ಮಂಗಳೂರು: ಸಂಜಯ್ ಕುಮಾರ್ (31) ಅವರು ನಗರದ ಕದ್ರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸಿಸುತ್ತಿದ್ದು, ಜ. 19ರಂದು ಕಾಣೆಯಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣೆ ದಾಖಲಾಗಿದೆ.
ಸಂಜಯ್ ಅವರು ಬ್ರಹ್ಮಾವರದ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 2 ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ವಾಸ್ತವ್ಯವಿದ್ದರು.
ಜ.19ರಂದು 6.45ರ ವೇಳೆಗೆ ಮನೆಯಲ್ಲಿ ತನ್ನ ಅಣ್ಣನ ಬಳಿ ಪರಿಚಯದ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿಕ್ಕಿದೆ, ಬೈಕ್ ಕೇಳಿ ಕೊಂಡಿಹೋಗಿದ್ದರು. ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
6 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಹಿಂದಿ, ಕನ್ನಡ, ತುಳು ಭಾಷೆ ತಿಳಿದಿದೆ. ತಲೆಯ ಬಲಭಾಗ ಕೆನ್ನೆಯ ಮೇಲೆ ಚಿಕ್ಕ ಪ್ರಾಯದಲ್ಲಿ ಬೆಂಕಿಯಿಂದ ಸುಟ್ಟಿರುವ ಗಾಯದ ಗುರುತು ಇದೆ. ಬಲಕೈ ಮಣಿಗಂಟಿನ “AS” ಎಂದು ಹಚ್ಚೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.






