ಮಣಿಪಾಲ, ಏ.28; ಕುಸಿದುಬಿದ್ದು ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು, ವೈದ್ಯರು ಪರೀಕ್ಷಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿದೆ.
ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ಮೃತ ವ್ಯಕ್ತಿಯ ಹೆಸರು ನಾಗರಾಜ ಚೌಡಾಪುರ, ಕೂಡ್ಲಗಿ ನಿವಾಸಿ ಎಂದು ಶಂಕಿಸಲಾಗಿದೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಮಂಗಳವಾರ ತಡಮಧ್ಯಾಹ್ನ 4 ಗಂಟೆ ಸುಮಾರಿಗೆ, ಪೆರಂಪಳ್ಳಿ ಕಕ್ಕುಂಜೆಯ ಕೊರಗಜ್ಜ ದೈವಸ್ಥಾನ ಸಂಪರ್ಕಿಸುವ ರಸ್ತೆಯ ಬಳಿ, ವ್ಯಕ್ತಿಯೊಬ್ಬರು ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಒಳಕಾಡುವರ ಗಮನಕ್ಕೆ ತಂದಿದ್ದರು. ಗಸ್ತು ಕರ್ತವ್ಯದಲ್ಲಿದ್ದ 112 ತುರ್ತು ಸಹಾಯವಾಣಿ ಪೋಲಿಸರು ಕಾರ್ಯಚರಣೆಗೆ ಸಹಕರಿಸಿದ್ದರು.







