Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಹಸಿರಿಗಾಗಿ ಓಡಿ, ಮುಕ್ತವಾಗಿ ಉಸಿರಾಡಿʼ: ಮಾಹೆ ಬೆಂಗಳೂರಿನ ಚೊಚ್ಚಲ ಆವೃತ್ತಿ ‘ಮಾಹೆಥಾನ್-2026’ ಜನವರಿ 25ಕ್ಕೆ..!

Dhrishya News by Dhrishya News
24/01/2026
in मौसम
0
ಹಸಿರಿಗಾಗಿ ಓಡಿ, ಮುಕ್ತವಾಗಿ ಉಸಿರಾಡಿʼ: ಮಾಹೆ ಬೆಂಗಳೂರಿನ ಚೊಚ್ಚಲ ಆವೃತ್ತಿ ‘ಮಾಹೆಥಾನ್-2026’ ಜನವರಿ 25ಕ್ಕೆ..!
0
SHARES
15
VIEWS
Share on FacebookShare on Twitter

• 21.1 ಕಿ.ಮೀ ಹಾಫ್ ಮ್ಯಾರಥಾನ್, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಫನ್ ರನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ.

• ‘ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ’ ಎಂಬ ಧ್ಯೇಯದೊಂದಿಗೆ AIMS ಪ್ರಮಾಣೀಕೃತ ಮಾರ್ಗದಲ್ಲಿ ಓಟ.

ಬೆಂಗಳೂರು, ಜನವರಿ 24, 2026: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಬೆಂಗಳೂರು ಕ್ಯಾಂಪಸ್‌, ತನ್ನ ಪ್ರಪ್ರಥಮ “ಮಾಹೆಥಾನ್ (MAHETHON) 2026” ಅನ್ನು ಆಯೋಜಿಸುತ್ತಿದೆ. “ಬೆಂಗಳೂರಿನ ಅತಿದೊಡ್ಡ ಓಟದ ಹಬ್ಬ” ಎಂದೇ ಹೇಳಲಾಗುವ ಈ ಮ್ಯಾರಥಾನ್‌ ಜನವರಿ 25, 2026ರ ಭಾನುವಾರದಂದು ನಡೆಯಲಿದೆ.

ಯಲಹಂಕದ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಆರಂಭವಾಗುವ ಆಕ್ಸಿಸ್ ಬ್ಯಾಂಕ್ ಸಹಯೋಗದ ‘ಮಾಹೆಥಾನ್ 2026’ ಓಟವು ಇಲ್ಲೇ ಮುಕ್ತಾಯಗೊಳ್ಳಲಿದ್ದು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ‘AIMS ಪ್ರಮಾಣೀಕೃತ’ ಮಾರ್ಗವನ್ನು ಇದು ಹೊಂದಿದೆ.

ಆರೋಗ್ಯ ಮತ್ತು ಪರಿಸರ ಜಾಗೃತಿಯ ಸಮಾಗಮವಾಗಿದ್ದು, ದೈಹಿಕ ಕ್ಷಮತೆ, ಸುಸ್ಥಿರತೆ ಮತ್ತು ಸಮುದಾಯದ ಭಾವನೆಯನ್ನು ಬೆಸೆಯುವ ಗುರಿಯನ್ನು ‘ಮಾಹೆಥಾನ್ 2026’ ಹೊಂದಿದೆ. ನುರಿತ ಓಟಗಾರರಿಂದ ಹಿಡಿದು ಹವ್ಯಾಸಿಗಳನ್ನೂ ಪ್ರೋತ್ಸಾಹಿಸುವ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ. ‘ರನ್ ಗ್ರೀನ್, ಬ್ರೀತ್ ಫ್ರೀ’ ಎಂಬ ಧ್ಯೇಯವಾಕ್ಯ ಮತ್ತು ‘ಬೆಂಗಳೂರು ರನ್ಸ್ ಫಾರ್ ಅರ್ಥ್’ ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮಾಹೆಥಾನ್‌ ಕರೆ ನೀಡುತ್ತದೆ. ಜೀವವೈವಿಧ್ಯ ಸಂರಕ್ಷಣೆ ಮತ್ತು ಮಾಹೆ ಬೆಂಗಳೂರು ಕ್ಯಾಂಪಸ್‌ನ ಹಸಿರು ಕಾರ್ಯಕ್ರಮಗಳನ್ನು ಇದು ಎತ್ತಿ ತೋರಿಸಲಿದೆ.

