ಉಡುಪಿ :ಜನವರಿ 09:ಸುರಕ್ಷತಾ ಮಾಸಾಚರಣೆ ಮತ್ತು ಜಿಲ್ಲಾ ಆಡಳಿತ ವತಿಯಿಂದ 6ಚಕ್ರ ಮತ್ತು ಅದಕ್ಕೂ ಹೆಚ್ಚು ಚಕ್ರ ಹೊಂದಿರುವ ಸರಕು ವಾಹನಗಳು ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ ಆದ್ದೇಶಿಸಿರುವ ಆದೇಶಕ್ಕೆ ಅನುಗುಣವಾಗಿ ಕಾರ್ಕಳ ಗ್ರಾಮಾಂತರ ಠಾಣಾ ವತಿಯಿಂದ ಠಾಣಾ ವ್ಯಾಪ್ತಿಯ ನಿಟ್ಟೆ ಬೆಲ್ಮನ್ ಜಾರಿಗೆ ಕಟ್ಟೆ ಕಡೆಗಳಲ್ಲಿ ಲಾರಿ ಮತ್ತು ಬಸ್ ಚಾಲಕರಿಗೆ ಸಂಚಾರಿ ನಿಯಮಗಳು ಮತ್ತು ಸ್ಪೀಡ್ ಗವರ್ನರ್ ಅಳವಡಿಸುವಂತೆ ಕರಪತ್ರ ಗಳನ್ನು ನೀಡಿ ವಾಹನಗಳ ಚಾಲಕರಿಗೆ ಅರಿವು ಮೂಡಿಸಲಾಯಿತು.





