Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಶ್ರೀ ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ: ವೃಂದಾವನದಲ್ಲಿ ವಿಶೇಷ ಪೂಜೆ…!

Dhrishya News by Dhrishya News
04/03/2026
in ಕರಾವಳಿ, ಸುದ್ದಿಗಳು
0
ಶ್ರೀ ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ: ವೃಂದಾವನದಲ್ಲಿ ವಿಶೇಷ ಪೂಜೆ…!
0
SHARES
5
VIEWS
Share on FacebookShare on Twitter

ಉಡುಪಿ, ಮಾ. 04:ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಗುರುವರ್ಯರಾದ ಅಭಿನವ ಋಷ್ಯಶೃಂಗ, ಅಕ್ಷರಕೋಟಿ ಕೃಷ್ಣಮಂತ್ರೋಪಾಸಕ, ಯತಿಕುಲ ಚಕ್ರವರ್ತಿ, ತಪೋಚಕ್ರವರ್ತಿ ಮುಂತಾದ ಅನೇಕ ಬಿರುದಗಳಿಂದ ಅಲಂಕರಿಸಲ್ಪಟ್ಟ ಶತಾಯುಷಿ ಅನಂತಶ್ರೀ ವಿಭೂಷಿತ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತಿಭಾವಪೂರ್ಣವಾಗಿ ಆಚರಿಸಲಾಯಿತು.

ಈ ಪವಿತ್ರ ಸಂದರ್ಭದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಅವರ ವೃಂದಾವನದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಶೀರೂರು ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿ ಗುರುಸ್ಮರಣೆಯಲ್ಲಿ ತೊಡಗಿದರು. ವೇದಘೋಷ, ಭಜನ, ಪೂಜಾ ವಿಧಿವಿಧಾನಗಳೊಂದಿಗೆ ಆರಾಧನಾ ಕಾರ್ಯಕ್ರಮವು ನೆರವೇರಿತು.

ಶ್ರೀಮದಾಚಾರ್ಯರ ಸನ್ಯಾಸಿ ಶಿಷ್ಯವರ್ಗದಲ್ಲಿ ದಿಟ್ಟ ವ್ಯಕ್ತಿತ್ವ ಮತ್ತು ಅಪಾರ ಜ್ಞಾನದಿಂದ ಖ್ಯಾತರಾದ ಶ್ರೀಮದುಪೇಂದ್ರತೀರ್ಥರ ಪೀಠವಾದ ಶ್ರೀ ಪುತ್ತಿಗೆ ಮಠದ ಯತಿಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದ ಮಹಾತಪಸ್ವಿ ಶ್ರೀ ಸುಧೀಂದ್ರ ತೀರ್ಥರು ಉಡುಪಿಯ ಅಷ್ಟಮಠಗಳ ಯತಿಸಂತತಿಯಲ್ಲಿ ಅಪೂರ್ವ ಕೀರ್ತಿಯನ್ನು ಗಳಿಸಿದ್ದರು. ಶಾಪಾನುಗ್ರಹ ಸಮರ್ಥರಾದ ಅವರು, ಶ್ರೀಕೃಷ್ಣ ದೇವರಿಗೆ ಸನಕಾದಿಮುನಿಗಳು ಪೂಜಿಸುವ ದಿವ್ಯ ದೃಶ್ಯವನ್ನು ಸಾಕ್ಷಾತ್ಕಾರವಾಗಿ ಕಂಡು, ಅವರ ಅನುಗ್ರಹದಿಂದ ಶ್ರೀಕೃಷ್ಣನ ಸಾಕ್ಷಾತ್ಕಾರವನ್ನು ಪಡೆದ ಮಹಾನುಭಾವರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಶತಾಯುಷಿಯಾಗಿ ನಾಲ್ಕು ಬಾರಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿದ ವಿರಳ ಮಹನೀಯರಾಗಿದ್ದ ಅವರು, ವೃಂದಾವನಸ್ಥರಾದ ಬಳಿಕವೂ ಭಕ್ತರ ಆಶೀರ್ವಾದಕರೆಂದು ನಂಬಲ್ಪಟ್ಟಿದ್ದಾರೆ. ಋಷ್ಯಶೃಂಗ ಅವತಾರವೆಂದು ಪ್ರಸಿದ್ಧರಾದ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಆರಾಧನಾ ಪರ್ವದ ಅಂಗವಾಗಿ, ಅವರ ಅಂತರ್ಯಾಮಿಯಾದ ಪ್ರಾಣಪತಿ ಭೈಷ್ಮೀಸತ್ಯಾಸಮೇತ ವೀರವಿಠಲಾಭಿನ್ನ ರೂಪ್ಯಪೀಠಪುರಾಧೀಶನ ಚರಣಕಮಲಗಳಿಗೆ ಭಕ್ತರು ಅನಂತ ಪ್ರಣಾಮಗಳನ್ನು ಸಲ್ಲಿಸಿದರು.

Previous Post

ತೊಕ್ಕೊಟ್ಟು ಮೇಲ್ಸೇತುವೆ ಬಳಿ ರೈಲು ಡಿಕ್ಕಿ: 47 ವರ್ಷದ ವ್ಯಕ್ತಿ ಸಾವು…!

Next Post

ಇಲಿ ಪಾಷಾಣ ಸೇವನೆ; ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಲಿ ಪಾಷಾಣ ಸೇವನೆ;  ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ…!

ಇಲಿ ಪಾಷಾಣ ಸೇವನೆ; ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

02/10/2026
ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

02/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026

Recent News

imunify-bot-check