ಬೆಂಗಳೂರು: ಜನವರಿ.20: ಮಂತ್ರಾಲಯಕ್ಕೆ ತೆರಳುವ ಭಕ್ತರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದೆ.
2 ದಿನಗಳ ಈ ಪ್ಯಾಕೇಜ್ ಮೂಲಕ ಪ್ರಯಾಣಿಕರು ರಾಯರ ಸುಲಭ ದರ್ಶನದ ಜೊತೆ ಸ್ಥಳೀಯ ಪುಣ್ಯಕ್ಷೇತ್ರಗಳನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ರಾಯರ ದರ್ಶನಕ್ಕೆ ವಿಶೇಷ ಪ್ಯಾಕೇಜ್
ಕರ್ನಾಟಕದ ಗಡಿ, ಆಂಧ್ರಪ್ರದೇಶದ ಭಾಗವಾಗಿರುವ ಮಂತ್ರಾಲಯಕ್ಕೆ ರಾಜ್ಯದಿಂದ ಹಲವು ಭಕ್ತರು ಭೇಟಿ ನೀಡ್ತಾರೆ. ರಾಜ್ಯದ ಭಕ್ತರಿಗೆ ಅನುಕೂಲವಾಗಲೆಂದೇ ಕೆಎಸ್‌ಟಿಡಿಸಿ ವಿಶೇಷ ಪ್ಯಾಕೇಜ್ ಮೂಲಕ ರಾಘವೇಂದ್ರ ಸ್ವಾಮಿ ದರ್ಶನವನ್ನ ಸುಲಭಗೊಳಿಸುತ್ತಿದೆ.
ಇದು 2 ದಿನಗಳ ಪ್ಯಾಕೇಜ್ ಆಗಿದ್ದು, ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ರಾಯರ ದರ್ಶನದ ಜೊತೆಗೆ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೂ ಹೋಗಿ ಬರಬಹುದಾಗಿದೆ.
ಪ್ರಯಾಣದ ಕಂಪ್ಲೀಟ್ ವಿವರ
KSTDC ಅಧಿಕೃತ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ ಬುಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್ ಇರಲಿದೆ.
ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ಬಸ್ ನಿರ್ಗಮಿಸಲಿದೆ
ದಿನ 2: ಬೆಳಿಗ್ಗೆ 4.30ಕ್ಕೆ ಮಂತ್ರಾಯಲ ತಲುಪಲಿದೆಪ್ರಯಾಣಿಕರು ರೆಸ್ಟ್ ಮಾಡಿ ಬೆಳಗ್ಗೆ 6.00 ಗಂಟೆಯೊಳಗೆ ದರ್ಶನಕ್ಕೆ ರೆಡಿಯಾಗಬೇಕು
ಬೆಳಿಗ್ಗೆ 6.30 – 10.00 ಯೊಳಗೆ ರಾಘವೇಂದ್ರ ಸ್ವಾಮಿಯ ದರ್ಶನ ಆಗಲಿದೆ
ಬೆಳಿಗ್ಗೆ 11.00 – ಮಧ್ಯಾಹ್ನ 12 ಪಂಚಮುಖಿ ಆಂಜನೇಯ ದೇವಸ್ಥಾನಕ್ಕೂ ಭೇಟಿ
ಮಧ್ಯಾಹ್ನ 1.00 – 2.00 ದಾರಿಯಲ್ಲಿ ಊಟ ಇರಲಿದೆ
ರಾತ್ರಿ 9.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ಬಸ್ ತಲುಪಲಿದೆ.
ಟಿಕೆಟ್ ಬೆಲೆ :ಕೆಎಸ್ಟಿಡಿಸಿಯ ಈ ವಿಶೇಷ ಪ್ಯಾಕೇಜ್ನಲ್ಲಿ ಒಬ್ಬ ಪ್ರಯಾಣಿಕರಿಗೆ 2780 ರೂಪಾಯಿ ಇರಲಿದೆ. ಜತೆಗೆ ಮರುಪಾವತಿ ಸೌಲಭ್ಯ ಕೂಡ ಇದೆ. 48 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದ್ರೆ – 10%, 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದ್ರೆ – 25% ಕಡಿತಗೊಳಿಸಲಾಗಿದೆ. 24 ಗಂಟೆಗಳ ಒಳಗೆ ಟಿಕೆಟ್ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ.
ಟಿಕೆಟ್ ಬುಕ್ ಮಾಡುವ ವಿಧಾನ: KSTDC ಅಧಿಕೃತ ವೆಬ್ ಸೈಟ್: https://kstdc.co/tour_packages/mysuru-ooty-kodaikanal/ ಮೂಲಕ ಟಿಕೆಟ್ ಬುಕ್ ಮಾಡಬಹುದು ಹೆಚ್ಚಿನ ಮಾಹಿತಿಗೆ: 804 334 4334 ಕರೆ ಮಾಡಿ ಪ್ಯಾಕೇಜ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.






