಟ್ರಗಳಿಂದ ಇಂಧನ ಖರೀದಿ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಹೊಸದೇನೂ ಇಲ್ಲ ಎಂದು ಹೇಳಿದರು.

ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಬದಲಿಗೆ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ನಂತರ ಪೆಸ್ಕೋವ್ ಅವರ ಹೇಳಿಕೆ ಬಂದಿದೆ.

ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಮಾಸ್ಕೋಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾದ ವಕ್ತಾರರು ಹೇಳಿದ್ದಾರೆ. ಭಾರತದಿಂದ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಎರಡೂ ದೇಶಗಳ ನಡುವಿನ ಇಂಧನ ಸಹಕಾರಕ್ಕೆ ಬೆಂಬಲ ಏತನ್ಮಧ್ಯೆ, ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಮಾತನಾಡಿ, ಎರಡೂ ದೇಶಗಳ ನಡುವಿನ ಇಂಧನ ಸಹಕಾರವನ್ನು ಬೆಂಬಲಿಸಿದರು. ಹೈಡ್ರೋಕಾರ್ಬನ್ ವ್ಯಾಪಾರವು ಭಾರತ ಮತ್ತು ರಷ್ಯಾ ಎರಡಕ್ಕೂ ಪ್ರಯೋಜನಕಾರಿ ಎಂದು ಅವರು ಹೇಳಿದರು.

ಭಾರತದ ರಷ್ಯಾದ ಹೈಡ್ರೋಕಾರ್ಬನ್‌ಗಳ ಖರೀದಿಯು ಎರಡೂ ಕಡೆಯವರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಜಖರೋವಾ ಹೇಳಿದರು. ನಮ್ಮ ಭಾರತೀಯ ಪಾಲುದಾರರೊಂದಿಗೆ ಸಹಕಾರವನ್ನು ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದರು.

ಟ್ರಂಪ್ ಸೋಮವಾರ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದರು ಮತ್ತು ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಿದ್ದಾರೆ. ಪ್ರಧಾನಿ ಮೋದಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಮತ್ತು ಅಮೆರಿಕ ಮತ್ತು ವೆನೆಜುವೆಲಾದಿಂದಲೂ ಹೆಚ್ಚಿನ ತೈಲ ಖರೀದಿಸಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Previous Post

ವಿಶ್ವ ಕ್ಯಾನ್ಸರ್ ದಿನ 2026: ಕ್ಯಾನ್ಸರ್ ಜಾಗೃತಿಗಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ವತಿಯಿಂದ ಬೈಕ್ ಜಾಥಾ..!!

Next Post

ಡಿಜಿಟಲ್ ಯುಗದಲ್ಲಿ ಹೊಸ ಅಪಾಯ: ಅತ್ಯಾಧುನಿಕ ಆನ್‌ಲೈನ್ ವಂಚನೆಗಳ ವಿರುದ್ಧ ಎಚ್ಚರಿಕೆ….!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಡಿಜಿಟಲ್ ಯುಗದಲ್ಲಿ ಹೊಸ ಅಪಾಯ: ಅತ್ಯಾಧುನಿಕ ಆನ್‌ಲೈನ್ ವಂಚನೆಗಳ ವಿರುದ್ಧ ಎಚ್ಚರಿಕೆ….!!

ಡಿಜಿಟಲ್ ಯುಗದಲ್ಲಿ ಹೊಸ ಅಪಾಯ: ಅತ್ಯಾಧುನಿಕ ಆನ್‌ಲೈನ್ ವಂಚನೆಗಳ ವಿರುದ್ಧ ಎಚ್ಚರಿಕೆ....!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ..!

ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ..!

17/08/2026
ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

17/08/2026
ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ

ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ

17/08/2026
ಕೃಷ್ಣ ಮಠದಲ್ಲಿ ನೂತನ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹ ಲೋಕಾರ್ಪಣೆ

ಕೃಷ್ಣ ಮಠದಲ್ಲಿ ನೂತನ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹ ಲೋಕಾರ್ಪಣೆ

17/08/2026

Recent News