ಉಡುಪಿ:ಜನವರಿ 10 :ಉಡುಪಿ ಕಡೆಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಬೈಕ್ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ.10ರಂದು ಮುಂಜಾನೆ ವೇಳೆ 3ಗಂಟೆ ಸುಮಾರಿಗೆ ಲಕ್ಷ್ಮೀಂದ್ರ ನಗರದ ಸುಧಾ ಫನಿರ್ಚರ್ ಎದುರು ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ನಡೆದಿದೆ.
ಮೃತರನ್ನು ಕುಂಜಿಬೆಟ್ಟು ಬುಡ್ನಾರ್ ರಸ್ತೆ ನಿವಾಸಿ ಪ್ರವೀಣ್ ಶೆಟ್ಟಿ(36) ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಇವರ ವಿವಾಹವಾಗಿರುವುದಾಗಿ ತಿಳಿದು ಬಂದಿದೆ.ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






