ಮಂಗಳೂರು ಜ.27: ಕ್ರೆಡಿಟ್ ಕಾರ್ಡ್ ಬೋನಸ್ ನೆಪದಲ್ಲಿ ಓಟಿಪಿ ಪಡೆದು ₹3.32 ಲಕ್ಷ ವಂಚನೆ ದೂರುದಾರರ ತಂದೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕ್ರೆಡಿಟ್ ಕಾರ್ಡ್‌ಗೆ ಬೋನಸ್ ಮೊತ್ತ ಲಭಿಸಿದೆ ಎಂದು ಮಾಹಿತಿ ನೀಡಲಾಗಿದೆ. ನಂತರ ಅಪರಿಚಿತರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡುವಂತೆ ಸೂಚಿಸಿ, ಅದರ ಮೂಲಕ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಸಿಕೊಂಡಿದ್ದಾರೆ.
ಬೋನಸ್ ಹಣ ಠೇವಣಿ ಮಾಡಲು ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಕೇಳಿದ್ದು, ನಂಬಿ ಅವರು ವಿವರಗಳನ್ನು ನೀಡಿದ್ದಾರೆ. ಜೊತೆಗೆ, ಒಟಿಪಿ ತಿಳಿಸಿದರೆ ಮಾತ್ರ ಬೋನಸ್ ಜಮಾ ಆಗುತ್ತದೆ ಎಂದು ಹೇಳಿ, ಅವರ ಮೊಬೈಲ್‌ಗೆ ಬಂದ ಒಟಿಪಿಗಳನ್ನು ಹಲವು ಬಾರಿ ಪಡೆದುಕೊಂಡಿದ್ದಾರೆ. ಇದರಿಂದ ಜ.16ರಿಂದ ಜ.20ರ ಅವಧಿಯಲ್ಲಿ ಒಟ್ಟು 3,32,247 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ವಂಚನೆ ನಡೆದಿರುವುದು ತಿಳಿದುಬಂದಿದ್ದು.
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