ಈ ಪ್ರಮುಖ ಕಾರ್ಯಕ್ರಮದ ಕುರಿತು ಮಾತನಾಡಿದ *ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ಮಧು ವೀರರಾಘವನ್,* ‘ಮಾಹೆಥಾನ್ 2026 ಕೇವಲ ಓಟವಷ್ಟೇ ಅಲ್ಲ, ಇದೊಂದು ಆಂದೋಲನ. ಶೈಕ್ಷಣಿಕ ಸಮುದಾಯ ಮತ್ತು ಬೆಂಗಳೂರಿನ ಚೈತನ್ಯವನ್ನು ಬೆಸೆಯುವ ಸೇತುವೆಯಾಗಿ ನಾವಿದನ್ನು ನೋಡುತ್ತೇವೆ. ಆರೋಗ್ಯ, ಸುಸ್ಥಿರತೆ ಮತ್ತು ಪರಿಸರ ಕಾಳಜಿಯ ಅಡಿಯಲ್ಲಿ ಸಾವಿರಾರು ಓಟಗಾರರನ್ನು ಒಗ್ಗೂಡಿಸುವ ಮೂಲಕ, ನಾವು ಹೆಚ್ಚು ಪ್ರಜ್ಞಾವಂತ ಸಮಾಜ ನಿರ್ಮಿಸುವತ್ತ ಅರ್ಥಪೂರ್ಣ ಹೆಜ್ಜೆ ಇಡುತ್ತಿದ್ದೇವೆʼ ಎಂದು ಹೇಳಿದರು.

ಆರೋಗ್ಯ ಮತ್ತು ಸುಸ್ಥಿರತೆ ಕಡೆಗಿನ ತನ್ನ ರಾಷ್ಟ್ರಮಟ್ಟದ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತಾ, ಮಾಹೆ ಮಣಿಪಾಲವು 8ನೇ ಆವೃತ್ತಿಯ ‘ಮಣಿಪಾಲ್ ಮ್ಯಾರಥಾನ್’ ಅನ್ನು 2026ರ ಫೆಬ್ರವರಿ 08ರ ಭಾನುವಾರ, ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಆಯೋಜಿಸಲಿದೆ. ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ ಮ್ಯಾರಥಾನ್ ಎಂದು ಗುರುತಿಸಿಕೊಂಡಿರುವ ಇದು, ದೈಹಿಕ ದೃಢತೆಯನ್ನು ಒಂದು ಸಾಮಾಜಿಕ ಜವಾಬ್ದಾರಿಯನ್ನಾಗಿ ಉತ್ತೇಜಿಸುವ ಮಾಹೆಯ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.

*ಓಟದ ವಿಭಾಗಗಳು:* ಎಲ್ಲಾ ವಯೋಮಾನದವರಿಗೂ ಹಾಗೂ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳನ್ನು ರೂಪಿಸಲಾಗಿದೆ:

*• ಹಾಫ್ ಮ್ಯಾರಥಾನ್ (21.1 ಕಿ.ಮೀ):* ನುರಿತ ಓಟಗಾರರಿಗೆ

*• 10 ಕಿ.ಮೀ ಓಟ & 10 ಕಿ.ಮೀ ಫೋರ್ಸಸ್ ರನ್:* ಸಾರ್ವಜನಿಕರಿಗೆ ಹಾಗೂ ಪೊಲೀಸ್/ರಕ್ಷಣಾ ಪಡೆಗಳ ಸಿಬ್ಬಂದಿಗೆ.

*• 5 ಕಿ.ಮೀ ಓಟ:* ಫಿಟ್‌ನೆಸ್ ಆಸಕ್ತರಿಗೆ ಸೂಕ್ತವಾಗಿದೆ.

*• 3 ಕಿ.ಮೀ ಫನ್ ರನ್ (Fun Run):* ಮಕ್ಕಳು ಮತ್ತು ಹವ್ಯಾಸಿ ಓಟಗಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಮಾಹೆಥಾನ್‌ ನೇತೃತ್ವ ವಹಿಸಿರುವ *ಮಾಹೆ ಬೆಂಗಳೂರಿನ ಹೆಚ್ಚುವರಿ ಕುಲ ಸಚಿವ ಡಾ. ರಾಘವೇಂದ್ರ ಪ್ರಭು ಪಿ.* ಅವರು ಮಾತನಾಡಿ, ‘ಮಾಹೆಥಾನ್ 2026 ಸಮುದಾಯದ ಒಗ್ಗಟ್ಟು ಮತ್ತು ಆರೋಗ್ಯದ ಸಂಭ್ರಮವಾಗಲಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಸುರಕ್ಷಿತ ಮತ್ತು ಆನಂದದಾಯಕ ಅನುಭವವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆʼ ಎಂದು ತಿಳಿಸಿದರು.

