ಪುತ್ತೂರು ಜ.27: ಪುತ್ತೂರಿಗೆ ರಾಜ್ಯದ ಮೊದಲ ಪಿಪಿಪಿ ಒಳಚರಂಡಿ ಯೋಜನೆ, ಸಮಗ್ರ ಒಳಚರಂಡಿ ನಿರ್ಮಾಣದ ಅಗತ್ಯ ಹೊಂದಿರುವ ಪುತ್ತೂರು ನಗರಕ್ಕೆ, ಸರಕಾರ ಮತ್ತು ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ (ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಶನ್ – ಪಿಪಿಪಿ) ರೂಪಿಸಿರುವ 100 ಕೋಟಿ ರೂ.ಗಳ ಮೆಗಾ ಯೋಜನೆ ಮಂಜೂರಿಗಾಗಿ ಅಂತಿಮ ಹಂತಕ್ಕೆ ಬಂದಿದೆ. ಸರಕಾರದಿಂದ ಮತ್ತೊಂದು ವಾರದೊಳಗೆ ಅಧಿಕೃತ ಅನುಮೋದನೆ ನಿರೀಕ್ಷಿಸಲಾಗಿದೆ.
ಒಳಚರಂಡಿ ಅನಿವಾರ್ಯತೆ
ಮಂಗಳೂರು ಹೊರತುಪಡಿಸಿ ಜಿಲ್ಲೆಯ 2ನೇ ಅತಿದೊಡ್ಡ ನಗರವಾಗಿರುವ
ಪುತ್ತೂರಿನಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇದ್ದರೂ, ಮನೆ ಮನೆಗಳ, ವಾಣಿಜ್ಯ ಸಮುಚ್ಚಯಗಳ ಕೊಳಚೆ ನೀರು ಹರಿದು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳುವ ಒಳಚರಂಡಿಯಿಲ್ಲ
100 ಕೋಟಿ ರೂ.ಗಳ ಮೆಗಾ ಯೋಜನೆ ಇದಾಗಿದ್ದು, ಇದರಲ್ಲಿ 15 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಭರಿಸಲಿದೆ. 85 ಕೋಟಿಗಳನ್ನು ಖುವಾಕ್ ಕಂಪನಿ ಭರಿಸಿ ಯೋಜನೆ ಅನುಷ್ಠಾನಗೊಳಿಸಲಿದೆ. ಕಾಮಗಾರಿ ಸಂಪೂರ್ಣಗೊಂಡ ಬಳಿಕ 5 ವರ್ಷಗಳ ಕಾಲ ಇದೇ ಕಂಪನಿ ನಿರ್ವಹಣೆ ಮಾಡಲಿದೆ.






