ಬಿಗ್ ಬಾಸ್ ಕನ್ನಡ ಸೀಸನ್–12 ರಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿ ಅವರನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು (24-01-2026) ತಮ್ಮ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಶಾಸಕರು ಮಾತನಾಡಿ ಕುಮಾರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಆಗಿರುವುದು ಕಾಪು ಕ್ಷೇತ್ರಕ್ಕೆ ಹಾಗೂ ಕರಾವಳಿಗರಿಗೆ ಹೆಮ್ಮೆಯ ವಿಚಾರ ನಾನು ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದರು






