ಉಡುಪಿ:ಜನವರಿ 10:ಜೆಸಿಐ ದೊಡ್ಡನಗುಡ್ಡೆ ಪ್ರಕೃತಿ ಘಟಕದ 7 ನೇ ವರ್ಷದ ಯುವ ಸಾರಥಿಯಾಗಿ ಉಡುಪಿ ಜಿಲ್ಲಾ ಗ್ರಾಮೀಣಾ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಕುಂದಾಪುರ ತಾಲೂಕು ಇದರ ಪ್ರಬಂಧಕರು ಆಗಿರುವ ಜೆಸಿ ಹೆಚ್ ಜಿ ಎಫ್ ಭರತ್ ಕುಮಾರ್ ಅವರು ಹಾಗೂ ನೂತನ ಕಾರ್ಯದರ್ಶಿಯಾಗಿ ಇನ್ನೋರ್ವ ಯುವ ನಾಯಕ ಮಣಿಪಾಲ್ ಅಕಾಡೆಮಿ ಯಲ್ಲಿ ಪೀ ಹೆಚ್ ಡಿ ವ್ಯಾಸಂಗ ಮಾಡುತ್ತಿರುವ ಜೆಸಿ ವಿಘ್ನೇಶ್ ಇವರೋನ್ನೊಳಗೊಂಡ ಅಧಿಕಾರಿಗಳ ನೂತನ ತಂಡದ ಪದಪ್ರಧಾನ ಸಮಾರಂಭವು ಇದೆ ಬರುವ ಫೆಬ್ರವರಿ ತಿಂಗಳ 04/02/2026 ರ ಬುಧವಾರ ಸಂಜೆ 6 ರಿಂದ ಉಡುಪಿಯ ಪುರ ಭವನದ (ಟೌನ್ ಹಾಲ್)ಮಿನಿ ಹಾಲ್ ನಲ್ಲಿ ನಡೆಯಲಿದೆ ಎಂದು ಘಟಕದ ಸ್ಥಾಪಕ ಮತ್ತು ವಲಯ ತರಬೇತು ದಾರ, ವಲಯ ಹದಿನೈದರ ಪೂರ್ವ ವಲಯ ಅಧಿಕಾರಿ ಘಟಕದ ತರಬೇತು ಉಪಾಧ್ಯಕ್ಷ ಜೇ ಎಫ್ ಡಿ ಎಂ ಎನ್ ನಾಯಕ್ ಅವರು ಮಾಹಿತಿ ನೀಡಿದ್ದಾರೆ.
ಈ ಪದಪ್ರದಾನ ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ವಲಯ ಹದಿನೈದರ 2026ರ ನೂತನ ವಲಯಾಧ್ಯಕ್ಷರಾದ ಜೆ ಎಫ್ ಎಫ್ ಸಂತೋಷ ಶೆಟ್ಟಿ ಹಾಗೂ ನೂತನ ವಲಯದ ರಿಜಿಯನ್ ಸಿ ಯ “ಸೌಪರ್ಣಿಕಾ” ತಂಡದ ನಾಯಕಿ ಉಪಾಧ್ಯಕ್ಷೆ ಡಾ .ಜೆಸಿ ಹರಿಣಾಕ್ಷಿ ಕರ್ಕೇರಾ, ಮೊದಲಾದ ಜೆಸಿ ಹಾಗೂ ಜೆಸಿಯೇತರ ಗಣ್ಯರು ಹಾಗೂ ಘಟಕದ ನಿಕಟ ಪೂರ್ವ ಅಧ್ಯಕ್ಷರು ಮತ್ತು ಪೂರ್ವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ
ಎಲ್ಲರನ್ನೂ ಸ್ವಾಗತ ಬಯಸುವ ಘಟಕದ ಅಧ್ಯಕ್ಷರು, ಪೂರ್ವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಜೆಸಿಐ ದೊಡ್ಡನಗುಡ್ಡೆ ಪ್ರಕೃತಿ ಘಟಕ ಉಡುಪಿ






