ಬೆಳ್ತಂಗಡಿ : ಪ್ಲೇಟ್ ಕಟ್ ಆಗಿದ್ದರಿಂದ ಲಾರಿ ರಸ್ತೆಯ ಮಧ್ಯದಲ್ಲೇ ನಿಂತುಹೋಗಿ, ಭಾರೀ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲಘು ವಾಹನಗಳು ಸಂಚರಿಸಲು ಸ್ವಲ್ಪ ಜಾಗ ಇದ್ದರೂ, ನಿಯಂತ್ರಣವಿಲ್ಲದೆ ವಾಹನಗಳು ನುಗ್ಗಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿ, ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಗಂಟೆಗಳ ಕಾಲ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಯಿತು.
ಕಿಲೊಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿ ಯಾಯಿತು. ನಿರಂತರ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಶುಕ್ರವಾರವೇ ಹೆಚ್ಚಿದ್ದು ಘಾಟಿ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯು ಅಧಿಕಗೊಂಡಿದೆ






