ಪಡುಬಿದ್ರಿ ಜ. 27: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ನಿರ್ಲಕ್ಷ್ಯತೆಯಿಂದ ಜ.25 ರಂದು ಮಧ್ಯಾಹ್ನ 1:10 ಗಂಟೆಗೆ, NL-07 AA-1616 ನಂಬರ್‌ನ ಲಾರಿ ಸಾಗುತ್ತಿದ್ದು, ಕಾಪು ತಾಲ್ಲೂಕಿನ ಬಡಾ ಗ್ರಾಮದ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿದೆ.
ಘಟನೆ ವೇಳೆ, KA-19 EH-4755 ನಂಬರ್‌ನ ಮೋಟಾರ್‌ಸೈಕಲ್ ಅನ್ನು ಸವಾರ ರಮೇಶ್ ಆರ್. ಅವರು ತಮ್ಮ ಅಣ್ಣ ಸುರೇಶ್ (37), ವಾಸ: ಕಮಲ ನಿವಾಸ, ಅಂಗಾರಗುಡ್ಡೆ, ಸಿಮಂತೂರು ಗ್ರಾಮ, ಮಂಗಳೂರು ಅವರೊಂದಿಗೆ ಸಾಗಿಸುತ್ತಿದ್ದಿದ್ದರು. ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ರಮೇಶ್ ಆರ್. ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ, ಹಣೆ, ಬೆನ್ನು ಮತ್ತು ಕೈಗೆ ಗಂಭೀರ ಗಾಯಗಳು ಸಂಭವಿಸಿದ್ದು, ಅವರು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಕುರಿತು ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.