ಆರೋಗ್ಯ ಮತ್ತು ಸುಸ್ಥಿರತೆಯೆಡೆಗಿನ ತನ್ನ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತಾ, ಮಾಹೆ ಮಣಿಪಾಲವು 2026ರ ಫೆಬ್ರವರಿ 08ರ ಭಾನುವಾರದಂದು ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ‘ಮಣಿಪಾಲ ಮ್ಯಾರಥಾನ್‌’ನ 8ನೇ ಆವೃತ್ತಿಯನ್ನು ಆಯೋಜಿಸಿದೆ. ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ ಸಮುದಾಯ ಫಿಟ್‌ನೆಸ್ ಕಾರ್ಯಕ್ರಮಗಳಲ್ಲಿ ಒಂದೆಂದು ಖ್ಯಾತಿ ಪಡೆದಿರುವ ಈ ಮ್ಯಾರಥಾನ್, ದೈಹಿಕ ಸ್ವಾಸ್ಥ್ಯವನ್ನು ಒಂದು ಸಾಮಾಜಿಕ ಜವಾಬ್ದಾರಿಯನ್ನಾಗಿ ಉತ್ತೇಜಿಸುವ ಮಾಹೆಯ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.

*ನೋಂದಣಿ ವಿವರಗಳು:* ವಿದ್ಯಾರ್ಥಿಗಳು, ಕಾರ್ಪೊರೇಟ್ ಉದ್ಯೋಗಿಗಳು, ಫಿಟ್‌ನೆಸ್ ಆಸಕ್ತರು ಸೇರಿದಂತೆ ಮ್ಯಾರಥಾನ್‌ ಓಡುವ ಆಸಕ್ತಿಯಿರುವ ಎಲ್ಲರೂ ಈ ಕೂಡಲೇ ನೋಂದಾಯಿಸಿಕೊಳ್ಳಬಹುದು. ಜನವರಿ 15, 2026 ನೋಂದಣಿಗೆ ಕಡೆಯ ದಿನ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.mahethon.in/

Previous Post

ಸುಪ್ರೀಂ ಕೋರ್ಟ್’ನಲ್ಲಿ ‘ಕ್ಲರ್ಕ್ ಹುದ್ದೆ’ಗಳಿಗೆ ಅಧಿಸೂಚನೆ ಬಿಡುಗಡೆ.!

Next Post

Manglore : ಕದ್ರಿ ಮೂಲದ ವ್ಯಕ್ತಿ ನಾಪತ್ತೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
Manglore : ಕದ್ರಿ ಮೂಲದ ವ್ಯಕ್ತಿ ನಾಪತ್ತೆ

Manglore : ಕದ್ರಿ ಮೂಲದ ವ್ಯಕ್ತಿ ನಾಪತ್ತೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರಿರಂಗನ್ ವರದಿ ಕುರಿತು ಹೆಬ್ರಿಯಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ

ಕಸ್ತೂರಿರಂಗನ್ ವರದಿ ಕುರಿತು ಹೆಬ್ರಿಯಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ

19/09/2026
ಚೌತಿ ಸಂದರ್ಭದಲ್ಲಿ ಭಾವೈಕ್ಯತೆ ಮೆರೆದ ಅಂಗಡಿ ಮಾಲೀಕರ ಒಕ್ಕೂಟ

ಚೌತಿ ಸಂದರ್ಭದಲ್ಲಿ ಭಾವೈಕ್ಯತೆ ಮೆರೆದ ಅಂಗಡಿ ಮಾಲೀಕರ ಒಕ್ಕೂಟ

19/09/2026
ಗಣೇಶೋತ್ಸವ ಮೆರವಣಿಗೆಯಲ್ಲಿ ಭಾವೈಕ್ಯತೆ ಮೆರೆದ ಪೆರಿಹೌಸ್ ಫ್ಯಾಮಿಲಿ: ಭಕ್ತರಿಗೆ ತಂಪು ಪಾನೀಯ, ಸಿಹಿತಿಂಡಿ ವಿತರಿಸಿದ ಮುಸ್ಲಿಂ ಬಾಂಧವರು

ಗಣೇಶೋತ್ಸವ ಮೆರವಣಿಗೆಯಲ್ಲಿ ಭಾವೈಕ್ಯತೆ ಮೆರೆದ ಪೆರಿಹೌಸ್ ಫ್ಯಾಮಿಲಿ: ಭಕ್ತರಿಗೆ ತಂಪು ಪಾನೀಯ, ಸಿಹಿತಿಂಡಿ ವಿತರಿಸಿದ ಮುಸ್ಲಿಂ ಬಾಂಧವರು

19/09/2026
ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

19/09/2026

Recent News

imunify-bot-check