ಉಡುಪಿ, ಜನವರಿ.20:ಉಡುಪಿಯ ಬೀಡಿನಗುಡ್ಡೆಯಲ್ಲಿ ತಾಯಿ ಬೈದ ಕಾರಣಕ್ಕೆ ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿ 19ರಂದು ಬೆಳಗ್ಗೆ ನಡೆದಿದೆ.
ಉತ್ತರ ಕರ್ನಾಟಕ ಮೂಲದ ಉಡುಪಿ ಬೀಡಿನಗುಡ್ಡೆ ನಿವಾಸಿ ಗಂಗಮ್ಮ ಎಂಬವರ ಮಗಳು ಭರ್ಮವ್ವ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ
ಈಕೆ ತನ್ನ ಕಾಲು ಗೆಜ್ಜೆ ಕಳೆದು ಹೋಗಿದೆ ಎಂದು ತಾಯಿಗೆ ಕರೆ ಮಾಡಿ ತಿಳಿಸಿದ್ದು, ಅದಕ್ಕೆ ತಾಯಿ ಬೈದಿದ್ದಾರೆನ್ನಲಾಗಿದೆ. ಇದೇ ಚಿಂತೆಯಲ್ಲಿ ಮನ ನೊಂದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾ ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ ಸಾಯಲು ನೂರು ಮಾರ್ಗವಿದರೆ ಬದುಕಲು ಸಾವಿರ ಮಾರ್ಗವಿದೆ” ಎಂಬ ಸತ್ಯವನ್ನು ಜನರು ಅದರಲ್ಲೂ ಯುವಜನರು ಅರ್ಥಮಾಡಿಕೊಳ್ಳಬೇಕು. ಬದುಕಿ, ಸಾಧಿಸಿ ತೋರಿಸಬೇಕಾದ ಹೊತ್ತಲಿ, ನೋವಿಗಾಗಿ ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು.






