ಮಣಿಪಾಲ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊರಗ ಯುವಜನರ ನೇರ ನೇಮಕಾತಿಗಾಗಿ ಅಹೋರಾತ್ರಿ ಧರಣಿಯು 22ನೇ ದಿನದತ್ತ ಸಾಗುತಿದ್ದು ಸ್ಥಳಕ್ಕೆ ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಮತ್ತು ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ರೇಷ್ಮಾ ಉದಯಕುಮಾರ್ ಶೆಟ್ಟಿ ಮತ್ತು ಶಿಲ್ಪಾ ಉಡುಪಿ ಪ್ರತ್ಯೇಕವಾಗಿ ಭೇಟಿ ನೀಡಿ ಸಮುದಾಯದ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕ ಕೆ. ಪುತ್ರನ್ ಹೆಬ್ರಿ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಭಾರತಿ ಎಲ್ಲೂರು, ಕುಮಾರ್ ದಾಸ್ ಹಾಲಾಡಿ, ನರಸಿಂಹ ಪೆರ್ಡೂರು, ಕೊಂಗಲ ಅಡ್ವೆ, ಪ್ರೀತಿ ಹೆಬ್ರಿ, ಪುಷ್ಪ ಹೆಬ್ರಿ, ಶಿವರಾಜ್ ಬಂಡಸಾಲೆ, ಸಂಧ್ಯಾ ಅದಮಾರು, ಸುನೀತಾ ಅಡ್ವೇ, ಶೀನಾ ಬೆಳ್ಮಣ್ ಮತ್ತು ಇತರರು ಉಪಸ್ಥಿತರಿದ್ದರು,






